2 ವರ್ಷ 9 ತಿಂಗಳಿನ ಸ್ವರಶ್ರೀ ತಬಲಾದಲ್ಲಿನ 12 ತಾಳಗಳನ್ನು ಹೇಳುತ್ತಾ, ತಬಲಾದಲ್ಲಿ ಆ ತಾಳಗಳನ್ನು ನುಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ಛಾಪೊತ್ತಿದ್ದಾಳೆ.
ಹೊನ್ನಾವರ: ತಾಲೂಕಿನ ಆಡುಕಳದ ಸ್ವರಶ್ರೀ ಗುರುರಾಜ್ ಹೆಗಡೆ ಇವಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನವನ್ನು ಪಡೆದು ಸಾಧನೆ ಮಾಡಿದ್ದಾಳೆ.
2 ವರ್ಷ 9 ತಿಂಗಳಿನ ಸ್ವರಶ್ರೀ ತಬಲಾದಲ್ಲಿನ 12 ತಾಳಗಳನ್ನು ಹೇಳುತ್ತಾ, ತಬಲಾದಲ್ಲಿ ಆ ತಾಳಗಳನ್ನು ನುಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ಛಾಪೊತ್ತಿದ್ದಾಳೆ.ಕಳೆದ ಸೆ. 25ರಂದು ಇವಳ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದೃಢಿಕರಿಸಲಾಗಿದೆ. ಈ ಮೂಲಕ ಕಿರಿಯ ವಯಸ್ಸಿನಲ್ಲಿಯೇ ಅಪ್ರತಿಮ ಸಾಧನೆಯನ್ನು ಮಾಡಿದ್ದಾಳೆ.ಹೊನ್ನಾವರದಲ್ಲಿ ಕಳೆದ ಆರೇಳು ವರ್ಷಗಳಿಂದ ಸ್ವರಶ್ರೀ ಸಂಗೀತ ಶಾಲೆ ತೆರೆದು ನೂರಾರು ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆಯೆರೆಯುತ್ತಿರುವ ತಬಲಾಪಟು ಗುರುರಾಜ ಹೆಗಡೆ ಆಡುಕಳ ಹಾಗೂ ಗಾಯಕಿ ಶ್ರೀಲತಾ ಗುರುರಾಜ ಅವರ ಮಗಳಾಗಿದ್ದಾಳೆ. ತಮ್ಮ ಪಾಲಕರ ನೆರವಿನಿಂದ ಸ್ವರಶ್ರೀ ಈ ಸಾಧನೆ ಮಾಡಿದ್ದಾಳೆ.
26ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಕಾರವಾರ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ. 26ರಂದು ಬೆಳಗ್ಗೆ 10.30 ಗಂಟೆಗೆ ಕಾರವಾರದ ದೈವಜ್ಞ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ ಎಂ. ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ., ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ. ಅಶೋಕ ಡಿ.ಆರ್., ಜಿಪಂ ಸಿಇಒ ಡಾ. ದಿಲೀಷ್ ಶಶಿ, ಪೊಲೀಸ್ ಆಧೀಕ್ಷಕ ದೀಪನ್ ಎಂ.ಎನ್. ಮತ್ತಿತರರು ಭಾಗವಹಿಸಲಿದ್ದಾರೆ.ಅಸ್ನೋಟಿ ಶಿವಾಜಿ ವಿದ್ಯಾಮಂದಿರದ ಮುಖ್ಯಾಧ್ಯಾಪಕ ಡಾ. ಗಣೇಶ್ ಬಿಷ್ಟಣ್ಣನವರ ಮಹರ್ಷಿ ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಬೆಳಗ್ಗೆ 9.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.