ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 18 ಶಿಕ್ಷಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಗದಗ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 18 ಶಿಕ್ಷಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗದಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಆಡಳಿತ) ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ, ತಾಲೂಕು ಹಂತದಿಂದ ಸ್ವೀಕೃತವಾಗಿದ್ದ 32 ಪ್ರಸ್ತಾವನೆಗಳನ್ನು ಪರಿಶೀಲಿಸಿ ಅಂತಿಮವಾಗಿ 18 ಸಾಧಕ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ತಾಲೂಕುವಾರು ವಿವರ: ಗದಗ ಗ್ರಾಮೀಣ: ಮಾಸಾಬಿ ಗುಡುಸಾಬ ಮಿರ್ಜಿ (ಸ.ಹಿ.ಪ್ರಾ. ಉರ್ದು ಶಾಲೆ, ಕಣವಿ), ಭೀಮರೆಡ್ಡಿ ಹೇಮರೆಡ್ಡಿ ಕಾಲವಾಡ (ಸ.ಹಿ.ಪ್ರಾ. ಶಾಲೆ, ಹಿರೇಹಂದಿಗೋಳ), ಚಂದ್ರಶೇಖರ ಫಕ್ಕೀರಪ್ಪ ಜೋಗಿನ (ಶ್ರೀಮತಿ ದಂಡವ್ವ ನಾಗಪ್ಪ ಯಲಿ ಸ.ಪ್ರೌಢಶಾಲೆ, ಯಲಿಶಿರೂರ).

ಗದಗ ನಗರ: ಬಿ. ವಿ. ಕುಲಕರ್ಣಿ (ಸ.ಕಿ.ಪ್ರಾ. ಕನ್ನಡ ಶಾಲೆ ನಂ-11), ನಸೀಮಾ ಹುಸೇನಸಾಬ ಜಕ್ಕಲಿ (ಸ.ಉರ್ದು ಹಿ.ಪ್ರಾ. ಶಾಲೆ ನಂ-04), ಎಂ. ಎಂ. ಮಕಾಂದಾರ (ಸ.ಉರ್ದು ಪ್ರೌಢಶಾಲೆ, ಗದಗ).

ಮುಂಡರಗಿ: ಬಸವರಾಜ ರಾಮಪ್ಪ ಹೆಬ್ಬಳ್ಳಿ (ಡಾ. ಬಸವರಾಜ ಶಿವಪ್ಪ ಮೇಟಿ ಸ.ಕಿ.ಪ್ರಾ. ಶಾಲೆ, ಹೆಸರೂರ ರಸ್ತೆ), ಅಕ್ಕಮಹಾದೇವಿ ಆರ್. ಕೊಟ್ಟೂರಶೆಟ್ಟಿ (ಸ.ಹಿ.ಪ್ರಾ. ಶಾಲೆ, ಮುಕುಂಪೂರ), ಎ. ವಿ. ಶಿವನಗೌಡರ (ಕರ್ನಾಟಕ ಪಬ್ಲಿಕ್ ಶಾಲೆ, ಡೋಣಿ).

ನರಗುಂದ: ಎಂ. ಆರ್. ಬಡಿಗೇರ (ಸ.ಕಿ.ಪ್ರಾ. ಶಾಲೆ, ಜಗಾಪುರ), ಬಿ. ಬಿ. ಮತ್ತಿಕಟ್ಟಿ (ಸ.ಹಿ.ಪ್ರಾ. ಶಾಲೆ, ಬೂದಿಹಾಳ), ಬಿ.ಕೆ. ವಗ್ಗರ್ (ಬಾಲಕಿಯರ ಸ.ಪ್ರೌಢಶಾಲೆ, ನರಗುಂದ).

ರೋಣ: ಮಂಜುನಾಥ ಎಚ್. ಕಡಿವಾಲ (ಸ.ಹಿ.ಪ್ರಾ. ಶಾಲೆ, ಹುಲ್ಲೂರ), ಮಹಾಂತೇಶ ಶ್ರೀಮಂತ ಹೊಸಮನಿ (ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆ, ರೋಣ), ಎಸ್.ವಿ. ಡಣಾಪುರ (ಶ್ರೀ ಗುರು ಅಡವಿ ಸಿದ್ದೇಶ್ವರ ಪ್ರೌಢಶಾಲೆ, ಕೊತಬಾಳ).

ಶಿರಹಟ್ಟಿ-ಲಕ್ಷ್ಮೇಶ್ವರ: ಎಂ. ಗಂಗಮ್ಮ (ಸ.ಹಿ.ಪ್ರಾ. ಶಾಲೆ, ರಣತೂರ), ಎಂ. ಎಸ್. ಕಾಳೆ (ಸ.ಹಿ.ಪ್ರಾ. ಶಾಲೆ, ಬಟ್ಟೂರ), ಬಸಪ್ಪ ತೇಲಸಂಗ (ಸ.ಪ್ರೌಢಶಾಲೆ ಆರ್ ಎಂಎಸ್ಎ ಮಜ್ಜೂರ).