ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ಕೇಂದ್ರ ಲೋಕಸೇವಾ ಆಯೋಗದ 2023ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಅಭ್ಯರ್ಥಿಗಳಾದ ಆರ್. ರಮ್ಯಾ, ವಿಜಯಪುರದ ವಿಜೇತಾ ಹೊಸಮನಿ, ದಾವಣಗೆರೆ ಮೂಲದ ಸೌಭಾಗ್ಯ ಬೀಳಗಿಮಠ, ಬೆಂಗಳೂರಿನ ಠಾಣೆಯೊಂದರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಕುರುಬರ್ ಸೇರಿದಂತೆ ರಾಜ್ಯದ ಸುಮಾರು 25ಕ್ಕೂ ಹೆಚ್ಚು ಮಂದಿ ಉತ್ತಮ ರ್‍ಯಾಂಕ್‌ನೊಂದಿಗೆ ಭಾರತೀಯ ನಾಗರಿಕ ಸೇವೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ಅರ್ಹತೆ ಪಡೆದಿದ್ದಾರೆ.ವಿಜಯಪುರದ ವಿಜೇತಾ ಹೊಸಮನಿ ಅವರು ಅಖಿಲ ಭಾರತ ಮಟ್ಟದಲ್ಲಿ 100ನೇ ರ್‍ಯಾಂಕ್ ಪಡೆದಿದ್ದು, ಅವರೇ ಟಾಪರ್ ಎಂದು ಹೇಳಲಾಗುತ್ತಿದೆ, ದಾವಣಗೆರೆಯ ಸೌಭಾಗ್ಯ ಬೀಳಗಿಮಠ 101ನೇ ರ್‍ಯಾಂಕ್ ಪಡೆದಿದ್ದು ಎರಡನೇ ಟಾಪರ್ ಆಗಿದ್ದಾರೆ ಎನ್ನಲಾಗಿದೆ.
ಕೋಚಿಂಗ್ ಹೋಗದೇ ಸ್ವಂತ ಯತ್ನ:ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪದವೀಧರೆಯಾದ ಸೌಭಾಗ್ಯ ಅವರು ಯಾವುದೇ ಕೋಚಿಂಗ್‌ಗೆ ಹೋಗದೆ ಮನೆಯಲ್ಲಿ ಸ್ವಂತ ತರಬೇತಿಯೊಂದಿಗೆ ಎರಡನೇ ಪ್ರಯತ್ನದಲ್ಲೇ ಉತ್ತಮ ಸಾಧನೆ ಮಾಡಿದ್ದಾರೆ. ಶಾಂತಪ್ಪ ಕುರುಬರ ತಮ್ಮ 8ನೇ ಪ್ರಯತ್ನದಲ್ಲಿ 644ನೇ ರ್‍ಯಾಂಕ್ ಪಡೆದಿದ್ದಾರೆ. ಹುಬ್ಬಳ್ಳಿಯ ಕೃಪಾ ಜೈನ್ 440ನೇ ರ್‍ಯಾಂಕ್, ದೃಷ್ಟಿ ದೋಷವಿರುವ ಕೆ.ಟಿ.ಮೇಘನಾ 721ನೇ ರ್‍ಯಾಂಕ್ ಪಡೆದಿದ್ದಾರೆ. ಇವರು ಈಗಾಗಲೇ ಇಂಡಿಯನ್ ಇನ್ಫರ್ಮೇಷನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಪ್ರಮೀಳಾ ಅವರ ಮಗಳು ಆರ್.ಯಶಸ್ವಿನಿ 379ನೇ ರ್‍ಯಾಂಕ್ ಪಡೆದಿದ್ದಾರೆ.
25 ಮಂದಿ ಉನ್ನತ ಹುದ್ದೆಗೆ ಅರ್ಹ:ಅಂದಾಜಿನ ಪ್ರಕಾರ ಈ ವರ್ಷ 75ಕ್ಕೂ ಹೆಚ್ಚಿನ ರಾಜ್ಯದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇದರಲ್ಲಿ 25ಕ್ಕೂ ಹೆಚ್ಚು ಮಂದಿ ವಿವಿಧ ನಾಗರಿಕ ಸೇವಾ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ.
