ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ 18 ಮಾರ್ಷಲ್‌ಗಳ ನೇಮಕ

| Published : Sep 27 2025, 12:00 AM IST

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ 18 ಮಾರ್ಷಲ್‌ಗಳ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಎಂಟು ಜನ ಮಹಿಳೆಯರು ಹಾಗೂ ಹತ್ತು ಜನ ಪುರುಷ ಮಾರ್ಷಲ್‌ಗಳನ್ನು ಪಾಲಿಕೆ ಕಲಾಪ ನಿರ್ವಹಣೆಗೆ ನೇಮಿಸಿಕೊಳ್ಳಲಾಗಿದೆ.

ಧಾರವಾಡ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಕಾರ್ಯ-ಕಲಾಪಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯಲು ಮೊದಲ ಬಾರಿಗೆ ಮಾರ್ಷಲ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಇದು ರಾಜ್ಯದಲ್ಲಿಯೇ ಮಾರ್ಷಲ್‌ಗಳನ್ನು ನೇಮಕ ಮಾಡಿಕೊಂಡಿರುವ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿ ಎಂಟು ಜನ ಮಹಿಳೆಯರು ಹಾಗೂ ಹತ್ತು ಜನ ಪುರುಷ ಮಾರ್ಷಲ್‌ಗಳನ್ನು ಪಾಲಿಕೆ ಕಲಾಪ ನಿರ್ವಹಣೆಗೆ ನೇಮಿಸಿಕೊಳ್ಳಲಾಗಿದೆ. ಸುಗಮ ಕಲಾಪ ನಡೆಸಲು ಮಾರ್ಷಲ್‌ಗಳು ಅಗತ್ಯವಾಗಿ ಬೇಕು. ಪಾಲಿಕೆ ಸದಸ್ಯರಿಗೆ ಕಲಾಪದ ವೇಳೆ ಅಗತ್ಯ ದಾಖಲೆ ಪೂರೈಕೆ ಮಾಡುವುದು, ಕಲಾಪದಲ್ಲಿ ಗಲಾಟೆ ಸಂಭವಿಸಿದಾಗ ಅದನ್ನು ನಿಯಂತ್ರಿಸುವುದು, ಗಲಾಟೆ ಮಾಡುವ ಸದಸ್ಯರನ್ನು ಹೊರಗೆ ಹಾಕುವುದು ಸೇರಿದಂತೆ ಮೇಯರ್ ಮತ್ತು ಉಪ ಮೇಯರ್ ನೀಡುವ ಆದೇಶವನ್ನು ಮಾರ್ಷಲ್‌ಗಳು ಪಾಲಿಸುತ್ತಾರೆ. ರಾಜ್ಯದಲ್ಲಿ ಮಹಾನಗರ ಪಾಲಿಕೆಗೆ ಈ ರೀತಿ ಮಾರ್ಷಲ್‌ಗಳನ್ನು ಮಹಾನಗರ ಪಾಲಿಕೆಯೊಂದು ಇದೇ ಮೊದಲ ಬಾರಿಗ ನೇಮಕ ಮಾಡಿದ್ದು ವಿಶೇಷಪಾಲಿಕೆ ಅಧಿಕಾರಿಗಳಾದ ಶಂಕರಾನಂದ ಬನಶಂಕರಿ ಸೇರಿದಂತೆ ಹಿರಿಯ ಅಧಿಕಾರಿಗಳು ಮಾರ್ಷಲ್‌ಗಳಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಿದ್ದಾರೆ. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗುತ್ತವೆ. ಜನಸಮಾನ್ಯರಿಗೆ ಅಗತ್ಯವಾದ ಸೇವೆ ಪೂರೈಸಲು ಇಲ್ಲಿನ ನಿರ್ಧಾರಗಳಿಗೆ ಮಹತ್ವ ಇರುತ್ತದೆ. ಹೀಗಾಗಿ ಸುಗಮ ಕಲಾಪ ನಡೆಸಲು ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.