ಸಾರಾಂಶ
ಕಡೂರುಜುಲೈ 22 ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ವಲಯ ಮಟ್ಟದ ಕ್ರೀಡಾಕೂಟ ನಡೆಯಲಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ಕಡೂರು
ಜುಲೈ 22 ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ವಲಯ ಮಟ್ಟದ ಕ್ರೀಡಾಕೂಟ ನಡೆಯಲಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.ಈ ಕುರಿತು ಮಾಹಿತಿ ನೀಡಿದ ಅವರು ಡಾ. ಬಿ.ಆರ್ ಅಂಬೇಡ್ಕರ್ ತಾಲೂಕು ಕ್ರೀಡಾಂಗಣದಲ್ಲಿ ಪಟ್ಟಣದ 6ನೇ ವಾರ್ಡಿನ ಪುರಸಭೆಯಿಂದ ದತ್ತು ಪಡೆದಿರುವ ಸರ್ಕಾರಿ ಹಿರಿಯ ಮಾದ್ಯಮಿಕ ಶಾಲೆ ಅತಿಥೇಯದಲ್ಲಿ ಕಡೂರು ಶೈಕ್ಷಣಿಕ ವಲಯ ಮಟ್ಟದ ಕ್ರೀಡಾಕೂಟ ನಡೆಯಲಿದೆ. ವಿಶೇಷವೆಂದರೆ ಈ ಶಾಲೆಯಲ್ಲಿ ಪೌರ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ. ಓದುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ತಾವು ಕೂಡ ಹಿಂದೆ ಈ ವಾರ್ಡಿನ ಸದಸ್ಯನಾಗಿ ಅಭಿವೃದ್ಧಿ ಕೆಲಸ ಮಾಡಿದ್ದು ಇದೀಗ ಪುರಸಭೆಯಿಂದ ದತ್ತು ಪಡೆದು ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕ್ರೀಡಾಕೂಟದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಶಂಕರ್ ಮಾತನಾಡಿ, ನಮ್ಮ ಅಂಬೇಡ್ಕರ್ ನಗರದ ಸರ್ಕಾರಿ ಮಾಧ್ಯಮಿಕ ಶಾಲೆಯನ್ನು ದತ್ತು ಪಡೆವ ಮೂಲಕ ಭಂಡಾರಿ ಶ್ರೀನಿವಾಸ್ ಅವರು ಮತ್ತು ಪುರಸಭೆ ಆಡಳಿತ ವರ್ಗ ಶಾಲೆ ಅಭಿವೃದ್ಧಿ ಶ್ರಮಿಸುತ್ತಿದೆ. ಕ್ರೀಡಾ ಕೂಟಕ್ಕೆ ಸುಮಾರು ₹2 ಲಕ್ಷ ವೆಚ್ಚ ತಗುಲಲಿದೆ. ಇದಕ್ಕೆ ಭಂಡಾರಿ ಶ್ರೀನಿವಾಸ್ ₹50 ಸಾವಿರ ರು. ದೇಣಿಗೆ ನೀಡಿದ್ದಾರೆ. ಈ ನಿಟ್ಟಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಶಾಲೆ ಅಭಿವೃದ್ಧಿಗೆ ಸಮಿತಿ ಮತ್ತು ಭೋಧಕ ವರ್ಗ ಮತ್ತು ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯೋಪಾದ್ಯಾಯರಾದ ಛಾಯಾದೇವಿ, ಪುರಸಭೆ ಸದಸ್ಯರಾದ ಗೋವಿಂದರಾಜು, ಸೈಯ್ಯದ್ ಯಾಸೀನ್,ಪುರಸಭೆ ಮಾಜಿ ಸದಸ್ಯ ಚಿನ್ನರಾಜು ಸೇರಿದಂತೆ ಮತ್ತಿತರರು ಇದ್ದರು.
5 ಕೆಕೆಡಿಯು1. ಕ್ರೀಡಾಕೂಟಕ್ಕೆೆ ಅಗತ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ತಂದಿರುವುದು.