228ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ, ತುಳಸಿ ಆರಾಧನೆ

| Published : Oct 24 2024, 12:52 AM IST / Updated: Oct 24 2024, 12:53 AM IST

ಸಾರಾಂಶ

228ನೇ ಭಾನುವಾರ ಪರಿಸರ ಸ್ನೇಹಿ ಅಭಿಯಾನ ತುಳಸಿ ಗಿಡ ನೆಡುವ ತುಳಸಿ ಆರಾಧನೆ ಕಾರ್ಯಕ್ರಮ ನಡೆಯಿತು. ಇಂತಹ ಅಭಿಯಾನ ಸಂಸ್ಥೆಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೋಟ ಶ್ರೀಕಾಂತ ಶೆಣೈ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಪಕ್ಕದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಕೋಟ, ಸಕಡ್ ಫೌಂಡೇಶನ್ ಕೋಟ ಇವರ ಸಹಯೋಗದೊಂದಿಗೆ 228ನೇ ಭಾನುವಾರ ಪರಿಸರಸ್ನೇಹಿ ಅಭಿಯಾನ ತುಳಸಿ ಗಿಡ ನೆಡುವ ತುಳಸಿ ಆರಾಧನೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೋಟದ ಸಾಮಾಜಿಕ ಕಾರ್ಯಕರ್ತ ಕೋಟ ಶ್ರೀಕಾಂತ್ ಶೆಣೈ ಅವರು, ಇಂತಹ ಅಭಿಯಾನಗಳು ಪಂಚವರ್ಣ ಸಂಸ್ಥೆಯ ಕ್ರಿಯಾಶೀಲತೆ ಸಾಕ್ಷಿಯಾಗಿದೆ. ಈ ಮೂಲಕ ಸಂಸ್ಥೆ ನಾಡಿಗೆ ಮಾದರಿ ಎಂದೆನಿಸಿದೆ ಎಂದರು.

ಸಾಮಾಜಿಕ ಸಂಘಟನೆಗಳು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳು ನೀಡಿದಾಗ ಸಮಾಜದಲ್ಲಿ ಬದಲಾವಣೆಗಳನ್ನು ಕಾಣಲು ಸಾಧ್ಯ. ಈ ದಿಸೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯ ಮುಕ್ತಗೊಳಿಸಲು ತುಳಸಿ ಗಿಡ ನೆಡುವ ಅಭಿಯಾನ ಆರೋಗ್ಯ ಪೂರ್ಣ ಪರಿಸರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಯುವ ಕೃಷಿಕ ದಿನೇಶ್ ಪೂಜಾರಿ ಹರ್ತಟ್ಟು, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.