ಸಾರಾಂಶ
- ತರೀಕೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆಸಂಘಕ್ಕೆ ಪೀಠೋಪಕರಣ ಖರೀದಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ ₹೨ ಲಕ್ಷ . ಅನುದಾನ ಒದಗಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಡಿ.ಎಸ್.ಸುರೇಶ್ ತಿಳಿಸಿದರು.ಶನಿವಾರ, ತರೀಕೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಮತ್ತು 75ನೇ ವರ್ಷದ ವಜ್ರ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಪಟ್ಟಣದ ರೈತ ಭವನದ ಆವರಣದಲ್ಲಿರುವ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಹೊರಟಿರುವುದು ಸರಿಯಿದೆ. ಸಂಘಕ್ಕೆ ಆರ್ಥಿಕ ಲಾಭವಾಗುವ ಚಟುವಟಿಕೆ ಮತ್ತು ರೈತೋಪಯೋಗಿ ಸಲಕರಣೆಗಳನ್ನು ಮಾರಾಟ ಮಾಡಲು ಸಂಘದ ಆಡಳಿತ ಮಂಡಳಿ ಮುಂದಾಗಬೇಕು ಎಂದು ಹೇಳಿದರು.
ಈ ಬಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 7.67 ಕೋಟಿ ರು. ಲಾಭ ಗಳಿಸಿದೆ. ಸಹಕಾರ ಸಂಸ್ಥೆಗಳಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಂಸ್ಥೆಗಳು ಅಭಿವೃದ್ಧಿ ಹೊಂದಲಿವೆ ಎಂದು ಹೇಳಿದರು.ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಬಿ.ಸುಧಾಕರ್ ಮಾತನಾಡಿ, 2023-24ನೇ ಸಾಲಿನಲ್ಲಿ ಸಂಘ 15,57,868 ರು. ನಿವ್ವಳ ಲಾಭ ಗಳಿಸಿದೆ, ಕಚೇರಿ ಕೆಳಗಿನ ಗೋಡೌನ್‌ನ್ನು ರಸಗೊಬ್ಬರ ಹಾಗೂ ಹಾರ್ಡ್‌ವೇರ್ ವ್ಯಾಪಾರದ ಉದ್ದೇಶಕ್ಕಾಗಿ ನವೀಕರಿಸಲಾಗಿದೆ. ರೈತರಿಗೆ ಬೇಕಾಗುವ ಸಲಕರಣೆಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಸಂಘದ ನಿರ್ದೇಶಕ ಎಂ.ನರೇಂದ್ರ ಮಾತನಾಡಿ, ಸಂಘದ 75ನೇ ವರ್ಷದ ವಜ್ರ ಮಹೋತ್ಸವದಲ್ಲಿ ಮಾಜಿ ಅಧ್ಯಕ್ಷರಿಗೆ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ, ಹಿರಿಯ ಸಹಕಾರಿ ಧುರೀಣರಿಗೆ ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಟಿ.ವಿ.ಶಿವಶಂಕರಪ್ಪ ಮಾತನಾಡಿ, ಸಹಕಾರಿ ಕ್ಷೇತ್ರದಿಂದ ರೈತರಿಗೆ, ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸಲಾಗಿದೆ. ಈ ಸಂಘ ಹಲವರಿಗೆ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ಆರ್.ಆನಂದಪ್ಪ, ಟಿ.ಹೆಚ್.ಎಲ್.ರಮೇಶ್, ಸಂಘದ ಮಾಜಿ ಅಧ್ಯಕ್ಷ ಎ.ಆರ್.ರಾಜಶೇಖರ್, ಕೆ.ಆರ್. ಧೃವಕುಮಾರ್ ಮತ್ತಿತರರು ಮಾತನಾಡಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಶ್ರೀ ರೇವಣಸಿದ್ದೇಶ್ವರ ಕೃಪಸ ಸಂಘದ ಅಧ್ಯಕ್ಷ ಟಿ.ಎಸ್ .ಪ್ರಕಾಶ್ ವರ್ಮ, ಟಿಎಪಿಸಿಎಂಎಸ್ ಸಂಘದ ಉಪಾಧ್ಯಕ್ಷೆ ಪದ್ಮಾ, ನಿರ್ದೇಶಕರಾದ ಗುಳ್ಳದಮನೆ ವಸಂತಕುಮಾರ್, ಎಸ್.ಬಿ.ಆನಂದಪ್ಪ, ತಿಮ್ಮೇಶ್‌ಬಾಬು, ಕೆ.ಆರ್.ಜಯಣ್ಣ, ಎಸ್.ಎಲ್. ಶಿವಯೋಗಿ, ಎನ್.ಎಂ.ದಯಾನಂದ್, ಕೆ.ಮಂಜುನಾಥ್, ಎಚ್.ಟಿ.ಪ್ರೇಮಾ, ಎ.ಎಂ.ರವಿ, ಶಶಿಕುಮಾರ್, ಶ್ರೀ ರೇವಣಸಿದ್ದೇಶ್ವರ ಕೃ,ಪ.ಸ. ಸಂಘದ ಅಧ್ಯಕ್ಷ ಟಿ.ಎಸ್ .ಪ್ರಕಾಶ್ ವರ್ಮ, ಸಹಾಯಕ ಕಾರ್ಯದರ್ಶಿ ಎಸ್‌ಎಂ.ನಿತೀಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.-21ಕೆಟಿಆರ್.ಕೆ.05ಃ
ತರೀಕೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ಡಿಸಿಸಿ ಬ್ಯಾಂಕ್ಅಧ್ಯಕ್ಷ ಡಿ.ಎಸ್.ಸುರೇಶ್ ಉದ್ಘಾಟಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಬಿ.ಸುಧಾಕರ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಟಿ.ವಿ.ಶಿವಶಂಕರಪ್ಪ, ಸಂಘದ ನಿರ್ದೇಶಕ ಎಂ.ನರೇಂದ್ರ ಮತ್ತಿತರರಿದ್ದರು.