2400 ಜನರಿಗೆ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ!

| Published : Sep 24 2024, 01:55 AM IST

ಸಾರಾಂಶ

ಚಡಚಣ ಏಷ್ಯಾದಲ್ಲಿಯೇ ಬೃಹತ್‌ ಹಾಗೂ ಖ್ಯಾತ ಜವಳಿ ವ್ಯಾಪಾರಸ್ಥರೆಂಬ ಖ್ಯಾತಿಗೆ ಪಾತ್ರರಾಗಿರುವ ಬಾಹುಬಲಿ ಮುತ್ತಿನ ಹಾಗೂ ಅಜಿತ್‌ ಮುತ್ತಿನ ಸಹೋದರರು ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಕಲ್ಪಿಸಲು ಮುಂದಾಗಿರುವುದು ಜನ ಮೆಚ್ಚುಗೆಗೆ ಕಾರಣವಾಗಿದೆ.

ಶಂಕರ ಹಾವಿನಾಳ

ಚಡಚಣ

ಏಷ್ಯಾದಲ್ಲಿಯೇ ಬೃಹತ್‌ ಹಾಗೂ ಖ್ಯಾತ ಜವಳಿ ವ್ಯಾಪಾರಸ್ಥರೆಂಬ ಖ್ಯಾತಿಗೆ ಪಾತ್ರರಾಗಿರುವ ಬಾಹುಬಲಿ ಮುತ್ತಿನ ಹಾಗೂ ಅಜಿತ್‌ ಮುತ್ತಿನ ಸಹೋದರರು ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಕಲ್ಪಿಸಲು ಮುಂದಾಗಿರುವುದು ಜನ ಮೆಚ್ಚುಗೆಗೆ ಕಾರಣವಾಗಿದೆ.

ಸುಮಾರು ₹2 ಕೋಟಿಗೂ ಅಧಿಕ ಸ್ವಂತ ಖರ್ಚಿನಲ್ಲಿ ಸುಮಾರು 2400ಕ್ಕೂ ಅಧಿಕ ಜನರನ್ನು ಉಚಿತವಾಗಿ ಉತ್ತರ ಭಾರತದ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ಕಲ್ಪಿಸಿದ ಪುಣ್ಯ ಬಾಹುಬಲಿ ಸಹೋದರರಿಗೆ ಸಲ್ಲುತ್ತದೆ. ರಾಜ್ಯದ ವಿಜಯಪುರ, ಬೆಳಗಾವಿ, ಬಾಗಲಕೋಟಿ, ಕಲಬುರ್ಗಿ, ಗದಗ, ಧಾರವಾಡ, ಹಾವೇರಿ ಸೇರಿದಂತೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ವಿವಿಧ ತಾಲೂಕಿನ ಸುಮಾರು 2400 ಜನರನ್ನು ವಿಶೇಷ ರೈಲಿನಲ್ಲಿ ಕರೆದುಕೊಂಡು ಹೋಗುತ್ತಿರುವುದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.

ಸೆ.28ಕ್ಕೆ ಮರಳಿ ರಾಜ್ಯಕ್ಕೆ

ಉತ್ತರ ಭಾರತದ ಪವಿತ್ರ ಕ್ಷೇತ್ರಗಳಲ್ಲೊಂದಾದ ಕಾಶಿ ಲಿಂಗದ ದರ್ಶನಕ್ಕೆ ಶುಕ್ರವಾರ (ಸೆ.20) ಸಂಜೆ ಇಂಡಿ ರೈಲು ನಿಲ್ದಾಣದಿಂದ ಪ್ರಾರಂಭವಾದ ಪ್ರಯಾಣ ಭಾನುವಾರ (ಸೆ.22) ಬೆಳಗಿನ ಜಾವ ಪ್ರಯಾಗರಾಜವನ್ನು ತಲುಪಲಿದೆ. ಅಲ್ಲಿಂದ 35 ಬಸ್‌ಗಳ ಮೂಲಕ ತ್ರೀವೇಣಿ ಸಂಗಮಕ್ಕೆ ಹೋಗಿ ಸ್ನಾನ ಮುಗಿಸಿಕೊಂಡು ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲಾಗುತ್ತದೆ. ನಂತರ 2 ದಿನಗಳ ಕಾಲ ಕಾಶಿ ದರ್ಶನ ಮಾಡಿಕೊಂಡು ಅಲ್ಲಿಯೇ ಸೆ.26 ರವರೆಗೆ ಉಳಿಯಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಂತರ ಸೆ.26 ರಂದು ರಾತ್ರಿ ಪ್ರಯಾಣ ಮುಗಿಸಿಕೊಂಡು ಸೆ.28 ರಂದು ಮರಳಿ ಊರಿಗೆ ಬರುವವರೆಗೆ ಅಗತ್ಯ ಊಟ, ತಿಂಡಿ ಮತ್ತಿತರ ಸೌಲಭ್ಯಗಳು ಕಲ್ಪಿಸಲಾಗಿದೆ ಎಂದು ವ್ಯವಸ್ಥಾಪಕ ಮಂಡಳಿ ಮಾಹಿತಿ ನೀಡಿದೆ.