ಉತ್ತಮ ರ್‍ಯಾಂಕ್ ಪಡೆದಿರುವ ಅಭ್ಯರ್ಥಿಗಳಲ್ಲಿ ಬಹುತೇಕರು ಇನ್‌ಸೈಟ್ಸ್ ಐಎಎಸ್ ಕೋಚಿಂಗ್ ಅಕಾಡೆಮಿ, ಇಂಡಿಯಾ 4 ಐಎಎಸ್, ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ, ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸೇರಿದಂತೆ ಪ್ರಮುಖ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದವರಾಗಿದ್ದಾರೆ.ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಪುತ್ರಿಗೆ 366ನೇ ರ್‍ಯಾಂಕ್
ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಬಿಬಿಎಂಪಿ ಆಡಳಿತಾಧಿಕಾರಿ ರಾಜೇಶ್ ಸಿಂಗ್ ಅವರ ಪುತ್ರಿ ಸಂಸ್ಕೃತಿ ಸಿಂಗ್ ಅವರು ಅಖಿಲ ಭಾರತ ಮಟ್ಟದಲ್ಲಿ 366ನೇ ರ್‍ಯಾಂಕ್ ಪಡೆದಿದ್ದಾರೆ. ಇವರ ಕುಟುಂಬ ತಲೆಮಾರುಗಳಿಂದಲೂ ಭಾರತೀಯ ನಾಗರಿಕ ಸೇವಾ ಹುದ್ದೆಗಳಲ್ಲೇ ಸಾಗಿ ಬಂದಿದೆ.ಉತ್ತಮ ರ್‍ಯಾಂಕ್ ಪಡೆದ ಕರ್ನಾಟಕದ ಅಭ್ಯರ್ಥಿಗಳುಹೆಸರುರ್‍ಯಾಂಕ್
ಸೌಭಾಗ್ಯ ಎಸ್. ಬಿಳಗಿಮಠ101ನಾಗೇಂದ್ರಬಾಬು ಕುಮಾರ್ 160
ತೇಜಸ್ ಕೆ.342ಯಶ್ವಿನಿ ಆರ್.379
ಶಶಾಂತ್ ಎನ್.ಎಂ459 ಪೂಲಾ ಧನುಷ್480ಸತೀಶ್ ಶ್ರೀಶೈಲ್ ಸೋಮಜಲ್538ಮೇಘನಾ ಐ.ಎನ್589ಭಾನುಪ್ರಕಾಶ್ ಜೆ.600ಸುಮಾ ಎಚ್.ಕೆ.635ಶಾಂತಪ್ಪ ಕುರುಬರ644ಭರತ್ ಸಿ.ಯಾರಮ್667ತೇಜಸ್.ಎನ್668ಪ್ರಮೋದ್ ಆರಾಧ್ಯ ಎಚ್.ಆರ್671ವೈಶಂಕ್ ಭಾಗೀ684ನವ್ಯ ಕೆ692ಮೇಘನಾ ಕೆ.ಟಿ.721ಚಂದನಾ ಬಿ.ಎಸ್731ವಿವೇಕ್ ರೆಡ್ಡಿ .ಎನ್741ಸತೀಶ್ ದೀಪ್748ಲೇಖನಾ ಎಂ.777ತೇಜಸ್ವಿನಿ.ಎನ್787ರಕ್ಷಿತ್ ಕೆ.ಗೌಡ802ಹಂಸಾಶ್ರೀ ಎನ್.ಎ866ಸುಪ್ರೀತ್ ಸಂತೋಷ್868ಅಭಿಷೇಕ್ ಕೆ.ಎಚ್.901ವಸಂತ ಕುಮಾರ್.ಜಿ902ಟಿ.ವಿಜಯಕುಮಾರ್953ತನುಜ್ ಕುಮಾರ್.ಕೆ973 100ನೇ ರ್‍ಯಾಂಕ್ ವಿಜೇತೆ ವಿಜಯಪುರದ ವಿಜೇತಾ ರಾಜ್ಯದ ನಂ.1 ಕನ್ನಡಪ್ರಭ ವಾರ್ತೆ, ಬೆಂಗಳೂರುಕೇಂದ್ರ ಲೋಕಸೇವಾ ಆಯೋಗದ 2023ನೇ ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಅಭ್ಯರ್ಥಿಗಳಾದ ಆರ್. ರಮ್ಯಾ, ವಿಜಯಪುರದ ವಿಜೇತಾ ಹೊಸಮನಿ, ದಾವಣಗೆರೆ ಮೂಲದ ಸೌಭಾಗ್ಯ ಬೀಳಗಿಮಠ, ಬೆಂಗಳೂರಿನ ಠಾಣೆಯೊಂದರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಕುರುಬರ್ ಸೇರಿದಂತೆ ರಾಜ್ಯದ ಸುಮಾರು 25ಕ್ಕೂ ಹೆಚ್ಚು ಮಂದಿ ಉತ್ತಮ ರ್‍ಯಾಂಕ್‌ನೊಂದಿಗೆ ಭಾರತೀಯ ನಾಗರಿಕ ಸೇವೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ಅರ್ಹತೆ ಪಡೆದಿದ್ದಾರೆ.
