ಮಾಹಿತಿ ನೀಡದ ತಹಸೀಲ್ದಾರ್‌ಗೆ 25 ಸಾವಿರ ದಂಡ

| Published : Dec 28 2023, 01:46 AM IST

ಸಾರಾಂಶ

ದಾಬಸ್‌ಪೇಟೆ: ಮಾಹಿತಿ ಹಕ್ಕು ಅಡಿಯಲ್ಲಿ ಕೇಳಲಾದ ಮಾಹಿತಿಗಳನ್ನು ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಮಾಹಿತಿ ಆಯೋಗವು ನೆಲಮಂಗಲ ತಹಸೀಲ್ದಾರ್ ಆಗಿರುವ ಅರುಂಧತಿ ಹಾಗೂ ಹಿಂದಿನ ತಹಸೀಲ್ದಾರ್ ಆಗಿದ್ದ ಮಂಜುನಾಥ್ ಗೆ ತಲಾ 25 ಸಾವಿರ ರು. ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ದಾಬಸ್‌ಪೇಟೆ: ಮಾಹಿತಿ ಹಕ್ಕು ಅಡಿಯಲ್ಲಿ ಕೇಳಲಾದ ಮಾಹಿತಿಗಳನ್ನು ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಮಾಹಿತಿ ಆಯೋಗವು ನೆಲಮಂಗಲ ತಹಸೀಲ್ದಾರ್ ಆಗಿರುವ ಅರುಂಧತಿ ಹಾಗೂ ಹಿಂದಿನ ತಹಸೀಲ್ದಾರ್ ಆಗಿದ್ದ ಮಂಜುನಾಥ್ ಗೆ ತಲಾ 25 ಸಾವಿರ ರು. ದಂಡ ವಿಧಿಸಿ ಎಚ್ಚರಿಕೆ ನೀಡಿದೆ.

ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರುವ ದಾಖಲೆಯನ್ನು ಮಾಹಿತಿ ಹಕ್ಕು ಅಧಿನಿಯಮ 2005ರ ಅನ್ವಯ ಮಾಹಿತಿ ನೀಡಲು ನಿರ್ಲಕ್ಷ್ಯ ಧೋರಣೆ ಹಾಗೂ ಆಯೋಗದ ವಿಚಾರಣೆಗೆ ಗೈರಾಗಿರುವ ಪರಿಣಾಮ ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶ ನೀಡಿದ್ದಾರೆ.

ಚಿಕ್ಕಮಾರನಹಳ್ಳಿಯ ಶಿವಶಂಕರ್ ನೆಲಮಂಗಲ ತಾಲೂಕು ವ್ಯಾಪ್ತಿಯ ತ್ಯಾಮಗೊಂಡ್ಲು ಹೋಬಳಿ-2ರಲ್ಲಿ ಕಾರ್ಯನಿರ್ವಹಿಸುವ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರುವ ದಾಖಲೆಗಳನ್ನು 2020ರಿಂದ 2022ರ ತನಕ ನೀಡುವಂತೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರು. ಮಾಹಿತಿ ನೀಡದ ಪರಿಣಾಮ ಶಿವಶಂಕರ್ ಮೇಲ್ಮನವಿ ಸಲ್ಲಿಸಿದ್ದು ಆಯೋಗ ಮಾಹಿತಿ ನೀಡಲು ಸೂಚನೆ ನೀಡಿತ್ತು. ಆದರೆ ತಹಸೀಲ್ದಾರ್ ಅರುಂಧತಿ ಆಯೋಗಕ್ಕೆ ದಾಖಲೆ ನೀಡದೇ ನಿರ್ಲಕ್ಷ್ಯ ತೋರಿದ್ದರು.

ತಹಸೀಲ್ದಾರ್ ಅರುಂಧತಿಯವರು ಮೇಲ್ಮನವಿದಾರರಿಗೆ ನಿಗಧಿತ ಅವಧಿಯೊಳಗೆ ಮಾಹಿತಿ ಒದಗಿಸಿಲ್ಲ. ಆಯೋಗದ ಆದೇಶಗಳನ್ನು ಪಾಲಿಸಿಲ್ಲ. ದಂಡವಿಧಿಸುವುದಾಗಿ ನಿರ್ದೇಶನ ನೀಡಿದ್ದರೂ ಲಿಖಿತ ಸಮಾಜಾಯಿಷಿ ನೀಡದೇ ಆಯೋಗದ ವಿಚಾರಣೆಗೆ ಗೈರಾಗಿದ್ದ ಕಾರಣ ಪ್ರಸ್ತುತ ಹಾಗೂ ಹಿಂದಿನ ತಹಸೀಲ್ದಾರರಿಬ್ಬರಿಗೂ ದಂಡವಿಧಿಸಿದೆ.ಪೋಟೋ 9 : ತಹಸೀಲ್ದಾರ್ ಅರುಂಧತಿ

ಪೋಟೋ 10 : ಹಿಂದಿನ ತಹಸೀಲ್ದಾರ್ ಮಂಜುನಾಥ್

ಫೋಟೋ 11 : ದಂಡವಿಧಿಸಿರುವ ಆದೇಶ ಪ್ರತಿ