ಹಳಿ ಜೋಡಣೆ ಕಾಮಗಾರಿ : 22 ರೈಲುಗಳು ರದ್ದು ಮಾಡಿ ಆದೇಶ - ಯಾವ್ಯಾವುದು ಇಲ್ಲಿದೆ ಡೀಟೇಲ್ಸ್

| Published : Sep 13 2024, 01:31 AM IST / Updated: Sep 13 2024, 08:26 AM IST

ಹಳಿ ಜೋಡಣೆ ಕಾಮಗಾರಿ : 22 ರೈಲುಗಳು ರದ್ದು ಮಾಡಿ ಆದೇಶ - ಯಾವ್ಯಾವುದು ಇಲ್ಲಿದೆ ಡೀಟೇಲ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ವಾರಂಗಲ್‌ - ಹಸನಪರ್ಥಿ - ಕಾಝಿಪೇಟ್‌ ನಡುವೆ ಕ್ವಾರ್ಡ್‌ರುಪ್ಲಿಂಗ್‌ (ನಾಲ್ಕು ಹಳಿ ಅಳವಡಿಕೆ) ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 22 ರೈಲುಗಳು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

 ಬೆಂಗಳೂರು :  ವಾರಂಗಲ್‌ - ಹಸನಪರ್ಥಿ - ಕಾಝಿಪೇಟ್‌ ನಡುವೆ ಕ್ವಾರ್ಡ್‌ರುಪ್ಲಿಂಗ್‌ (ನಾಲ್ಕು ಹಳಿ ಅಳವಡಿಕೆ) ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 22 ರೈಲುಗಳು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಸೆ.28, ಅ.5 ಹಾಗೂ ಸೆ.29, ಅ.6 ರಂದು ಜಬಲ್‌ಪುರ - ಯಶವಂತಪುರ (12194/12193), ಸೆ.27, ಅ.1, ಅ.4 ಹಾಗೂ ಸೆ.29, ಅ.3, ಅ.6ರಂದು ಯಶವಂತಪುರ- ಕೊರ್ಬಾ (12251/12252), ಸೆ.26, 29ರಂದು ಪಾಟ್ನಾ- ಎಸ್ಎಂವಿಟಿ ಬೆಂಗಳೂರು (22353/22354), ಸೆ.20, ಸೆ.27, ಅ.4 ಹಾಗೂ ಸೆ.22, 29 ಅ.6ರಂದು ದಾನ್‌ಪುರ - ಎಸ್‌ಎಂವಿಟಿ ಬೆಂಗಳೂರು (03242/ 03241), ಸೆ.25, ಅ.2 ಹಾಗೂ ಸೆ.27, ಅ.4ರಂದು ದಾನ್‌ಪುರ-ಎಸ್‌ಎಂವಿಟಿ (03245/03246), ಸೆ.26, ಅ.3 ಹಾಗೂ ಸೆ.28, ಅ.5ರಂದು ದಾನ್‌ಪುರ-ಎಸ್‌ಎಂವಿಟಿ (03247,03248) ಬಂದು ಹೋಗುವ ರೈಲುಗಳು ರದ್ದಾಗಿದೆ.

ಸೆ.22, 23, 29, 30, ಅ.6 ಹಾಗೂ ಸೆ.24, 25, ಅ.1, 2, 8ರಂದು ದಾನ್‌ಪುರ- ಎಸ್‌ಎಂವಿಟಿ (03251/03252) , ಸೆ.24, ಅ.1, ಸೆ.26, ಅ.3ರಂದು ದಾನ್‌ಪುರ ಎಸ್‌ಎಂವಿಟಿ (03259/ 03260), ಸೆ.23,30 ಹಾಗೂ ಸೆ.25, ಅ.2ರಂದು ಕೆಎಸ್‌ಆರ್‌ ಬೆಂಗಳೂರು - ದಾನ್‌ಪುರ (06509/06510) ರೈಲುಗಳು ರದ್ದಾಗಿವೆ. ಸೆ.29, ಅ.6 ಹಾಗೂ ಅ.2, 9ರಂದು ಕೋಯಿಮತ್ತೂರು - ಹಜರತ್‌ ನಿಝಾಮುದ್ದೀನ್‌ (12647/12648), ಸೆ.26, ಅ.3, ಸೆ.24, ಅ.1 ರಂದು ಯಶವಂತಪುರ ಸನೆಹ್‌ವಾಲ್‌ (00633/ 00634) ರೈಲುಗಳು ರದ್ದಾಗಿವೆ.