ಮೈಸೂರು ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ 200 ಕೋಟಿ ರು. ನೆರವಿಗೆ ಮನವಿ

| Published : Feb 14 2024, 02:18 AM IST

ಮೈಸೂರು ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ 200 ಕೋಟಿ ರು. ನೆರವಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಸರ್ಕಾರ 50 ಕೋಟಿ ರು. ಬಿಡುಗಡೆ ಮಾಡಿದ್ದರಿಂದ 2023-24ನೇ ಸಾಲಿನ ಹಂಗಾಮಿನಲ್ಲಿ 2,41,305 ಮೆಟ್ರಿಕ್‌ ಟನ್‌ ಕಬ್ಬು ನುರಿಸಲಾಗಿದೆ. ಇದು ಕಳೆದ 10 ವರ್ಷಗಳಲ್ಲೇ ಅಧಿಕ ಪ್ರಮಾಣವಾಗಿದೆ. ಜೊತೆಗೆ ಕಾಕಂಬಿ ಮಾರಾಟದಿಂದ ಮಾರಾಟದಿಂದ 18.74 ಲಕ್ಷ ರು. ಆದಾಯ ಲಭ್ಯವಾಗಿದೆ. ಸಹ ವಿದ್ಯುತ್‌ ಘಟಕದಿಂದ 12,21,000 ಯೂನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಕಾಕಂಬಿ ಉತ್ಪಾದನೆ, ವಿದ್ಯುತ್‌ ಉತ್ಪಾದನೆ ಹಾಗೂ ಕಬ್ಬು ನುರಿಸುವಿಕೆ ಪ್ರಮಾಣ ಹೆಚ್ಚಿಸಲು 200 ಕೋಟಿ ರು.ಗಳ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಭರವಸೆ ನೀಡಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದರಿ ಕಾರ್ಖಾನೆಯಲ್ಲಿ ಕಬ್ಬು ಅರೆಯಲು ಸರ್ಕಾರ 50 ಕೋಟಿ ರು. ಬಿಡುಗಡೆ ಮಾಡಿದ್ದರಿಂದ 2023-24ನೇ ಸಾಲಿನ ಹಂಗಾಮಿನಲ್ಲಿ 2,41,305 ಮೆಟ್ರಿಕ್‌ ಟನ್‌ ಕಬ್ಬು ನುರಿಸಲಾಗಿದೆ. ಇದು ಕಳೆದ 10 ವರ್ಷಗಳಲ್ಲೇ ಅಧಿಕ ಪ್ರಮಾಣವಾಗಿದೆ. ಜೊತೆಗೆ ಕಾಕಂಬಿ ಮಾರಾಟದಿಂದ ಮಾರಾಟದಿಂದ 18.74 ಲಕ್ಷ ರು. ಆದಾಯ ಲಭ್ಯವಾಗಿದೆ. ಸಹ ವಿದ್ಯುತ್‌ ಘಟಕದಿಂದ 12,21,000 ಯೂನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದೆ.

ಈ ಪೈಕಿ ಆಂತರಿಕ ಬಳಕೆಯ ನಂತರ 4,93,200 ಯೂನಿಟ್‌ ಅನ್ನು ಚೆಸ್ಕಾಂ ಕಂಪನಿಗೆ ಮಾರಾಟ ಮಾಡಿರುವುದರಿಂದ 21.94 ಲಕ್ಷ ಆದಾಯ ಗಳಿಸಿದೆ. ಮುಂಬರುವ ದಿನಗಳಲ್ಲಿ ಡಿಸ್ಟಲರಿ ಸಹ ಆರಂಭಿಸುವ ಉದ್ದೇಶವಿದೆ.2024-25ನೇ ಸಾಲಿನಲ್ಲಿ ಕಬ್ಬು ನುರಿಯುವಿಕೆಯನ್ನು ಜೂನ್‌ ತಿಂಗಳಲ್ಲೇ ಆರಂಭಿಸಲು ನಿರ್ಣಯಿಸಲಾಗಿದೆ ಎಂದು ವಿವರಿಸಿದರು.

ಕಾರ್ಖಾನೆಯ ಚಟುವಟಿಕೆ ವಿಸ್ತರಿಸಲು ಸರ್ಕಾರದಿಂದ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಇಲ್ಲದಿದ್ದರೆ ಬ್ಯಾಂಕುಗಳಿಂದ ಸಾಲ ಪಡೆಯಲು ಗ್ಯಾರಂಟಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ ಅವರು, ಕಂಪನಿಯ ಚಟುವಟಿಕೆಗಳಿಗೆ 200 ಕೋಟಿ ರು. ಬಜೆಟ್‌ನಲ್ಲಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಬೇಕು. ಈಗಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಮೂರು ವರ್ಷದವರೆಗೆ ವರ್ಗಾವಣೆ ಮಾಡಬಾರದು ಎಂದು ಮನವಿ ಮಾಡಿದರು.