ವಿಶೇಷಚೇತನ ವಿದ್ಯಾರ್ಥಿಗಳ ಸಲಕರಣೆಗಾಗಿ 21 ಲಕ್ಷ ಮೀಸಲು

| Published : Dec 09 2023, 01:15 AM IST

ವಿಶೇಷಚೇತನ ವಿದ್ಯಾರ್ಥಿಗಳ ಸಲಕರಣೆಗಾಗಿ 21 ಲಕ್ಷ ಮೀಸಲು
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಕಳಕಳಿಯ ಯೋಜನೆಗಳಡಿಯಲ್ಲಿ ಸಾಮಾನ್ಯ ಜನರ ಜೀವನ ಸುಧಾರಿಸಲು ಮತ್ತು ಬದುಕಲು ಸಮಾಜವನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಕಾರ್ಖಾನೆ ನಿರಂತರವಾಗಿ ತೊಡಗಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತಾಲೂಕಿನ ಮೈದೊಳಲು ಮತ್ತು ಮಂಗೋಟೆ ಗ್ರಾಮಗಳಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯ, ಶಂಕರ ನೇತ್ರಾಲಯ, ಯೂನಿಟಿ ಆಸ್ಪತ್ರೆ, ತಾಲೂಕು ಆರೋಗ್ಯ ಕೇಂದ್ರ ಮತ್ತು ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ಸಾಮಾನ್ಯ ಆರೋಗ್ಯ, ಮೂಳೆ, ಹೃದಯ, ನೇತ್ರ ತಪಾಸಣೆ, ಸ್ತ್ರೀರೋಗ, ಮಕ್ಕಳ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಸುಮಾರು ೬೦೦ ಗ್ರಾಮಸ್ಥರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ವಿಐಎಸ್‌ಎಲ್‌ನ ಚಂದ್ವಾನಿ । ₹೭ ಲಕ್ಷ ಮೌಲ್ಯದ ೧೦೫ ಜೊತೆ ಶ್ರವಣ ಸಾಧನ, ೧ ವ್ಹೀಲ್‌ಚೇರ್, ೮ ಎಂಎಸ್‌ಐಇಡಿ ಕಿಟ್‌ ವಿತರಣೆಕನ್ನಡಪ್ರಭ ವಾರ್ತೆ ಭದ್ರಾವತಿ

ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಮಾಜಿಕ ಸೇವಾ ಕಾರ್ಯಗಳ ಯೋಜನೆಯಡಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆಗಳನ್ನು ವಿತರಿಸಲು ೨೧ ಲಕ್ಷ ರು. ಮೀಸಲಿಡಲಾಗಿದೆ ಎಂದು ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಹೇಳಿದರು.

ಅವರು ತಾಲೂಕಿನ ನವಿಲೆಬಸವಾಪುರ ಮದರ್ ತೆರೇಸಾ ವಸತಿ ಶಾಲೆ ಹಾಗೂ ನಗರದ ವಿಐಎಸ್‌ಎಲ್ ಭದ್ರಾ ಅತಿಥಿ ಗೃಹದಲ್ಲಿ ಸರ್ಕಾರಿ ಶಾಲೆಗಳ ೧೧೪ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ೭ ತಾಲೂಕುಗಳ ಸರ್ಕಾರಿ ಶಾಲೆಗಳ ೩೩೨ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು. ಈ ಉದಾತ್ತ ಉದ್ದೇಶಕ್ಕಾಗಿ ೨೧ ಲಕ್ಷ ರು. ಮುಡುಪಾಗಿಡಲಾಗಿದೆ ಎಂದರು.

