ಸಾರಾಂಶ
ಬೆಂಗಳೂರು : ಸುಳ್ಳು ಮಾಹಿತಿ ನೀಡಿ ಅನರ್ಹರು ಪಡೆದಿದ್ದ 2.50 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡುವ ಮೂಲಕ ಸುಮಾರು 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಬಿಪಿಎಲ್‌ನಿಂದ ಕೈಬಿಡಲಾಗಿದೆ. ಈ ಬಿಪಿಎಲ್ ಕಾರ್ಡ್‌ಗಳ ಪರಿವರ್ತನೆಗೆ ಫಲಾನುಭವಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಎರಡ್ಮೂರು ತಿಂಗಳಿನಿಂದ ಅನರ್ಹರು ಪಡೆದ ಅಂತ್ಯೋದಯ, ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಕಾರ್ಯಕ್ಕೆ ಆಹಾರ ಇಲಾಖೆ ಚಾಲನೆ ನೀಡಿದ್ದು, ತೆರಿಗೆ ಇಲಾಖೆ, ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ದತ್ತಾಂಶ ಪಡೆದು, ಬಿಪಿಎಲ್ ಫಲಾನುಭವಿಗಳ ಆದಾಯ ಮೂಲಗಳನ್ನು ಪತ್ತೆ ಕಾರ್ಯಕೈಗೊಡಿದೆ. ಈ ದತ್ತಾಂಶಗಳ ಮೂಲಕ ಮನೆಯಲ್ಲಿ ಯಾರಾದರೊಬ್ಬರು ತೆರಿಗೆ ಪಾವತಿದಾರರಾಗಿದ್ದರೆ, ಅಂಥವರಿಗೆ ನೋಟಿಸ್ ನೀಡಿ, ಇಲ್ಲವೇ ನ್ಯಾಯಬೆಲೆ ಅಂಗಡಿಗಳಿಗೆ ಅಂಟಿಸಲಾಗಿರುವ ಪಟ್ಟಿಯಲ್ಲಿ ಹೆಸರು ಪ್ರಕಟಿಸಿ ಆಹಾರ ಇಲಾಖೆ ಎಚ್ಚರಿಕೆ ನೀಡಿತ್ತು.
ಅದಕ್ಕೂ ಮುನ್ನ ಅರ್ಹತೆ ಮೀರಿ ಕಾರ್ಡ್ ಹೊಂದಿದ್ದು, ಕಾಲಾವಕಾಶ ನೀಡಿದ್ದರೂ ಬಿಪಿಎಲ್ ಕಾರ್ಡ್ ಅನ್ನು ಹಿಂದಿರುಗಿಸದೆ ಕಾರ್ಡ್ ಇಟ್ಟುಕೊಂಡಿದ್ದ ಲಕ್ಷಾಂತರ ಫಲಾನುಭವಿಗಳ ಪಡಿತರ ಹಂಚಿಕೆ ನಿಲ್ಲಿಸಲಾಗಿದೆ. ಜತೆಗೆ 3.65 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿತ್ತು. ಇದೀಗ ಕಳೆದೆರಡು ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ಎಪಿಎಲ್ ಆಗಿ ಬದಲಾಯಿಸಲಾಗಿದೆ ಎಂದು ಆಹಾರ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ದಾಖಲೆ ಸಲ್ಲಿಸಲು 45 ದಿನ ಗಡುವು:
ಅನರ್ಹತೆಯಿಂದ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಲಾಗಿದೆ. ಅರ್ಹತೆಯಿದ್ದೂ ಕಾರಣಾಂತರದಿಂದ ಬಿಪಿಎಲ್ ಕಾರ್ಡ್ ರದ್ದುಗೊಂಡಿದ್ದರೆ, ಅಂಥವರು ಬಿಪಿಎಲ್ ಪಡಿತರ ಚೀಟಿ ಮತ್ತೆ ಪಡೆಯಲು 45 ದಿನಗಳ ಒಳಗೆ ಅಗತ್ಯ ದಾಖಲೆಗಳ ಸಹಿತ ಸಂಬಂಧಿಸಿದ ತಾಲೂಕು ತಹಸೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ದಾಖಲೆ ಪರಿಶೀಲನೆ ಬಳಿಕ, ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಿದ್ದರೆ ಅಂಥವರ ಬಿಪಿಎಲ್ ಪಡಿತರ ಚೀಟಿಯನ್ನು ಮರು ಸ್ಥಾಪಿಸುವ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ವಾರದೊಳಗೆ ಪುನಃ ಬಿಪಿಎಲ್ ಕಾರ್ಡ್ ದೊರೆಯಲಿದೆ.
ತೆರಿಗೆ ಪಾವತಿ ಮಾಡದಿದ್ದರೂ, ಜಿಎಸ್‌ಟಿ ಪಾವತಿದಾರರು ಎಂದು ಕಾರ್ಡ್ ರದ್ದಾಗಿದ್ದರೆ, 7.5 ಎಕರೆ ಒಣ ಅಥವಾ ನೀರಾವರಿ ಜಮೀನು ಹೊಂದಿಲ್ಲದವರು, ಸ್ವಂತವಾಗಿ ಕಾರು ಹೊಂದಿಲ್ಲದವರೂ ಸೇರಿ ಕೇಂದ್ರ ಸರ್ಕಾರ ಸೂಚಿಸಿರುವಂಥ ಮಾನದಂಡ ಹೊಂದದವರು ಪುನಃ ಅದನ್ನು ರುಜುವಾತು ಪಡಿಸುವ ದಾಖಲೆಗಳನ್ನು ಹಾಜರುಪಡಿಸಿ ಬಿಪಿಎಲ್ ಪಡೆಯಲು ಮನವಿ ಸಲ್ಲಿಸಬಹುದಾಗಿದೆ.
ಅನರ್ಹ ಕಾರ್ಡ್‌ಗಳ ವಿವರ
ವಿವರಅನರ್ಹ ಪಡಿತರ ಚೀಟಿಗಳುಇ-ಕೆವೈಸಿ ಮಾಡಿಸದಿರುವವರು:6,16,1961.20 ಲಕ್ಷ ರು.ಗಿಂತ ಹೆಚ್ಚು ಆದಾಯವುಳ್ಳವರು:5,13,613ಅಂತಾರಾಜ್ಯ ಪಡಿತರ ಚೀಟಿದಾರರು:57,8647.5 ಎಕರೆಗೂ ಅಧಿಕ ಭೂಮಿ ಹೊಂದಿರುವವರು:33,4566 ತಿಂಗಳಿಂದ ರೇಷನ್ ಪಡೆಯದಿರುವವರು:19,893ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರು:19,69025 ಲಕ್ಷ ರು.ವಹಿವಾಟು ಮೀರಿದವರು:2,684ಮೃತ ಸದಸ್ಯರು:1,446