ವಿಜಯಪುರದ ವಿಜೇತಾ ಹೊಸಮನಿ ಅವರು ಅಖಿಲ ಭಾರತ ಮಟ್ಟದಲ್ಲಿ 100ನೇ ರ್‍ಯಾಂಕ್ ಪಡೆದಿದ್ದು, ಅವರೇ ಟಾಪರ್ ಎಂದು ಹೇಳಲಾಗುತ್ತಿದೆ, ದಾವಣಗೆರೆಯ ಸೌಭಾಗ್ಯ ಬೀಳಗಿಮಠ 101ನೇ ರ್‍ಯಾಂಕ್ ಪಡೆದಿದ್ದು ಕ್ರಮವಾಗಿ ಎರಡು ಮತ್ತು ಮೂರನೇ ಟಾಪರ್ ಆಗಿದ್ದಾರೆ ಎನ್ನಲಾಗಿದೆ.ಕೋಚಿಂಗ್ ಹೋಗದೇ ಸ್ವಂತ ಯತ್ನ:
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪದವೀಧರೆಯಾದ ಸೌಭಾಗ್ಯ ಅವರು ಯಾವುದೇ ಕೋಚಿಂಗ್‌ಗೆ ಹೋಗದೆ ಮನೆಯಲ್ಲಿ ಸ್ವಂತ ತರಬೇತಿಯೊಂದಿಗೆ ಎರಡನೇ ಪ್ರಯತ್ನದಲ್ಲೇ ಉತ್ತಮ ಸಾಧನೆ ಮಾಡಿದ್ದಾರೆ. ಶಾಂತಪ್ಪ ಕುರುಬರ ತಮ್ಮ 8ನೇ ಪ್ರಯತ್ನದಲ್ಲಿ 644ನೇ ರ್‍ಯಾಂಕ್ ಪಡೆದಿದ್ದಾರೆ. ಹುಬ್ಬಳ್ಳಿಯ ಕೃಪಾ ಜೈನ್ 440ನೇ ರ್‍ಯಾಂಕ್, ದೃಷ್ಟಿ ದೋಷವಿರುವ ಕೆ.ಟಿ.ಮೇಘನಾ 721ನೇ ರ್‍ಯಾಂಕ್ ಪಡೆದಿದ್ದಾರೆ. ಇವರು ಈಗಾಗಲೇ ಇಂಡಿಯನ್ ಇನ್ಫರ್ಮೇಷನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಪ್ರಮೀಳಾ ಅವರ ಮಗಳು ಆರ್.ಯಶಸ್ವಿನಿ 379ನೇ ರ್‍ಯಾಂಕ್ ಪಡೆದಿದ್ದಾರೆ.25 ಮಂದಿ ಉನ್ನತ ಹುದ್ದೆಗೆ ಅರ್ಹ:
ಅಂದಾಜಿನ ಪ್ರಕಾರ ಈ ವರ್ಷ 75ಕ್ಕೂ ಹೆಚ್ಚಿನ ರಾಜ್ಯದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇದರಲ್ಲಿ 25ಕ್ಕೂ ಹೆಚ್ಚು ಮಂದಿ ವಿವಿಧ ನಾಗರಿಕ ಸೇವಾ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ.ಉತ್ತಮ ರ್‍ಯಾಂಕ್ ಪಡೆದಿರುವ ಅಭ್ಯರ್ಥಿಗಳಲ್ಲಿ ಬಹುತೇಕರು ಇನ್‌ಸೈಟ್ಸ್ ಐಎಎಸ್ ಕೋಚಿಂಗ್ ಅಕಾಡೆಮಿ, ಇಂಡಿಯಾ 4 ಐಎಎಸ್, ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ, ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸೇರಿದಂತೆ ಪ್ರಮುಖ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದವರಾಗಿದ್ದಾರೆ.
ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಪುತ್ರಿಗೆ 366ನೇ ರ್ಯಾಂಕ್ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಬಿಬಿಎಂಪಿ ಆಡಳಿತಾಧಿಕಾರಿ ರಾಜೇಶ್ ಸಿಂಗ್ ಅವರ ಪುತ್ರಿ ಸಂಸ್ಕೃತಿ ಸಿಂಗ್ ಅವರು ಅಖಿಲ ಭಾರತ ಮಟ್ಟದಲ್ಲಿ 366ನೇ ರ್‍ಯಾಂಕ್ ಪಡೆದಿದ್ದಾರೆ. ಇವರ ಕುಟುಂಬ ತಲೆಮಾರುಗಳಿಂದಲೂ ಭಾರತೀಯ ನಾಗರಿಕ ಸೇವಾ ಹುದ್ದೆಗಳಲ್ಲೇ ಸಾಗಿ ಬಂದಿದೆ.
ಉತ್ತಮ ರ್‍ಯಾಂಕ್ ಪಡೆದ ಕರ್ನಾಟಕದ ಅಭ್ಯರ್ಥಿಗಳುಹೆಸರುರ್ಯಾಂಕ್ಸೌಭಾಗ್ಯ ಎಸ್. ಬಿಳಗಿಮಠ101
ನಾಗೇಂದ್ರಬಾಬು ಕುಮಾರ್ 160ತೇಜಸ್ ಕೆ.342
ಯಶ್ವಿನಿ ಆರ್.379ಶಶಾಂತ್ ಎನ್.ಎಂ459 ಪೂಲಾ ಧನುಷ್480ಸತೀಶ್ ಶ್ರೀಶೈಲ್ ಸೋಮಜಲ್538ಮೇಘನಾ ಐ.ಎನ್589ಭಾನುಪ್ರಕಾಶ್ ಜೆ.600ಸುಮಾ ಎಚ್.ಕೆ.635ಶಾಂತಪ್ಪ ಕುರುಬರ644ಭರತ್ ಸಿ.ಯಾರಮ್667ತೇಜಸ್.ಎನ್668ಪ್ರಮೋದ್ ಆರಾಧ್ಯ ಎಚ್.ಆರ್671ವೈಶಂಕ್ ಭಾಗೀ684ನವ್ಯ ಕೆ692ಮೇಘನಾ ಕೆ.ಟಿ.721ಚಂದನಾ ಬಿ.ಎಸ್731ವಿವೇಕ್ ರೆಡ್ಡಿ .ಎನ್741ಸತೀಶ್ ದೀಪ್748ಲೇಖನಾ ಎಂ.777ತೇಜಸ್ವಿನಿ.ಎನ್787ರಕ್ಷಿತ್ ಕೆ.ಗೌಡ802ಹಂಸಾಶ್ರೀ ಎನ್.ಎ866ಸುಪ್ರೀತ್ ಸಂತೋಷ್868ಅಭಿಷೇಕ್ ಕೆ.ಎಚ್.901ವಸಂತ ಕುಮಾರ್.ಜಿ902ಟಿ.ವಿಜಯಕುಮಾರ್953ತನುಜ್ ಕುಮಾರ್.ಕೆ973ಇದು ನನ್ನ ಐದನೆ ಪ್ರಯತ್ನವಾಗಿದೆ. ಮೊದಲ ಮೂರು ಪ್ರಯತ್ನ ಲಿಖಿತ ಪರೀಕ್ಷೆ ಪೂರ್ಣಗೊಳಿಸಿದ್ದೆ. ಸಂದರ್ಶನಕ್ಕೆ ಎರಡನೇ ಪ್ರಯತ್ನವಾಗಿದೆ. ಅಂತಿಮವಾಗಿ ಯುಪಿಎಸ್‌ಸಿ ಕ್ಲಿಯರ್ ಆಗಿರುವುದು ಖುಷಿಯಾಗುತ್ತಿದೆ. ತಂದೆ ಅವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ಎರಡು ಪ್ರಯತ್ನಗಳು ಶಿವಮೊಗ್ಗದಲ್ಲಿಯೇ ಓದಿಕೊಂಡು ಪ್ರಯತ್ನಿಸಿದೆ. ಹೆಚ್ಚಿನ ತರಬೇತಿಗಾಗಿ ಕೊನೆಯ ಮೂರು ಪ್ರಯತ್ನಗಳಿಗೆ ಬೆಂಗಳೂರಿಗೆ ಬಂದಿದ್ದೆ.- ಭರತ್ ಸಿ ಯಾರಮ್, 667ನೇ ರ್‍ಯಾಂಕ್