ಸಾಮಾಜಿಕ ಕಳಕಳಿಯ ಯೋಜನೆಗಳಡಿಯಲ್ಲಿ ಸಾಮಾನ್ಯ ಜನರ ಜೀವನ ಸುಧಾರಿಸಲು ಮತ್ತು ಬದುಕಲು ಸಮಾಜವನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಕಾರ್ಖಾನೆ ನಿರಂತರವಾಗಿ ತೊಡಗಿಸಿಕೊಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ತಾಲೂಕಿನ ಮೈದೊಳಲು ಮತ್ತು ಮಂಗೋಟೆ ಗ್ರಾಮಗಳಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯ, ಶಂಕರ ನೇತ್ರಾಲಯ, ಯೂನಿಟಿ ಆಸ್ಪತ್ರೆ, ತಾಲೂಕು ಆರೋಗ್ಯ ಕೇಂದ್ರ ಮತ್ತು ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ಸಾಮಾನ್ಯ ಆರೋಗ್ಯ, ಮೂಳೆ, ಹೃದಯ, ನೇತ್ರ ತಪಾಸಣೆ, ಸ್ತ್ರೀರೋಗ, ಮಕ್ಕಳ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಸುಮಾರು ೬೦೦ ಗ್ರಾಮಸ್ಥರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆ ಸಹಕಾರದಿಂದಾಗಿ ತಾಲೂಕಿನ ಎಲ್ಲಾ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಪೂರೈಸಲು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಇಲಾಖೆ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲೂ ಕಾರ್ಖಾನೆ ವತಿಯಿಂದ ಸಹಕಾರ ನಿರೀಕ್ಷಿಸಲಾಗುವುದು ಎಂದರು.

ಕಾರ್ಖಾನೆ ಮುಖ್ಯ ಮಹಾಪ್ರಬಂಧಕ (ಸ್ಥಾವರ) ಕೆ.ಎಸ್‌. ಸುರೇಶ್, ಮಹಾಪ್ರಬಂಧಕ (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್‌ಕುಮಾರ್‌, ಮಹಾಪ್ರಬಂಧಕಿ (ಹಣಕಾಸು) ಶೋಭಾ ಶಿವಶಂಕರನ್, ಮಹಾಪ್ರಬಂಧಕ (ವಾಣಿಜ್ಯ) ಅರುಣ್ ಎಸ್. ನಾಯಕ್, ಕಾರ್ಮಿಕ ಮುಖಂಡರಾದ ಕುಮಾರಸ್ವಾಮಿ, ಆರ್. ಹರೀಶ್, ಇಳಯರಾಜ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಬಿಆರ್‌ಸಿ ಕಚೇರಿ ಸಿಬ್ಬಂದಿ ಪ್ರತಿಭಾ, ರೇಣುಕಾ, ತೀರ್ಥಪ್ಪ, ಜಯಲಕ್ಷ್ಮಿ ಹಾಗೂ ಮದರ್ ತೆರೇಸಾ ವಸತಿ ಶಾಲೆ ಪಾದ್ರಿಗಳಾದ ರೆನಿಶ್, ರೆಬೆಟೋ, ತರಂಗ ಕಿವುಡ ಮಕ್ಕಳ ಶಾಲೆಯ ತಾರಾಮಣಿ, ಸುಭಾಷ್ ಹಾಗೂ ಮೈಸೂರಿನ ಶ್ರವಣ ತಜ್ಞೆ ಇರ್ಫಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಒಟ್ಟು ೭ ಲಕ್ಷ ರು. ಮೌಲ್ಯದ ೧೦೫ ಜೊತೆ ಶ್ರವಣ ಸಾಧನಗಳು, ೧ ವ್ಹೀಲ್ ಚೇರ್ ಮತ್ತು ೮ ಎಂಎಸ್‌ಐಇಡಿ ಕಿಟ್‌ಗಳನ್ನು ವಿತರಿಸಲಾಯಿತು.

- - -

ಡಿ೮-ಬಿಡಿವಿಟಿ

ಭದ್ರಾವತಿ ತಾಲೂಕಿನ ನವಿಲೆಬಸವಾಪುರ ಮದರ್ ತೆರೇಸಾ ವಸತಿ ಶಾಲೆ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ಅಗತ್ಯವಿರುವ ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.