ಸಾರಾಂಶ
ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ 25 ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತರೀಕೆರೆ
ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ 25 ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.ಸೋಮವಾರ ಪಟ್ಟಣದ 13ನೇ ವಾರ್ಡ್‌ನಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ೧೦ ಲಕ್ಷ ರು. ಅನುದಾನದಲ್ಲಿ ನಿರ್ಮಿಸಲಿರುವ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. 18ನೇ ವಾರ್ಡ್‌ನಲ್ಲಿಯೂ 10 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣವಾಗಲಿದೆ. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಯೋಗಾಲಯ ಅಭಿವೃದ್ಧಿಗೆ 10 ಲಕ್ಷ ರು. ಲಿಂಗದಹಳ್ಳಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು 5 ಲಕ್ಷ ನೀಡಲಾಗಿದೆ ಎಂದು ತಿಳಿಸಿದರು.
ಸಿಎಂ ವಿಶೇಷ ನಿಧಿಯ ಅನುದಾನದಲ್ಲಿ ತರೀಕೆರೆ ಪಟ್ಟಣದ ಅಭಿವೃದ್ಧಿಗೆ 5 ಕೋಟಿ, ಅಜ್ಜಂಪುರ ಪಟ್ಟಣದ ಅಭಿವೃದ್ಧಿಗೆ 2 ಕೋಟಿ, ಗ್ರಾಮಾಂತರ ರಸ್ತೆ ಅಭಿವೃದ್ದಿಗೆ 13 ಕೋಟಿ , 206 ರಸ್ತೆ ಗೆ 4 ಕೋಟಿ ರು.. ಬಿಡುಗಡೆಯಾಗಿದೆ. ಪಟ್ಟಣದ ಪ್ರತೀ ಮನೆಗೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು 54 ಕೋಟಿ ರು. ಯುಜಿಡಿ ಕಾಮಗಾರಿ ನಿರ್ವಹಿಸಲು 34 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.ಪುರಸಭೆ ಸದಸ್ಯರಾದ ಪರಮೇಶ್, ಚಂದ್ರಶೇಖರ್, ವಸಂತಕುಮಾರ್, ಅನಿಲ್‌ಕುಮಾರ್, ರಂಗನಾಥ್, ಕುಮಾರ್, ಅಬ್ಬಾಸ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮಸ ಮುಖಂಡರಾದ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.