ಸಾರಾಂಶ
ಬೀರೂರು, ಸರ್ಕಾರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿಯೂ ಶೇ.18 ರಷ್ಟು ಜಿಎಸ್ಟಿ ಒಳಪಡಿಸಿರುವುದು ನಮಗೆ ನೋವು ತಂದಿದೆ ಎಂದು ಇಂದು ನಡೆದ ಪುರಸಭೆ ವಾರ್ಷಿಕ ಬಾಬ್ತುಗಳ ಬಹಿರಂಗ ಹರಾಜು ಇಸ್ತಿಯಾರ್ ನಲ್ಲಿ ಬಿಡ್ ದಾರರು ಆಕ್ರೋಶ ವ್ಯಕ್ತಡಿಸಿದರು.
ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ವಾರ್ಷಿಕ ಬಾಬುಗಳ ಬಹಿರಂಗ ಹರಾಜುಕನ್ನಡಪ್ರಭ ವಾರ್ತೆ, ಬೀರೂರು
ಸರ್ಕಾರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿಯೂ ಶೇ.18 ರಷ್ಟು ಜಿಎಸ್ಟಿ ಒಳಪಡಿಸಿರುವುದು ನಮಗೆ ನೋವು ತಂದಿದೆ ಎಂದು ಇಂದು ನಡೆದ ಪುರಸಭೆ ವಾರ್ಷಿಕ ಬಾಬ್ತುಗಳ ಬಹಿರಂಗ ಹರಾಜು ಇಸ್ತಿಯಾರ್ ನಲ್ಲಿ ಬಿಡ್ ದಾರರು ಆಕ್ರೋಶ ವ್ಯಕ್ತಡಿಸಿದರು.ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ವಾರ್ಷಿಕ ಬಾಬುಗಳ ಬಹಿರಂಗ ಹರಾಜು ಇಸ್ತಿಯಾರ್ ನಲ್ಲಿ ವಾರದ ಸಂತೆಯಲ್ಲಿನ ಸುಂಕ ವಸೂಲಾತಿ, ಪುರಸಭಾ ವ್ಯಾಪ್ತಿಯಲ್ಲಿ ದಿನವಹಿ ಹಂಗಾಮಿ ನೆಲಬಾಡಿಗೆ ವಸೂಲಿ ಮಾಡುವ ಹಕ್ಕು ಹರಾಜಿನಲ್ಲಿ ಪಾಲ್ಗೊಂಡಿದ್ದ ಬಿಡ್ ದಾರ ಪುನೀತ್ ಮಾತನಾಡಿ, ಈ ಹಿಂದೆ ಪುರಸಭೆ ಯಾವುದೇ ಹರಾಜಿನಲ್ಲಿ ಜಿಎಸ್ಟಿ ಇರಲಿಲ್ಲ, ಆದರೆ ಈ ಬಾರಿ ಇದು ಬಂದಿರುವುದರಿಂದ ಬಿಡ್ ಮಾಡಲು ಆಗುತ್ತಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಜಿಎಸ್ಟಿ ಮೊತ್ತ 70 ಸಾವಿರ ಹೆಚ್ಚಾಗುತ್ತಿದೆ. ಬಿಡ್ ಮಾಡಿದವರು ಪುರಸಭೆ ಮೊದಲೆ ಹಣ ಕಟ್ಟಬೇಕು. ಪೌರಾಡಳಿತ ಇದನ್ನು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ನಾವು ಯಾರು ಹರಾಜಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಸರ್ಕಾರದ ಆದೇಶದಂತೆ ನಾವು ಕೆಲಸ ಮಾಡಲೇಬೇಕಿದೆ. ನಿಮಗೆ ಅನ್ಯಾಯವಾಗುವುದಾದರೆ ಬಿಡ್ ಮಾಡುವುದು ಬೇಡಾ, ಜಿಲ್ಲಾಧಿಕಾರಿಗಳ ಹಂತದಲ್ಲಿ ಪತ್ರ ವ್ಯವಹಾರ ಮಾಡಿ ಮುಂದೂಡಲಾಗುವುದು ಎಂದು ಸಮಜಾಯಿಷಿ ನೀಡಿ ತದನಂತರ ಬಿಡ್ ದಾರರ ಮನವೊಲಿಸಿ ಹರಾಜು