ಸಾರಾಂಶ
ಕರ್ನಾಟಕದಲ್ಲಿರುವ ಹಿಂದುಳಿದ ವರ್ಗಗಳ ಏಳಿಗೆಗಾಗಿ ಕ್ರಾಂತಿವೀರ ಬ್ರಿಗೇಡ್ ಆರಂಭಿಸಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಹುಣಸಗಿ : ಕರ್ನಾಟಕದಲ್ಲಿರುವ ಹಿಂದುಳಿದ ವರ್ಗಗಳ ಏಳಿಗೆಗಾಗಿ ಕ್ರಾಂತಿವೀರ ಬ್ರಿಗೇಡ್ ಆರಂಭಿಸಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಈ ಕುರಿತು ಹುಣಸಗಿ ಪಟ್ಟಣದಲ್ಲಿ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, 19 ರಂದು ಹುಣಸಗಿಯಲ್ಲಿ ಜಿಲ್ಲಾಮಟ್ಟದ ಸಭೆಯನ್ನು ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿನ ಎಲ್ಲ ವರ್ಗಗಳಲ್ಲಿರುವ ಹಿಂದುಳಿದವರ ಅಭಿವೃದ್ಧಿಗಾಗಿ ಕ್ರಾಂತಿವೀರ ಬ್ರಿಗೇಡ್ ಅನ್ನು ಆರಂಭಿಸಲಾಗುತ್ತಿದ್ದು, ಇದರ ಅಡಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಫೆ.4ರಂದು ಶರಣರ ನಾಡು ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ರಾಜ್ಯದ ವಿವಿಧ ಮಠಗಳ 1008 ಸ್ವಾಮೀಜಿಗಳನ್ನು ಕರೆಯಿಸಿ ಅವರ ಪಾದಪೂಜೆಯನ್ನು ಕೈಗೊಳ್ಳುವ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ ನೀಡಲಾಗುತ್ತಿದೆ. ಯಾದಗಿರಿ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸಲಿದ್ದು, ಅದಕ್ಕಾಗಿ ಅಂದು ನಡೆಯುವ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಾಳಳ್ಳಿಯ ಕೆಂಚ ರಾಯಪ್ಪ ಮುತ್ಯಾ, ಅಗತೀರ್ಥ ಸರೂರು ಮಠದ ಶಾಂತಮಯ ಸ್ವಾಮೀಜಿ, ಬಂಡೆಪ್ಪನಹಳ್ಳಿಯ ನಿಂಗಣ್ಣ ಮುತ್ಯಾ, ದೇವರಾಜ್ ನಾಯಕ್ ಮಲ್ಲೇಶಿ ಪಾಟೀಲ್ ನಾಗರಾಳ, ಭೀಮರಾಯ ಗೌಡ ಮಂಜುಳಾಗೌಡ, ಬೋಜಪ್ಪ ಮಲ್ಲು, ಪರಮಣ್ಣ ನೀಲಗಲ್, ನಿಂಗು ಪಾಟೀಲ್, ಬಸವರಾಜ್ ಮೇಟಿ ಸೇರಿದಂತೆ ಇತರರಿದ್ದರು.