೧೮ಲಕ್ಷ ಅಭಿವೃದ್ಧಿ ಕಾಮಗಾರಿಗೆ ಪರಿಷತ್ ಶಾಸಕ ಗುತ್ತೇದಾರ ಚಾಲನೆ

| Published : Feb 06 2025, 12:16 AM IST

೧೮ಲಕ್ಷ ಅಭಿವೃದ್ಧಿ ಕಾಮಗಾರಿಗೆ ಪರಿಷತ್ ಶಾಸಕ ಗುತ್ತೇದಾರ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

18 Lakh development work, Parishad MLA contractor drive

-ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿ.ಪ ಸದಸ್ಯ ಜಗದೇವ ಗುತ್ತೇದಾರ ಗುದ್ದಲಿ ಪೂಜೆ

---

ಕನ್ನಡಪ್ರಭ ವಾರ್ತೆ ಕಾಳಗಿ

ಭರತನೂರ ಗ್ರಾಮದಲ್ಲಿ ೨೦೨೪-೨೫ ಸಾಲಿನ ವಿಧಾನ ಪರಿಷತ್ ಸದಸ್ಯರ ಅನುದಾನದಡಿ ಭರತನೂರ ಗ್ರಾಮದ ಮುಖ್ಯ ರಸ್ತೆಯಿಂದ ಚಿಕ್ಕಗುರುನಂಜೇಶ್ವರ ಮಠದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಭರತನೂರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಯುವ ಮುಖಂಡ ಗೋವಿಂದರೆಡ್ಡಿ ತುಮಕುಂಟಿ ರಾಜಾಪೂರ ಭೂಮಿ ನೀಡಿದ್ದು ಶ್ಲಾಘನೀಯ. ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಭರತನೂರ ಗ್ರಾಮದ ಮುಖ್ಯ ರಸ್ತೆಯಿಂದ ಚಿಕ್ಕಗುರುನಂಜೇಶ್ವರ ಮಠದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ಪರಿಶಿಷ್ಟ ಬಡಾವಣೆಯಲ್ಲಿ ೮ ಲಕ್ಷ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಭರತನೂರ ಚಿಕ್ಕಗುರುನಂಜೇಶ್ವರ ಸ್ವಾಮಿಗಳು, ಮಾಜಿ ಜಿ.ಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಗೋವಿಂದರೆಡ್ಡಿ ತುಮಕುಂಟಿ, ಕೆಆರ್‌ಐಡಿಎಲ್ ಎಇಇ ಅರಣಕುಮಾರ ಬಿರಾದಾರ, ಕಾಂಗ್ರೆಸ್‌ ನಗರ ಘಟಕ ಅಧ್ಯಕ್ಷ ವೇದಪ್ರಕಾಶ ಮೊಟಗಿ, ಕಾಂಗ್ರೆಸ್‌ ವಕ್ತಾರ ರಾಘವೇಂದ್ರ ಗುತ್ತೇದಾರ, ಶರಣಗೌಡ ಪೊಲೀಸ ಪಾಟೀಲ್, ಶಿವಶರಣಪ್ಪ ಕಮಲಾಪೂರ, ವಿಶ್ವನಾಥ ವನಮಾಲಿ, ಸಂತೋಷ ನರನಾಳ, ನೀಲಕಂಠ ಮಡಿವಾಳ, ಪ್ರಕಾಶ ಶೆಗಾಂವಕರ್, ಪ್ರಕಾಶ ಯಲಾಲಕರ್, ವಿಠ್ಠಲ್ ಶೆಗಾಂವಕರ್, ಶಾಮರಾವ ಪಾಟೀಲ್, ರವಿದಾಸ ಪತಂಗೆ, ಮಲ್ಲಿಕಾರ್ಜುನ ಡೊಣ್ಣುರ, ಅವಿನಾಶ ಗುತ್ತೇದಾರ, ಸಂತೋಷ ಪತಂಗೆ, ಶಾಮರಾವ ಕಡಬೂರ ಇದ್ದರು.

----

ಫೋಟೊ: ಚಿಕ್ಕಗುರುನಂಜೇಶ್ವರ ಮಠದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಭರತನೂರ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಮಾಜಿ ಜಿ.ಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ ಇದ್ದರು.