ಪ್ರಕ್ರಿಯೆಗೆ ಮುಂದುವರಿಸಿದರು. ಈ ಹಂತದಲ್ಲಿ ಮಾತನಾಡಿದ ನಾಗರಿಕ ಉಮೇಶ್, ಸಂತೆ ಸುಂಕ ವಸೂಲಿಯಲ್ಲಿ ಬಿಡ್ ಮಾಡಿದವರು ರೈತರು ಮತ್ತು ವರ್ತಕ ರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪಗಳಿವೆ. ಪುರಸಭೆಯವರು ದರ ನಿಗದಿ ಮಾಡಬೇಕು ಜೊತೆಗೆ ದರ ನಿಗದಿ ನಾಮಫಲಕವನ್ನು ಸಂತೆ ಕೆಲವಡಿ ಅಳವಡಿಸಿ ಹರಾಜು ಮುಂದುವರಿಸಿ ಎಂದು ತಾಕೀತು ಮಾಡಿದರು. ಪುರಸಭೆ ಅಧ್ಯಕ್ಷೆ ವನಿತಮಧುಬಾವಿಮನೆ ಸಂತೆಯಲ್ಲಿ ಅಂಗಡಿ ಹಾಕುವ ವರ್ತಕರಿಗೆ ₹30 ಇತ್ತು ಅದನ್ನು ಈಬಾರಿ ಸಣ್ಣ ಅಂಗಡಿಗೆ ₹30, ದೊಡ್ಡ ಅಂಗಡಿಗೆ ₹50 ದರ ನಿಗಧಿಪಡಿಸಿದರು.ಸಂತೆ ಸುಂಕ ವಸೂಲಿಗೆ 5ಜನ ಬಿಡ್ ದಾರರು ಪಾಲ್ಗೊಂಡು ಕೊನೆಗೆ ಕಡೂರಿನ ಕೆ.ಎಸ್. ನಾಗರಾಜ್ 3, 89,400 ರುಗೆ ಅಂತಿಮ ಬಿಡ್ ಪಡೆದರೆ, ಪುರಸಭಾ ವ್ಯಾಪ್ತಿಯಲ್ಲಿ ದಿನವಹಿ ಹಂಗಾಮಿ ನೆಲಬಾಡಿಗೆ ವಸೂಲಿ ಹರಾಜಿನಲ್ಲಿ 5 ಜನ ಬಿಡ್ ದಾರರು ಪಾಲ್ಗೊಂಡಿದ್ದರು. ದಿನವಹಿ ಬಾಡಿಗೆಯನ್ನು ಪುರಸಭೆ ₹15-20ಕ್ಕೆ ನಿಗದಿಪಡಿಸಿ, ಭಾರಿ ಪೈಪೋಟಿಗಳ ನಡುವೆ ಕಡೂರಿನ ಕುಮಾರ್ ಎನ್ನುವವರು ₹3.56 ಲಕ್ಷದ ಬಿಡ್ ತಮ್ಮದಾಗಿಸಿಕೊಂಡರು.3 ಮಾಂಸದ ಮಳಿಗೆಗಳ ಹರಾಜು ಮತ್ತು ಖಾಸಗಿ ಬಸ್ ನಿಲ್ದಾಣದ ಸುಂಕ ವಸೂಲಿಗೆ ಯಾವ ಬಿಡ್ ದಾರರು ಪಾಲ್ಗೊಳ್ಳದ ಹಿನ್ನಲೆಯಲ್ಲಿ ಪುರಸಭೆ ಹರಾಜನ್ನು ಮುಂದೂಡಲಾಯಿತು.ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ರಾಜು, ಲೋಕೇಶಪ್ಪ, ಬಿ.ಆರ್.ಮೋಹನ್ ಕುಮಾರ್, ಬಿಡ್ ದಾರರಾದ ಉಪ್ಪಿನ ಮಂಜಣ್ಣ, ಪ್ರವೀಣ್, ಭರತ್, ನಾಗರಾಜ್, ಸೊಪ್ಪು ವಿನಾಯಕ್, ಸೊಸೈಟಿ ಮೋಹನ್, ಬಾವಿಮನೆ ಮಧು, ರುದ್ರೇಶ್, ಮಲ್ಲಿಕಾರ್ಜುನ್ ಹಾಗೂ ಪುರಸಭೆ ಸಿಬ್ಬಂದಿ ದೀಪಕ್, ಶಿಲ್ಪ , ಗಿರಿರಾಜ್, ವೈ.ಎಂ.ಲಕ್ಷ್ಮಣ್ ಮತ್ತಿತರಿದ್ದರು.24 ಬೀರೂರು 2ಬೀರೂರಿನ ಪುರಸಭೆ ಸಭಾಂಗಣದಲ್ಲಿ ಸೋಮವಾರ ಪುರಸಭೆ ಅಧ್ಯಕ್ಷೆ ವನಿತಾ ಮಧುಬಾವಿಮನೆ ಅಧ್ಯಕ್ಷತೆಯಲ್ಲಿ ವಾರ್ಷಿಕ ಬಾಬುಗಳ ಬಹಿರಂಗ ಹರಾಜು ನಡೆಯಿತು. ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಇದ್ದರು.