ಲೋಕಕಲ್ಯಾಣಾರ್ಥ ೨೧ ದಿನ ಮೌನಾನುಷ್ಠಾನ ಆರಂಭ

| Published : Jan 10 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣದ ಇಂಗಳೇಶ್ವರ ರಸ್ತೆಯ ಗವಿ ತೋಟದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಲೋಕ ಕಲ್ಯಾಣ ಹಾಗೂ ಶರಣರ ಧರ್ಮ ಜಾಗೃತಿಗಾಗಿ ೨೧ ದಿನಗಳ ಕಾಲ ಮೌನ ಅನುಷ್ಠಾನವನ್ನು ಗುರುವಾರ ಕೈಗೊಂಡರು. ಇಂಗಳೇಶ್ವರದ ಬಸವೇಶ್ವರ ವಚನ ಶಿಲಾಮಂಟಪದ ರೂವಾರಿ, ವಿರಕ್ತಮಠದ ಹಿರಿಯ ಶ್ರೀಗಳಾದ ಚನ್ನಬಸವ ಮಹಾಸ್ವಾಮೀಜಿ ಪಾದ ಪೂಜೆ ಮಾಡಿದ ನಂತರ ಸಿದ್ದಲಿಂಗ ಸ್ವಾಮೀಜಿ ಮೌನ ಅನುಷ್ಠಾನ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಇಂಗಳೇಶ್ವರ ರಸ್ತೆಯ ಗವಿ ತೋಟದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಲೋಕ ಕಲ್ಯಾಣ ಹಾಗೂ ಶರಣರ ಧರ್ಮ ಜಾಗೃತಿಗಾಗಿ ೨೧ ದಿನಗಳ ಕಾಲ ಮೌನ ಅನುಷ್ಠಾನವನ್ನು ಗುರುವಾರ ಕೈಗೊಂಡರು. ಇಂಗಳೇಶ್ವರದ ಬಸವೇಶ್ವರ ವಚನ ಶಿಲಾಮಂಟಪದ ರೂವಾರಿ, ವಿರಕ್ತಮಠದ ಹಿರಿಯ ಶ್ರೀಗಳಾದ ಚನ್ನಬಸವ ಮಹಾಸ್ವಾಮೀಜಿ ಪಾದ ಪೂಜೆ ಮಾಡಿದ ನಂತರ ಸಿದ್ದಲಿಂಗ ಸ್ವಾಮೀಜಿ ಮೌನ ಅನುಷ್ಠಾನ ಆರಂಭಿಸಿದರು.ಈ ಸಂದರ್ಭದಲ್ಲಿ ಚನ್ನಬಸವ ಶ್ರೀಗಳು ಮಾತನಾಡಿ, ನಾಡಿನಲ್ಲಿ ಉತ್ತಮವಾದ ಮಳೆ-ಬೆಳೆಯಾಗಿ ರೈತ ಸೇರಿದಂತೆ ನಾಡಿನ ಪ್ರತಿಯೊಬ್ಬರ ಒಳಿತಿಗಾಗಿ ವಿರಕ್ತ ಮಠದ ಸಿದ್ದಲಿಂಗ ಶ್ರೀಗಳು ಕೈಗೊಂಡಿರುವ ಮೌನ ಅನುಷ್ಠಾನ ಯಶಸ್ವಿಯಾಗಲೆಂದು ನಾವೆಲ್ಲರೂ ಭಗವಂತನನ್ನು ಪ್ರಾರ್ಥಿಸೋಣ. ಪ್ರತಿನಿತ್ಯ ಪೂಜ್ಯರು ಒಂದು ಬಾರಿ ದರ್ಶನ ಭಾಗ್ಯ ನೀಡಲಿದ್ದಾರೆ. ವೈದ್ಯರ ಸಲಹೆಯೊಂದಿಗೆ ಆರೋಗ್ಯದ ಮೇಲೆ ನಿಗಾ ಇಡಲಾಗುವದು ಎಂದರು.ಈ ಸಂದರ್ಭದಲ್ಲಿ ಜನಪದ ಗಾಯಕ ಬಸವರಾಜ ಹಾರಿವಾಳ, ಕಾಳಹಸ್ತೇಶ್ವರಯ್ಯ ಕಾಳಹಸ್ತೇಶ್ವರಮಠ, ವೀರಗಂಗಾಧರಯ್ಯ ಕಾಳಹಸ್ತೇಶ್ವರಮಠ, ಸಂಗನಗೌಡ ಚಿಕ್ಕೊಂಡ, ಶಂಕರಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಮಹಾಂತೇಶ ಆದಿಗೊಂಡ, ರವಿ ಚಿಕ್ಕೊಂಡ, ಬಸಣ್ಣ ದೇಸಾಯಿ, ಮಹಾಂತೇಶ ಮಡಿಕೇಶ್ವರ, ವಿನೂತ ಕಲ್ಲೂರ, ಪ್ರಬಾಕರ ಖೇಡದ, ಶ್ರೀಕಾಂತ ಪಟ್ಟಣಶೆಟ್ಟಿ, ನಾಗರಾಜ ಪಟ್ಟಣಶೆಟ್ಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ಮಹಾದೇವಿ ಬಿರಾದಾರ, ಲಲಿತಾ ಗಬ್ಬೂರ ಸೇರಿದಂತೆ ಇತರರು ಇದ್ದರು.