೨೩ ಶೃಂಗೇರಿಯಲ್ಲಿ ಉದ್ಯೋಗಮೇಳ

| Published : Aug 19 2025, 01:00 AM IST

ಸಾರಾಂಶ

ಕೊಪ್ಪ: ಆ.೨೩ರಂದು ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಬೃಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಅಮ್ಮ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದ್ದಾರೆ.

ಕೊಪ್ಪ: ಆ.೨೩ರಂದು ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ಬೃಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಅಮ್ಮ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದ್ದಾರೆ. ಶನಿವಾರ ಕೊಪ್ಪ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಅವರು ರಾಜ್ಯದಲ್ಲಿ ಅಮ್ಮ ಫೌಂಡೇಶನ್ ನಿಂದ ನಡೆಯುವ ೫ನೇ ಉದ್ಯೋಗಮೇಳ ಇದಾಗಿದ್ದು ಶೃಂಗೇರಿ ಕ್ಷೇತ್ರದಲ್ಲಿ ನಡೆಯುತ್ತಿರುವ ೨ನೇ ಉದ್ಯೋಗ ಮೇಳ ಇದಾಗಿದೆ. ಪದವಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾ ಗುತ್ತಿದ್ದಾರೆ. ಅವರಿಗೆ ರೀತಿಯಲ್ಲಿ ಸಹಾಯವಾಗಲೆಂದು ಈ ಉದ್ಯೋಗಮೇಳ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಅಮ್ಮ ಫೌಂಡೇಶನ್ ಮತ್ತು ಉದ್ಯೋಗದಾತ ಫೌಂಡೇಶನ್ ಸಹಯೋಗದಲ್ಲಿ ನಡೆಯಲಿರುವ ಉದ್ಯೋಗಮೇಳದಲ್ಲಿ ರಾಜ್ಯದ ೩೦ಕ್ಕೂ ಹೆಚ್ಚು ಕಂಪನಿಗಳ ಸಮಾಗಮ ವಾಗಲಿದ್ದು. ೧೫೦೦ಕ್ಕೂ ಹೆಚ್ಚು ಉದ್ಯೋಗಾವಕಾಶ ಲಭ್ಯವಿದೆ. ಉಚಿತ ಪ್ರವೇಶ ಇದ್ದು ಶೃಂಗೇರಿ ಹಾಗೂ ಸುತ್ತಮುತ್ತಲಿನ ಯುವಜನರು ಈ ಸುವರ್ಣಾವಕಾಶ ತಪ್ಪಿಸಿಕೊಳ್ಳಬೇಡಿ ಎಂದರು.೨೩ರ ಶನಿವಾರ ಬೆಳಿಗ್ಗೆ ೯ರಿಂದ ನೋಂದಣಿ ಆರಪ್ರಂಭಗೊಳ್ಳಲಿದೆ. ೧೮ರಿಂದ ೩೫ ವರ್ಷ ವಯೋಮಿತಿ ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಡಿಗ್ರಿ ಅಥವಾ ಸ್ನಾತಕ್ಕೋತ್ತರ ಪದವಿ ಪಡೆದವರು, ಎಂಜಿನಿಯರಿಂಗ್ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್, ಸ್ವವಿವರದ ಎಲ್ಲಾ ದಾಖಲೆಗಳ ಒಟ್ಟು ೧೦ ಪ್ರತಿಯೊಂದಿಗೆ ನೋಂದಣಿ, ಹೆಚ್ಚಿನ ವಿವರಗಳಿಗೆ ೮೦೯೫೬೭೯೬೬೬ ರನ್ನು ಸಂಪರ್ಕಿಸಬಹುದು ಎಂದರು. ಬಿ.ಎಚ್. ದಿವಾಕರ್ ಭಟ್ ಭಂಡಿಗಡಿ, ದಿನೇಶ್ ಹೆಗಡೆ ಶೃಂಗೇರಿ, ಎಚ್.ಎಸ್. ಕಳಸಪ್ಪ, ಮಲ್ಲೇಶ್ ಹೆಗಡೆ, ನವೀನ್ ಕೊಲ್ಲಿ, ದೇವೇಂದ್ರ, ಶ್ರೀನಿವಾಸ್, ಅಚ್ಯುತ್, ಅರವಿಂದ್ ಮುಂತಾದವರು ಸುದ್ಧಿಗೋಷ್ಠಿಯಲ್ಲಿದ್ದರು.