ಸಾರಾಂಶ
ದಾವಣಗೆರೆಯ ಆಜಾದ್ ನಗರ ಠಾಣೆ ಸರಹದ್ದಿನ 1ನೇ ಮುಖ್ಯರಸ್ತೆ, 11ನೇ ಅಡ್ಡ ರಸ್ತೆಯಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಬಸವ ನಗರ ಪೊಲೀಸ್ ಠಾಣೆ ನಿರೀಕ್ಷಕ ಎಚ್.ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ಐ ಎಚ್.ಪ್ರಮೀಳಮ್ಮ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಆರೋಪಿ ಮೆಹಬೂಬಿ (68) ಎಂಬಾಕೆಯನ್ನು ಬಂಧಿಸಿ, ₹60 ಸಾವಿರ ಮೌಲ್ಯದ 2 ಕೆಜಿ 150 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಆಜಾದ್ ನಗರ ಠಾಣೆಯಲ್ಲಿ ಆರೋಪಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಗಾಂಜಾ ಮಾರಾಟ, ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ.
ಆಜಾದ್ ನಗರ ಠಾಣೆ ಸರಹದ್ದಿನ 1ನೇ ಮುಖ್ಯರಸ್ತೆ, 11ನೇ ಅಡ್ಡ ರಸ್ತೆಯಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಬಸವ ನಗರ ಪೊಲೀಸ್ ಠಾಣೆ ನಿರೀಕ್ಷಕ ಎಚ್.ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ಐ ಎಚ್.ಪ್ರಮೀಳಮ್ಮ ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಈ ವೇಳೆ ಆರೋಪಿ ಮೆಹಬೂಬಿ (68) ಎಂಬಾಕೆಯನ್ನು ಬಂಧಿಸಿ, ₹60 ಸಾವಿರ ಮೌಲ್ಯದ 2 ಕೆಜಿ 150 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಆಜಾದ್ ನಗರ ಠಾಣೆಯಲ್ಲಿ ಆರೋಪಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.ಚನ್ನಗಿರಿ ಪಟ್ಟಣದ ಸಂತೆ ಮೈದಾನ ಹಾಗೂ ಬಸ್ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಶಂಕೆ ಮೇಲೆ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಇಬ್ಬರೂ ಗಾಂಜಾ ಸೇವಿಸಿದ್ದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
- - - -(ಸಾಂದರ್ಭಿಕ ಚಿತ್ರ)