ಸಾರಾಂಶ
ಚಿಕ್ಕಮಗಳೂರು, ಒಂದೇ ತಿಂಗಳ 10 ದಿನಗಳ ಅಂತರದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳು ಬಂದಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತ 23 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (ಸೆಕ್ಟರಲ್ ಮ್ಯಾಜಿಸ್ಟ್ರೇಟ್)ಗಳನ್ನು ನೇಮಕ ಮಾಡಿದೆ.
ಚಿಕ್ಕಮಗಳೂರು ತಾಲೂಕಿಗೆ 4 । ಎನ್.ಆರ್.ಪುರ 2 । ಉಳಿದ ತಾಲೂಕುಗಳಿಗೆ ತಲಾ ಓರ್ವ ಅಧಿಕಾರಿ ನೇಮಕ
ಕನ್ನಡಪ್ರಭ ವಾರ್ತೆ, ಕ್ಕಮಗಳೂರುಒಂದೇ ತಿಂಗಳ 10 ದಿನಗಳ ಅಂತರದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳು ಬಂದಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತ 23 ಮಂದಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ (ಸೆಕ್ಟರಲ್ ಮ್ಯಾಜಿಸ್ಟ್ರೇಟ್)ಗಳನ್ನು ನೇಮಕ ಮಾಡಿದೆ.ಈ ಎಲ್ಲಾ ಅಧಿಕಾರಿಗಳು ಸೆಪ್ಟೆಂಬರ್ 7 ರಿಂದ 25 ರವರೆಗೆ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಗೆ ಓರ್ವ ಅಧಿಕಾರಿಗಳನ್ನು ಇದಕ್ಕೆ ನೇಮಕ ಮಾಡಲಾಗಿದೆ.ನಾಲ್ವರು ಚಿಕ್ಕಮಗಳೂರು ತಾಲೂಕಿಗೆ, ಎನ್.ಆರ್.ಪುರ ತಾಲೂಕಿನಲ್ಲಿ ಇಬ್ಬರು, ಇನ್ನುಳಿದ ತಾಲೂಕುಗಳಲ್ಲಿ ತಲಾ ಓರ್ವ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜತೆಗೆ 9 ಮಂದಿ ರಿಸರ್ವ್ ಆಗಿ ಕಾರ್ಯ ನಿರ್ವಹಿಸಲು ನೇಮಕ ಮಾಡಲಾಗಿದೆ.ಸೂಕ್ಷ್ಮ ಜಿಲ್ಲೆ:
ಸೆ. 7 ರಂದು ಹಿಂದೂ ಬಾಂಧವರ ಗಣೇಶ ಚತುರ್ಥಿ, ಸೆ. 16 ರಂದು ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ತಮ್ಮ ಸಂಪ್ರದಾಯದಂತೆ ಆಚರಣೆ ಮಾಡಲಿದ್ದಾರೆ.ರಾಜ್ಯದ ಸೂಕ್ಷ್ಮ ಜಿಲ್ಲೆಗಳ ಪೈಕಿ ಚಿಕ್ಕಮಗಳೂರು ಸಹ ಒಂದು. ಪ್ರಮುಖವಾಗಿ ಹಬ್ಬಗಳು ಹಾಗೂ ಇತರೆ ಉತ್ಸವಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತದ ಹೆಚ್ಚಿನ ಜವಾಬ್ದಾರಿಯಾಗಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗಳು ಆಗಸ್ಟ್ 27 ರಂದು ನೀಡಿರುವ ವರದಿ ಆಧಾರದ ಮೇಲೆ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ವಿಶೇಷ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿ, ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಿದ್ದಾರೆ.ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಕ್ಷಣಕ್ಕೆ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿ ಭಂಗ ಉಂಟಾಗುವುದು ಕಂಡು ಬಂದರೆ ವಿಶೇಷ ಅಧಿಕಾರವನ್ನು ಚಲಾವಣೆ ಮಾಡಲು ಈ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.-- ಬಾಕ್ಸ್ಸ್---ಹೆಚ್ಚಿನ ಬಂದೋಬಸ್ತ್
ಕಳೆದ ವರ್ಷ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 1170 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಬಾರಿ ಅದಕ್ಕೂ ಹೆಚ್ಚು ಅಂದರೆ 1778 ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಗಣೇಶ ವಿಸರ್ಜನೆ ವೇಳೆ ನಡೆಯುವ ಮೆರವಣಿಗೆ ಮತ್ತು ಮುಸ್ಲಿಂ ಬಾಂಧವರ ಈದ್ ಮಿಲಾದ್ ಹಬ್ಬ ಹಾಗೂ ಅದರ ಅಂಗವಾಗಿ ಮೆರವಣಿಗೆ ನಡೆಸುವುದರಿಂದ ಇಂತಹ ಸಂದರ್ಭದಲ್ಲಿ ಹೆಚ್ಚಿನ ಬಂದೋಬಸ್ತ್ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.ಪೋಟೋ ಫೈಲ್ ನೇಮ್ 6 ಕೆಸಿಕೆಎಂ 3ಮಾರಾಟಕ್ಕೆ ಸಿದ್ದಗೊಂಡಿರುವ ಗಣೇಶ ಮೂರ್ತಿಗಳು.