ಸಾರಾಂಶ
ಕನ್ನಡ ಪ್ರಭವಾರ್ತೆ,ಮಾಲೂರು
ಪಟ್ಟಣದ ಹೊರವಲಯದ ಗುಡ್ನಹಳ್ಳಿ-ಬಂಗಾರಪೇಟೆ ರಸ್ತೆಗಳ ನಡುವಿನ ೨೦ ಎಕರೆ ಜಮೀನನಲ್ಲಿ ನೂತನವಾಗಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸರ್ಕಾರವು ಹಸಿರು ನಿಶಾನೆ ತೋರಿಸಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ತಾಲೂಕಿನ ದೊಡ್ಡ ಶಿವಾರ ಗ್ರಾ.ಪಂ.ವ್ಯಾಪ್ತಿಯ ಪೂರಮಾಕನಹಳ್ಳಿ ಗ್ರಾಮದಲ್ಲಿ ಪಟ್ಟಣದ ಶ್ರೀ ಕ್ಷೇತ್ರ ಮಾರಿಕಾಂಬ ದೇವಾಲಯ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡದರು.
ಹೊರ ರೋಗಿಗಳ ಸಂಖ್ಯೆ ಹೆಚ್ಚಳಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೊರ ರೋಗಿಗಳು ಹೆಚ್ಚಾಗುತ್ತಿರುವ ಕಾರಣ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಲಾಗಿತ್ತು, ನಮ್ಮ ಮನವಿಗೆ ಸ್ಪಂದಿಸಿದ ಆರೋಗ್ಯ ಸಚಿವರು ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ರೀತಿಯ ಸವಲತ್ತುಗಳನ್ನು ಒದಗಿಸಲು ಸಮಾಜ ಸೇವಕರು ಹಾಗೂ ಸಂಘ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸಿದಾಗ ಮತ್ತಷ್ಟು ಸವಲತ್ತುಗಳನ್ನು ಒದಗಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬಹುದಾಗಿದೆ ಎಂದರು.
ಈ ನಿಟ್ಟಿನಲ್ಲಿ ಪಟ್ಟಣದ ಮಾರಿಕಾಂಬಾ ಟ್ರಸ್ಟ್ ನವರು ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಸೇವೆಯನ್ನು ಮಾಡುವ ಉದ್ದೇಶದಿಂದ ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ, ಸ್ಥಾಪನೆ ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಆಹಾರ ವಿತರಣೆ ಮಾಡುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದೆ ಎಂದರು.ಶಾಲೆಗಳಿಗೆ ದಾನಿಗಳ ನೆರವು
ಓಸಾಟ್ ಎಂಬ ಸಂಸ್ಥೆಯೊಂದು ಮಾಸ್ತಿಯಲ್ಲಿ ೬ ಕೋಟಿ ರೂಗಳ ವೆಚ್ಚದಲ್ಲಿ ಕೆಪಿಎಸ್ ಶಾಲಾ ಕಟ್ಟಡ ನಿರ್ಮಿಸುತ್ತಿದ್ದಾರೆ, ಅಧಿಕಾರಿಗಳು ಶಿಕ್ಷಕರು ಇಚ್ಛಾಶಕ್ತಿಯಿಂದ ಒಂದಲ್ಲ ಒಂದು ರೀತಿ ಸರ್ಕಾರಿ ಶಾಲೆಗಳು ಉಳಿಸಲು ದಾನಿಗಳಿಂದ ಅವಕಾಶಗಳನ್ನು ಮಾಡಿಕೊಳ್ಳುತ್ತಿದ್ದಾರೆ, ತಾಲೂಕಿನ ಅಭಿವೃದ್ಧಿ ಹಾಗೂ ಸರ್ಕಾರಿ ಶಾಲೆಗಳ ಅವೃದ್ಧಿಗೂ ಸಹ ಅನುದಾನವನ್ನು ತರಲಾಗುತ್ತಿದೆ ಎಂದರು.ಮಾರಿಕಾಂಬಾ ದೇವಾಲಯ ಟ್ರಸ್ಟಿನ ಅಧ್ಯಕ್ಷ ಪಿ.ವೆಂಕಟೇಶ್ ಮಾತನಾಡಿ ಮಾರಿಕಾಂಬ ದೇವಾಲಯ ಟ್ರಸ್ಟ್ ಭಕ್ತರು ಹುಂಡಿಗೆ ಹಾಕುವ ಹಣದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಇಲ್ಲಿನ ಪೂರಮಾಕನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಮಕ್ಕಳ ಶಿಕ್ಷಣಕ್ಕಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಬಿಇಒ ಹಾಗೂ ಶಿಕ್ಷಕರು ಮನವಿ ಮಾಡಿದ್ದರು, ಅದರಂತೆ ನೂತನ ಕಟ್ಟಡ ನಿರ್ಮಿಸಿ ಕೊಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಹೆಚ್.ಎಸ್.ಚಂದ್ರಕಲಾ, ದೊಡ್ಡ ಶಿವಾರ ಗ್ರಾಪಂ ಅಧ್ಯಕ್ಷ ಮಂಜುನಾಥ್, ಮಾರಿಕಾಂಬಾ ದೇವಾಲಯ ಟ್ರಸ್ಟಿನ ಖಜಾಂಚಿ ಪಿ ನಾರಾಯಣಪ್ಪ, ಸದಸ್ಯರಾದ ಎಂ ಬಿ ನಂಜುಂಡಪ್ಪ, ಕೋಳಿ ನಾರಾಯಣ, ಶಿವಾಜಿ ರಾವ್, ಜಗನ್ನಾಥ್, ವ್ಯವಸ್ಥಾಪಕ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಖಜಾಂಚಿ ಆರ್ ನರಸಿಂಹ, ಕಾರ್ಯದರ್ಶಿ ರವಿ, ಪೊಲೀಸ್ ಇನ್ಸ್‌ಪೆಕ್ಟರ್ ವಸಂತ್, ಸಿಆರ್‌ಪಿಗಳಾದ ಜಗದಾಂಬ, ಪ್ರಮೀಳಾ, ವನಿತಾ, ವೀರಭದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಿ ರಮೇಶ್, ಖಜಾಂಚಿ ಅರ್ಜುನ್ ಶಿಕ್ಷಕರಾದ ಕೃಷ್ಣಪ್ಪ, ಎಸ್ ಪಿ ವೆಂಕಟೇಶ್, ಮುಖಂಡರಾದ ಗೋವರ್ಧನ್ ರೆಡ್ಡಿ, ಲೋಕೇಶ್, ನಾಗರಾಜ್, ಪಾಪರೆಡ್ಡಿ, ಚಂದ್ರಪ್ಪ, ಶ್ರೀನಿವಾಸ್, ದೊಡ್ಡ ಶಿವಾರ, ಪಿಡಿಓ ಆನಂದ್, ಇನ್ನಿತರರು ಹಾಜರಿದ್ದರು.