ಸಾರಾಂಶ
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ 24ನೇ ಉಡುಪಿ ವಲಯ ಸಮ್ಮೇಳನವು ಬ್ರಹ್ಮಾವರದ ತುಂಗಾ ನಾರಾಯಣ ಸಂಕೀರ್ಣದ ಕಾಂ. ಟಿ. ಅಂಗರ ಸಭಾಂಗಣದ ಕಾಂ. ರಾಜು ಪೂಜಾರಿ ವೇದಿಕೆಯಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ 24ನೇ ಉಡುಪಿ ವಲಯ ಸಮ್ಮೇಳನವು ಬ್ರಹ್ಮಾವರದ ತುಂಗಾ ನಾರಾಯಣ ಸಂಕೀರ್ಣದ ಕಾಂ. ಟಿ. ಅಂಗರ ಸಭಾಂಗಣದ ಕಾಂ. ರಾಜು ಪೂಜಾರಿ ವೇದಿಕೆಯಲ್ಲಿ ನಡೆಯಿತು.ಮೊದಲಿಗೆ ಧ್ವಜಾರೋಹಣವನ್ನು ಸಿಪಿಐಎಂ ಪಕ್ಷದ ಹಿರಿಯ ಮುಖಂಡರಾದ ಪಿ.ವಿಶ್ವನಾಥ ರೈ ನೇರವೆರಿಸಿದರು. ನಂತರ ಎಲ್ಲ ಮುಖಂಡರು, ಸದಸ್ಯರು ಅಗಲಿದ ಸಂಗಾತಿಗಳಿಗೆ ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.ಸಮ್ಮೇಳನವನ್ನು ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿ ಕಾಂ. ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ. ಎಚ್. ನರಸಿಂಹ, ವೆಂಕಟೇಶ್ ಕೋಣಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ಬರಹಗಾರ, ಚಿಂತಕರು ಆದ ಅದಮಾರು ಶ್ರೀಪತಿ ಆಚಾರ್ಯ ಭಾಗವಹಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕಾಂ. ಕೆ. ವಿಶ್ವನಾಥ ವಹಿಸಿದ್ದರು. 3 ವರ್ಷದ ವರದಿಯನ್ನು ಪಕ್ಷದ ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೋಲ್ಲ ಮಂಡನೆ ಮಾಡಿದರು. ಶ್ರದ್ದಾಂಜಲಿಯನ್ನು ಕಾಂ. ಸರೋಜ ಅವರು ಓದಿ ಹೇಳಿದರು. ಸ್ವಾಗತವನ್ನು ಕಾಂ. ಕವಿರಾಜ್ ಎಸ್ ಹಾಗೂ ವಂದನಾರ್ಪಣೆಯನ್ನು ಶಶಿಧರ ಗೋಲ್ಲ ಮಾಡಿದರು.5 ಠರಾವು ಮಂಡನೆ:ಈ ಸಮ್ಮೇಳನದಲ್ಲಿ ಬೀಡಿ ಕಾರ್ಮಿಕರ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ, ಮೆಲ್ಸೇತುವೆ, ಅವೈಜ್ಞಾನಿಕ ರಸ್ತೆಗಳ ಸಮಸ್ಯೆ, ಕಟ್ಟಡ ಕಾರ್ಮಿಕರ ಸಮಸ್ಯೆಗಳಾದ ಮರಳು, ಸಿಮೆಂಟ್, ಕಬ್ಬಿಣದ ಬೆಲೆ ಎರಿಕೆ ಕುರಿತು ಮತ್ತು ಬ್ರಹ್ಮಾವರ ಸಮುದಾಯದ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಒತ್ತಾಯಿಸುವ, ಬಡಜನರ ರೇಶನ್ ಕಾರ್ಡ್ ರದ್ದತಿ ವಿರೋಧಿಸಿ ಒಟ್ಟು 5 ಠರಾವುಗಳನ್ನು ಮಂಡಿಸಲಾಯಿತು.