ಸಾರಾಂಶ
ಮಾಲೂರು: ಶಿಕ್ಷಕರ ಅಜಾಗರೂತೆಯಿಂದ ಸಮುದ್ರಪಾಲಾದ ಮುಳಬಾಗಿಲಿನ ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ಕು ಹೆಣ್ಣು ಮಕ್ಕಳ ಕುಟುಂಬಕ್ಕೆ ಸರ್ಕಾರವು ತಲಾ 25 ಲಕ್ಷ ರು. ಪರಿಹಾರ ಧನ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ಪೊಲೀಸ್ ಠಾಣೆಗೆ ಕದಸಂಸ ಸಂಚಾಲಕ ಎಸ್.ಎಂ.ವೆಂಕಟೇಶ್ ಅವರ ನೇತೃತ್ವದಲ್ಲಿ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೆಂಕಟೇಶ್, ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಂ.ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಪ್ರವಾಸಕ್ಕಾಗಿ ಮುರಡೇಶ್ವರಕ್ಕೆ ತೆರಳಿದ್ದು, ಅಲ್ಲಿ ಶಿಕ್ಷಕರು, ಮೇಲ್ವಿಚಾರಕರ ಅಜಾಗರೂಕತೆಯಿಂದ 9ನೇ ತರಗತಿಯ 15 ವರ್ಷ ವಯಸ್ಸಿನ ಶ್ರಾವಂತಿ, ದೀಕ್ಷಾ, ಜೆ.ಲಾವಣ್ಯ ಹಾಗೂ ವಂದನಾ ಸಮುದ್ರದ ಪಾಲಾಗಿದ್ದು, ಈ ದುರ್ಘಟನೆಗೆ ನೇರವಾಗಿ ಶಾಲೆಯ ಪ್ರಾಂಶುಪಾಲರು ಹಾಗೂ ಮೇಲ್ವಿಚಾರಕರು ಹೊಣೆಯಾಗಿದ್ದಾರೆ. ಪೋಷಕರು ಮಕ್ಕಳ ಸಾವಿನಿಂದ ನೊಂದು ಹೋಗಿದ್ದಾರೆ. ಘಟನೆಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಜೊತೆ ಮೃತ ಮಕ್ಕಳ ಕುಟುಂಬದವರಿಗೆ ತಲಾ 25 ಲಕ್ಷ ರು.ಗಳನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಜಿಲ್ಲಾ ಸಂಚಾಲಕ ಚವ್ವೇನಹಳ್ಳಿ ವಿಜಿ ,ತಿರುಮಲೇಶ್ ,ನಾರಾಯಣಸ್ವಾಮಿ ,ಮುನಿರಾಜು,ಉಸರಹಳ್ಳಿ ಗೋಪಿ ,ಉಳ್ಳೇರಹಳ್ಳಿ ಮುನಿರಾಜು,ಮುರಳಿ,ವೆಂಕಟೇಶಪ್ಪ,ಕೃಷ್ಣಪ್ಪ ಇನ್ನಿತರರು ಇದ್ದರು..