ಸಾರಾಂಶ
ಚಿಂಚೋಳಿ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಸ್ಥಾಪಿತವಾಗಿರುವ ಚಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಭೂಮಿ ಕಳೆದುಕೊಂಡಿರುವ ಸಂತ್ರಸ್ಥರಿಗೆ ನೌಕರಿ ಕೊಡಬೇಕು. ಪ್ರತಿ ರೈತರಿಗೆ ಎಕರೆಗೆ ₹೨೦ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತರು ಆಗ್ರಹಿಸಿ ಕಲ್ಲೂರ ಗ್ರಾಮದಿಂದ ಪಾದಯಾತ್ರೆ ನಡೆಸಿ ಕಂಪನಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಸ್ಥಾಪಿತವಾಗಿರುವ ಚಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಭೂಮಿ ಕಳೆದುಕೊಂಡಿರುವ ಸಂತ್ರಸ್ಥರಿಗೆ ನೌಕರಿ ಕೊಡಬೇಕು. ಪ್ರತಿ ರೈತರಿಗೆ ಎಕರೆಗೆ ₹೨೦ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತರು ಆಗ್ರಹಿಸಿ ಕಲ್ಲೂರ ಗ್ರಾಮದಿಂದ ಪಾದಯಾತ್ರೆ ನಡೆಸಿ ಕಂಪನಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಮಾತನಾಡಿ, ಚೆಟ್ಟಿನಾಡ ಸಿಮೆಂಟ್ ಕಂಪನಿ ಪ್ರಾರಂಭಿಸುವ ಮೊದಲು ರೈತರು ಅತೀ ಕಡಿಮೆ ಬೆಲೆಯಲ್ಲಿ ಜಮೀನು ಮಾರಾಟ ಮಾಡಿಕೊಂಡಿದ್ದಾರೆ. ರೈತರು ಜಮೀನು ಕಡಿಮೆ ಹಣಕ್ಕೆ ಮಾರಾಟ ಮಾಡಿಕೊಂಡಿದ್ದರಿಂದ ಅನೇಕ ಕುಟುಂಬಗಳು ಬಡತನದ ಸಂಕಷ್ಟಕ್ಕೆ ಈಡಾಗಿವೆ. ಅಲ್ಲದೇ ಆರ್ಥಿಕ ಸಮಸ್ಯೆ ಎದುರಿಸಬೇಕಾಗಿದೆ. ಕಂಪನಿಯವರು ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಮತ್ತು ಕುಟುಂಬಕ್ಕೆ ನೌಕರಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಮುಖಂಡ ಶರಣಬಸಪ್ಪ ಮಮಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಚೆಟ್ಟನಾಡ ಸಿಮೆಂಟ್ ಕಂಪನಿಯಲ್ಲಿ ಜಮೀನು ತೆಗೆದುಕೊಳ್ಳುವಾಗ ರೈತರಿಗೆ ಅನೇಕ ಭರವಸೆಗಳನ್ನು ನೀಡಲಾಗಿದೆ. ಕೆಲವರಿಗೆ ನೌಕರಿ ಕೊಟ್ಟು ಇನ್ನಿತರಿಗೆ ಕೆಲಸ ಕೊಟ್ಟಿಲ್ಲ ಕುಟುಂಬದ ಉಪ ಜೀವನಕ್ಕೆ ನೌಕರಿ ಕೊಡಬೇಕು ಮತ್ತು ಪ್ರತಿ ಎಕೆರೆಗೆ ₹೨೦ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ವಿವಿಧ ಬೇಡಿಕೆ ಮನವಿ ಪತ್ರವನ್ನು ಕಂಪನಿಯವರಾದ ಭೀಮರೆಡ್ಡಿ ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಿದ್ದಾರ್ಥ ಠಾಕೂರ, ಜಾಫರಖಾನ ಮಿರಿಯಾಣ, ತುಳಜಪ್ಪ ಬೀರನಳ್ಳಿ, ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ, ಖಾಜಾಮಿಯ ಕುಪನೂರ, ಮಲ್ಲಮ್ಮ ಕೋಡ್ಲಿ, ಪ್ರಭು ಪ್ಯಾರಾಬದಿ, ಶಂಕರಯ್ಯ ಸ್ವಾಮಿ ಬುರಗಪಳ್ಳಿ, ಕಾಶಿನಾಥ ಬಂಡಿ, ಪ್ರಭು ಪ್ಯಾರಾಬದಿ ಹಾಗೂ ಕಲ್ಲೂರ ಗ್ರಾಮದವರಿದ್ದರು.