ಕೆಜಿಎಫ್‌ ಸ್ಮಶಾನ ಅಭಿವೃದ್ಧಿಗೆ ₹25 ಲಕ್ಷ ಮಂಜೂರು

| Published : Mar 07 2025, 12:49 AM IST

ಸಾರಾಂಶ

ಹಿಂದು ಮುಸ್ಲಿಂ ಕ್ರಿಶ್ಚಿಯನ್ ಸಮುದಾಯಗಳ ಸ್ಮಶಾನವು ಅಕ್ಕ ಪಕ್ಕದಲ್ಲಿ ಇರುವುದು ಕೆಜಿಎಫ್ ನಗರದಲ್ಲಿ ಮಾತ್ರ. ಅದರಲ್ಲೂ ಚಾಂಪೀಯಿನ್ ರೀಫ್ ಸ್ಮಶಾನದಲ್ಲಿ ಇಂತಹ ಸ್ಮಶಾನದಲ್ಲಿ ಶವಗಳನ್ನು ಹೂಳಲು ಎಲ್ಲಾ ಸಮುದಾಯಗಳ ಜನರು ಆಗಮಿಸುತ್ತಾರೆ. ಪ್ರತಿ ವರ್ಷ ನವೆಂಬರ್ ತಿಂಗಳ ೨ ನೇ ತಾರೀಖಿನಂದು ಕಲ್‌ರೈ ತಿರುನಲ್ ಎಂಬ ಹಬ್ಬವನ್ನು ಆಚರಿಸುತ್ತಾರೆ

ಕನ್ನಡಪ್ರಭ ವಾರ್ತೆ ಕೆಜಿಎಫ್ ಸ್ಮಶಾನದ ಪರಿಸರ ಅಭಿವೃದ್ಧಿಗಾಗಿ ಶಾಸಕರ ಮನವೂಲಿಸಿ ೨೫ ಲಕ್ಷ ಅನುದಾನವನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾದ್ದು, ಸ್ಮಶಾನದ ಮುಂಭಾಗದಲ್ಲಿರುವ ಫುಟ್‌ಪಾತ್‌ ಅನ್ನು ಸಿಸಿ ರಸ್ತೆಯಾಗಿ ಮಾರ್ಪಡಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಇಂಧಿರಾಗಾಧಿ ದಯಶಂಕರ್ ಹೇಳಿದರು.ಹಿಂದು ಮುಸ್ಲಿಂ ಕ್ರಿಶ್ಚಿಯನ್ ಸಮುದಾಯಗಳ ಸ್ಮಶಾನವು ಅಕ್ಕ ಪಕ್ಕದಲ್ಲಿ ಇರುವುದು ಕೆಜಿಎಫ್ ನಗರದಲ್ಲಿ ಮಾತ್ರ. ಅದರಲ್ಲೂ ಚಾಂಪೀಯಿನ್ ರೀಫ್ ಸ್ಮಶಾನದಲ್ಲಿ ಇಂತಹ ಸ್ಮಶಾನದಲ್ಲಿ ಶವಗಳನ್ನು ಹೂಳಲು ಎಲ್ಲಾ ಸಮುದಾಯಗಳ ಜನರು ಆಗಮಿಸುತ್ತಾರೆ. ಪ್ರತಿ ವರ್ಷ ನವೆಂಬರ್ ತಿಂಗಳ ೨ ನೇ ತಾರೀಖಿನಂದು ಕಲ್‌ರೈ ತಿರುನಲ್ ಎಂಬ ಹಬ್ಬವನ್ನು ಆಚರಿಸುತ್ತಾರೆ ಎಂದರು.

ಸ್ಮಶಾನದ ಮುಂದೆ ಸಿಸಿ ರಸ್ತೆ

ಈ ಹಬ್ಬದ ಸಂದರ್ಭದಲ್ಲಿ ವಿವಿಧ ಊರುಗಳಿಂದ ಅಂದು ಸ್ಮಶಾನಕ್ಕೆ ಆಗಮಿಸಿ ಮೃತಪಟ್ಟ ತಮ್ಮ ಮನೆಯ ಮಂದಿಗೆ ಶಾಂತಿ ಕೊರುತ್ತಾರೆ. ಇಂತಹ ಪವಿತ್ರವಾದ ಸ್ಥಳಕ್ಕೆ ಆಗಮಿಸುವವರಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಸ್ಮಶಾನದ ಮುಂಭಾಗದ ಪುಟ್‌ಪಾತ್‌ಗೆ ಸಿಸಿ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಹೇಳಿದರು.ಹಿರಿಯ ಕಾಂಗ್ರೆಸ್ ನಗರಸಭೆ ಸದಸ್ಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಯಪಾಲ್ ಮಾತನಾಡಿ ಇದು ಅತ್ಯಂತ ಉತ್ತಮವಾದ ಕೆಲಸ ಹಿಂದೆ ಕ್ಷೇತ್ರದಿಂದ ಆಯ್ಕೆಯಾದ ಒಬ್ಬ ಶಾಸಕರು ಚಾಂಪೀಯನ್‌ ರೀಫ್ ಸ್ಮಶಾನದ ಅಭಿವೃದ್ಧಿಯತ್ತ ಗಮಹರಿಸಿರಲಿಲ್ಲ. ಆದರೆ ಹಾಲಿ ಅಧ್ಯಕ್ಷೆ ಇಂಧಿರಾಗಾಧಿ ಶಾಸಕಿ ರೂಪಕಲಾಶಶಿಧರ್ ರವರ ಮನವೂಲಿಸಿ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಇದು ಮೆಚ್ಚಕ ತಕ್ಕ ವಿಚಾರವೆಂದು ಹೇಳಿದರು.

ತಾವು ಪ್ರತಿನಿಧಿಸುತ್ತಿರುವ ೭ ನೇ ವಾರ್ಡ್ನಲ್ಲಿರುವ ಟ್ಯಾಂಕ್ ಇದ್ದು ನಿತ್ಯ ಮಕ್ಕಳು ಟ್ಯಾಂಕ್‌ಗೆ ಇಳಿದು ಈಜಾಡುವುದರಿಂದ ಟ್ಯಾಂಕ್ ನಲ್ಲಿನ ನೀರು ಕಲುಷಿತಗೊಂಡಿದ್ದು ಸರಿ ಸುಮಾರು ೪ ವಾಡ್‌ಗಳಿಗೆ ನೀರು ಸರಬರಾಜು ಆಗುತ್ತಿದೆ ಕಲುಷಿತ ನೀರು ಕುಡಿದು ಸಾಂಕ್ರಮಿಕ ಖಾಯಿಲೆಗಳು ಹರಡಿದರೆ ಯಾರು ಹೋಣೆ ಆದ್ದರಿಂದ ಟ್ಯಾಂಕ್ ಸುತ್ತ ಕಾಂಪೌAಡ್ ಗೊಡೆ ನಿರ್ಮೀಸಿ ಮಕ್ಕಳು ಒಳಗೆ ಬಾರದಂತೆ ತಡೆಯಬೇಕು ಎಂದು ಒತ್ತಾಯಿಸಿದರು. ಈ ವೇಳೆ ನಗರಸಭೆ ಉಪಾಧ್ಯಕ್ಷ ಜರ್ಮನ್ ,ಸದಸ್ಯರಾದ ಮಣಿಕಂಠನ್, ಪ್ರಭು, ಮಗಿ,ಅನ್ಬು ಪ್ರವೀಣ್, ವಿಜಯ್ಕುಮಾರ್ ಹಾಗೂ ಇತರರು ಹಾಜರಿದ್ದರು.