ಜಿಬಿಎ ವ್ಯಾಪ್ತಿಯ ಎಲ್ಲ ಐದು ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗಿನ ಜಾವದವರೆಗೆ 2,06,564 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಿಬಿಎ ವ್ಯಾಪ್ತಿಯ ಎಲ್ಲ ಐದು ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗಿನ ಜಾವದವರೆಗೆ 2,06,564 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ.ಸೆ.14ರಂದು 1,86,820 ಹಾಗೂ ಸೆ.15ರಂದು 19,744 ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ. ಈ ಪೈಕಿ ಕೇಂದ್ರಪಾಲಿಕೆ 2,070, ಪೂರ್ವ 2,056, ಉತ್ತರ 575, ದಕ್ಷಿಣ 2,034 ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಯ13,009 ಸೇರಿ ಎರಡು ದಿನಗಳಲ್ಲಿ ಒಟ್ಟು 2,06,564 ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.
ಬಾಕ್ಸ್....ಯಡಿಯೂರು ಕೆರೆಯಲ್ಲಿ ನಾಳೆ ಗಣೇಶ ವಿಸರ್ಜನೆ ಸ್ಥಗಿತ
ಯಡಿಯೂರು ಕೆರೆಯ ಗಣೇಶ ಮೂರ್ತಿಗಳ ವಿಸರ್ಜನಾ ಪುಷ್ಕರಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಸೆ.18 ಮತ್ತು 22ರಂದು ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಸೇರಿರುವ ಯಡಿಯೂರು ಕೆರೆಯಲ್ಲಿ ಸೆ.14 ರಿಂದ ಸೆ.26ರವರೆಗೆ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು.ಆದರೆ, ಪ್ರಸ್ತುತ ಕೆರೆಯ ವಿಸರ್ಜನಾ ಕೊಳದ ಬಹುಪಾಲು ಭಾಗ ತುಂಬಿದ್ದು, ಮತ್ತಷ್ಟು ಗಣೇಶ ಮೂರ್ತಿಗಳ ವಿಸರ್ಜನೆಗೆ ಸ್ಥಳಾವಕಾಶ ಇಲ್ಲದಿರುವ ಕಾರಣ ಪುಷ್ಕರಣಿಯಲ್ಲಿ ತುಂಬಿರುವ ಮಣ್ಣು ಹಾಗೂ ಇತರೆ ಗಣೇಶ ಮೂರ್ತಿಗಳ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಅಲ್ಲದೆ, ಹೊಸದಾಗಿ ನೀರು ತುಂಬಿಸಿ ಸಾರ್ವಜನಿಕರಿಗೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಆದ್ದರಿಂದ ಸೆ.18 ಹಾಗೂ ಸೆ.22(ಗುರುವಾರ)ರಂದು ಪುಷ್ಕರಣಿಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಎರಡು ದಿನಗಳಂದು ವಿಸರ್ಜನೆಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.