ಸಾರಾಂಶ
ತರೀಕೆರೆ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2023-24ನೇ ಸಾಲಿನಲ್ಲಿ ₹20.31 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಚ್.ಆರ್. ನಾಗರಾಜ್ ತಿಳಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆ
ಕನ್ನಡಪ್ರಭ ವಾರ್ತೆ ತರೀಕೆರೆಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2023-24ನೇ ಸಾಲಿನಲ್ಲಿ ₹20.31 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಚ್.ಆರ್. ನಾಗರಾಜ್ ತಿಳಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು. ಮುಂದಿನ ವರ್ಷ ರೈತರಿಗೆ ₹1 ಕೋಟಿ ರು. ಸಾಲ ನೀಡುವ ಗುರಿ ಹೊಂದಲಾಗಿದೆ. 2023-24ನೇ ಸಾಲಿಗೆ ₹24.49 ಲಕ್ಷ ನಿಶ್ಚಿತ ಠೇವಣಿ ಬಂದಿದೆ. ಸಾಲ ವಸೂಲಾತಿಯಲ್ಲಿ ಶೇ.80.61 ರಷ್ಟು ಪ್ರಗತಿ ಸಾಧಿಸಲಾಗಿದೆ. 1941ರಲ್ಲಿ ಆರಂಭ ವಾದ ಬ್ಯಾಂಕು 6771 ಸದಸ್ಯರನ್ನು ಹೊಂದಿದ್ದು, ಬ್ಯಾಂಕ್‌ನಲ್ಲಿ ₹62.79 ಲಕ್ಷ ಷೇರು ಮೊತ್ತವಿದೆ ಎಂದು ತಿಳಿಸಿದರು.ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಚ್.ಎಲ್. ರಮೇಶ್ ಮಾತನಾಡಿ, ಕಳೆದ 15 ವರ್ಷಗಳಿಂದ ನಷ್ಟದಲ್ಲಿದ್ದ ಬ್ಯಾಂಕ್ ಈ ವರ್ಷ ಆಡಳಿತ ಮಂಡಳಿ, ನೌಕರ ವರ್ಗದ ಶ್ರಮದಿಂದ ಲಾಭಗಳಿಸಿರುವುದು ಸಂತಸ ತಂದಿದೆ. ಬ್ಯಾಂಕಿನ ಸ್ವಂತ ಬಂಡವಾಳದಿಂದ ನೀಡಿರುವ ಸಾಲ ವಸೂಲಿಗೆ ಕ್ರಮವಹಿಸಬೇಕು ಎಂದರು.ಷೇರುದಾರರಾದ ಹಾಲವಜ್ರಪ್ಪ ಮಾತನಾಡಿ, ಸಹಕಾರಿ ಬ್ಯಾಂಕುಗಳು ಲಾಭ ಗಳಿಸುವುದೇ ದುಸ್ತರ. ಅಂತಹ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್‌ನ ಆಡಳಿತ ಮಂಡಳಿ, ನೌಕರ ವರ್ಗ ಅಭಿನಂದನಾರ್ಹರು ಎಂದು ಶ್ಲಾಘಿಸಿದರು. ಷೇರುದಾರ ಟಿ.ಕೆ. ರಮೇಶ್, ಉಪಾಧ್ಯಕ್ಷೆ ಶಾರದಮ್ಮ, ನಿರ್ದೇಶಕರಾದ ಎಚ್.ಎಂ. ಮಲ್ಲಿಕಾರ್ಜುನ, ಟಿ.ಟಿ. ಗೋವಿಂದಪ್ಪ, ಎಂ. ನಂಜುಂಡಪ್ಪ, ಎ.ಎಂ. ಯೋಗೀಶ್, ಟಿ.ಕೆ. ಶೇಖರಪ್ಪ, ಟಿ. ಶಿವಣ್ಣ, ಷೇರುದಾರ ಟಿ.ಕೆ. ರಮೇಶ್, ವ್ಯವಸ್ಥಾಪಕ ಕೆ.ಬಿ. ನಾಗೇಶ್, ಸಿಬ್ಬಂದಿ ಗೌತಮ್ ಭಾಗವಹಿಸಿದ್ದರು.24ಕೆಟಿಆರ್.ಕೆ.1ಃತರೀಕೆರೆಯಲ್ಲಿ ಪಿಎಲ್‌ಡಿ. ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯನ್ನು ಬ್ಯಾಂಕ್ ಅಧ್ಯಕ್ಷ ಎಚ್.ಆರ್. ನಾಗರಾಜ್ ಉದ್ಘಾಟಿಸಿ ಮಾತನಾಡಿದರು. ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಚ್.ಎಲ್. ರಮೇಶ್ ಮತ್ತಿತರರು ಇದ್ದರು.