ಸಾರಾಂಶ
ಗಾಂಜಾ ಅಫೀಮು ಮತ್ತು ಮಾದಕ ವಸ್ತುಗಳ ಬಗ್ಗೆ ಮತ್ತು ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಹಾಗೂ ಮಕ್ಕಳು ಅಪರಾಧಕ್ಕೆ ಬಲಿಯಾಗುವ ಮುನ್ನ ಎಚ್ಚರಿಕೆ ಆಗಿರಬೇಕು. ಸಮಾಜದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ಕೂಡಲೇ ೧೧೨ ನಂಬರ್‌ಗೆ ಕರೆ ಮಾಡಬೇಕು. ಇಂಥ ಸಂದರ್ಭದಲ್ಲಿ ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿರುವುದಾಗಿಯೂ, ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕಾಗಿಯೂ ಮಕ್ಕಳಿಗೆ ಸಲಹೆಯನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ರೋಟರಿ ಕ್ಲಬ್ ವಿಷನ್ ಮತ್ತು ನಗರ ಠಾಣೆ ಹಾಗೂ ನಗರ ಟ್ರಾಫಿಕ್ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಟೈಮ್ಸ್ ಪಿಯು ಕಾಲೇಜಿನಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಮಕ್ಕಳಲ್ಲಿನ ಅಪರಾಧದ ಬಗ್ಗೆ ಹಾಗೂ ಸೈಬರ್ ಕ್ರೈಂ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸಿಪಿಐ ರಘುಪತಿರವರು ನೆರವೇರಿಸಿ ಮಾತನಾಡಿ, ಗಾಂಜಾ ಅಫೀಮು ಮತ್ತು ಮಾದಕ ವಸ್ತುಗಳ ಬಗ್ಗೆ ಮತ್ತು ಇದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಹಾಗೂ ಮಕ್ಕಳು ಅಪರಾಧಕ್ಕೆ ಬಲಿಯಾಗುವ ಮುನ್ನ ಎಚ್ಚರಿಕೆ ಆಗಿರಬೇಕು. ಸಮಾಜದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ಕೂಡಲೇ ೧೧೨ ನಂಬರ್‌ಗೆ ಕರೆ ಮಾಡಬೇಕು. ಇಂಥ ಸಂದರ್ಭದಲ್ಲಿ ಕರೆ ಮಾಡಿದವರ ಮಾಹಿತಿಯನ್ನು ಗೌಪ್ಯವಾಗಿರುವುದಾಗಿಯೂ, ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕಾಗಿಯೂ ಮಕ್ಕಳಿಗೆ ಸಲಹೆಯನ್ನು ನೀಡಿದರು.
ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಅಶ್ವಿನಿ ಮಾತನಾಡಿ, ಯಾರೊಬ್ಬರು ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಯಾವುದೇ ವಾಹನವನ್ನು ಚಲಾವಣೆ ಮಾಡಬಾರದು. ರಸ್ತೆಯಲ್ಲಿ ವಾಹನ ಚಲಾವಣೆ ಮಾಡಬೇಕು ಅಂದರೆ ಕಡ್ಡಾಯವಾಗಿ ಪರವಾನಿಗೆ ಹೊಂದಿರಬೇಕು. ಮಕ್ಕಳು ಮೂರು ಜನ ಪ್ರಯಾಣ ಮಾಡುವುದು. ಹೆಲ್ಮೆಟ್ ಧರಿಸಿದೆ ಪ್ರಯಾಣ ಮಾಡುವುದು. ವಾಹನವನ್ನು ಅಡ್ಡಾದಿಡ್ಡಿ ಓಡಿಸುವುದು ಮತ್ತು ವಾಹನಗಳನ್ನು ನಿಲ್ಲಿಸುವುದು ಮಾಡಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಒಂದು ವೇಳೆ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾವಣೆ ಮಾಡಿದರೆ ಅವರ ತಂದೆಯವರಿಗೆ ೨೫,೦೦೦ ರು.ಗಳ ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿರುತ್ತಾರೆ. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಬಿ. ವಿ. ವಿಜಯ್ ರವರು ಮಾತನಾಡಿ, ಪ್ರಪಂಚದಾದ್ಯಂತ ರೋಟರಿ ಕ್ಲಬ್ ತನ್ನ ಶಾಖೆಗಳನ್ನು ಹೊಂದಿದ್ದು ಪರಿಸರದ ಬಗ್ಗೆ, ರಸ್ತೆ ಸುರಕ್ಷತೆ ಬಗ್ಗೆ, ನೀರಿನ ಬಗ್ಗೆ, ವಿಶೇಷವಾದ ಕೆಲಸಗಳನ್ನು ಸಮಾಜದಲ್ಲಿ ಮಾಡಿಕೊಂಡು ಬರುತ್ತಿರುತ್ತಾರೆ ಎಂದು ತಿಳಿಸಿದರು. ನಗರಠಾಣೆಯ ಸಬ್ ಇನ್ಸ್ಪೆಕ್ಟರ್ ಮಲ್ಲಪ್ಪರವರು ಸೈಬರ್ ಕ್ರೈಂ ಬಗ್ಗೆ ಮಕ್ಕಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.ಟೈಮ್ಸ್ ಕಾಲೇಜಿನ ಕಾರ್ಯದರ್ಶಿಯಾದ ಗಂಗಾಧರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯವರು ರೋಟರಿ ಕ್ಲಬ್‌ನ ರೋಟರಿಯನ್ಸ್‌ಗಳು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.