800 ಜನರಿಗೆ ಶಿಖರ್ಜಿ ದರ್ಶನ

ಜಾರ್ಖಂಡ ರಾಜ್ಯದಲ್ಲಿರುವ ಪುಣ್ಯಕ್ಷೇತ್ರ ಸಮ್ಮೇದ ಶಿಖರ್ಜಿಯು ಜೈನ ತೀರ್ಥಂಕರ ಐಕ್ಯ ಪಾವನ ಸ್ಥಳವಾಗಿದೆ. ತೀರ್ಥಂಕರರು ಘೋರ ತಪಗೈದು ಮೋಕ್ಷ ಹೊಂದಿದ ಪವಾಡ ಕ್ಷೇತ್ರವಾಗಿದ್ದು, ಅವರ ಪಾದುಕೆಗಳ ದರ್ಶನ ಭಕ್ತರಿಗೆ ಲಭಿಸುವುದು. ಪುಣ್ಯಕ್ಷೇತ್ರ ಶಿಖರ್ಜಿಯ ದರ್ಶನ ಪಡೆಯಬೇಕಾದರೇ 12 ಕಿಮೀ ಕಾಲ್ನಡಿಗೆಯಲ್ಲಿ ಎತ್ತರವಾದ ಪರ್ವತವನ್ನೇರಿ ಹೋಗಬೇಕು. ಭಕ್ತರಿಗೆ ಬೇಕಾಗುವ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ವಯೋವೃದ್ಧರಿಗಾಗಿ ದರ್ಶನದ ಸುಗಮ ವ್ಯವಸ್ಥೆ ಮಾಡಲಾಗಿದೆ. ಈ ಪುಣ್ಯಕ್ಷೇತ್ರ ದರ್ಶನ ಮಾಡಿಸುವುದರೊಂದಿಗೆ ದರ್ಶನ ಪಡೆದವರಿಗೆ ನೆಮ್ಮದಿ ಸೇರಿದಂತೆ ಸಮಾಜಕ್ಕೆ ಧರ್ಮ ಸೇವೆ ಮಾಡಿದ ತೃಪ್ತಿ ದೊರೆಯುತ್ತದೆ. ಈ ಪುಣ್ಯ ಕ್ಷೇತ್ರ ದರ್ಶನ ಪ್ರತಿ ವರ್ಷವೂ ನಡೆಯಲಿದೆ ಎಂಬುವುದು ಖ್ಯಾತ ಜವಳಿ ವರ್ತಕ ಬಾಹುಬಲಿ ಮುತ್ತಿನ ಅವರ ಮನದಾಳದ ಮಾತು.ಬಾಕ್ಸ್‌

ಶಿಖರ್ಜಿಗೆ 7ನೇ ಬಾರಿ, ಕಾಶಿಗೆ ಮೂರನೇ ಬಾರಿ ಯಾತ್ರೆ, ಕಾಶಿ ಯಾತ್ರೆಗೆ ಮೊದಲ ಬಾರಿ 1000 ಜನರಿಗೆ, ಎರಡನೇ ಮಾಡಿ 1400 ಜನರಿಗೆ ಹಾಗೂ ಈ ಬಾರಿ 2400 ಜನರಿಗೆ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳಗಿದೆ. ಶಿಖರ್ಜಿಗೆ ಈ ಬಾರಿ 800 ಜನರಿಗೆ ದರ್ಶನ ಭಾಗ್ಯ ಕಲ್ಪಿಸಲಾಗಿದೆ.

-------------

ಕೋಟ್‌....

ಕೋವಿಡ್‌ದಿಂದ ಕಳೆದ 4 ವರ್ಷ ಯಾತ್ರೆ ಕೈಗೊಂಡಿರಲಿಲ್ಲ. ಈ ವರ್ಷ ಸುಮಾರು 2400 ಜನರಿಗೆ ದರ್ಶನ ಯಾತ್ರೆ ಕೈಗೊಂಡಿದ್ದೇವೆ. ಬಟ್ಟೆ ವ್ಯಾಪಾರದಲ್ಲಿ ಲಾಭ, ನಷ್ಟ ಲೆಕ್ಕಾ ಹಾಕಿದರೇ ಸೇವಾ ಮನೋಭಾವ ಇರುವುದಿಲ್ಲ. ಸಾರ್ವಜನಿಕ ಸೇವಾ ಮನೋಭಾವದಿಂದಲೂ ವ್ಯಾಪಾರದ ವೃದ್ಧಿಯಾಗುತ್ತದೆ. ಸರ್ವರಿಗೂ ಅನಕೂಲ ಹಾಗೂ ಏಳಿಗೆಗೆ ಪೂರಕವಾದ ಪುಣ್ಯಕೆಲಸ ಮಾಡುವುದರಿಂದ ಮನಸಿಗೆ ನೆಮ್ಮದಿ, ಶಾಂತಿ ತೃಪ್ತಿಯಾಗುತ್ತದೆ.

-ಅಜಿತ್‌ ಎನ್‌.ಮುತ್ತಿನ, ಜವಳಿ ಅಂಗಡಿ ಮಾಲೀಕರು ಚಡಚಣ.

ವ್ಯಾಪಾರ ಒಂದು ಭಾಗವಾದರೇ, ಸೇವೆ ಇನ್ನೊಂದು ಭಾಗ. ವ್ಯಾಪಾರ ಜೀವನ ಸಾಗಿಸಿದರೇ ಸೇವೆ ಮನಸಿನ ನೆಮ್ಮದಿ ವೃದ್ಧಿಸುವುದರ ಜತೆಗೆ ಎಲ್ಲರ ನಡುವಿನ ಸಂಬಂಧ, ಬೇಸುಗೆ, ಆತ್ಮಿಯತೆ ಹೆಚ್ಚಿಸುತ್ತದೆ.

- ಬಾಹುಬಲಿ ಮುತ್ತಿನ, ಜವಳಿ ಅಂಗಡಿ ಮಾಲೀಕರು ಚಡಚಣ.