ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ವಿಶ್ವಾಸದಿಂದ ಕೆಲಸ ಮಾಡಿ: ರಾಧ ಮೋಹನ್ ದಾಸ್

| Published : Apr 09 2024, 12:45 AM IST

ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ವಿಶ್ವಾಸದಿಂದ ಕೆಲಸ ಮಾಡಿ: ರಾಧ ಮೋಹನ್ ದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಬಾರಿ ಮಳೆ ಕೊರತೆ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಬೆಳೆದುನಿಂತಿರುವ ಬೆಳೆಗಳು ಒಣಗುತ್ತಿವೆ. ಒಣಗುತ್ತಿರುವ ಕಬ್ಬು, ತೆಂಗು, ತೋಟಗಾರಿಕೆ ಬೆಳೆಗಳಿಂದ ರೈತರು ಬೆಳೆ ನಷ್ಟದ ಸಂಕಷ್ಟದಲ್ಲಿದ್ದಾರೆ. ಭೀಕರ ಬರಗಾಲದ ಛಾಯೆ ಎದುರಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು.

ಲೋಕಸಭೆ ಚುನಾವಣೆಗೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಾಗಿ ಎನ್‌ಡಿಎಗೆ ಸೇರಿದೆರಾಜಕೀಯ, ಲೋಕಸಭಾ ಚುನವಾಣೆ, ಮೈತ್ರಿ ಅಭ್ಯರ್ಥಿ, ಎನ್‌ಡಿಎ ಬಲ, ಜೆಡಿಎಸ್‌ ಬೆಂಬಲಿಸಿ

ರಾಜಕೀಯ, ಲೋಕಸಭಾ ಚುನವಾಣೆ, ಮೈತ್ರಿ ಅಭ್ಯರ್ಥಿ, ಎನ್‌ಡಿಎ ಬಲ, ಜೆಡಿಎಸ್‌ ಬೆಂಬಲಿಸಿ, ಮಂಡ್ಯಮಂಡ್ಯ ಜಿಲ್ಲೆಯಲ್ಲಿ ನಮ್ಮ ಮೈತ್ರಿಕೂಟದಿಂದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ನಮ್ಮ ಪಕ್ಷದ ಚಿಹ್ನೆ ಇರುವುದಿಲ. ಬದಲಿಗೆ ಜೆಡಿಎಸ್ ಚಿಹ್ನೆ ಇರುತ್ತದೆ. ರಾಜ್ಯದಲ್ಲಿ ಮೈತ್ರಿ ಕೂಟದಿಂದ ಜೆಡಿಎಸ್‌ಗೆ ಮೂರು ಸ್ಥಾನ ಬಿಟ್ಟುಕೊಡಲಾಗಿದೆ. ಜೆಡಿಎಸ್‌ನ ಮೂರು ಹಾಗೂ ಬಿಜೆಪಿಯ 25 ಅಭ್ಯರ್ಥಿಗಳು ಸೇರಿ ರಾಜ್ಯದಲ್ಲಿ 25 ಅಭ್ಯರ್ಥಿಗಳು ಗೆಲ್ಲಿಸಲು ಮೈತ್ರಿಕೂಟ ಮುಂದಾಗಿದೆ.ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ವಿಶ್ವಾಸದಿಂದ ಕೆಲಸ ಮಾಡಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ಶ್ರಮಸಬೇಕು ಎಂದು ರಾಜ್ಯ ಬಿಜೆಪಿ ಪಕ್ಷದ ಉಸ್ತುವಾರಿ ರಾಧಮೋಹನ್‌ದಾಸ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಗೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಾಗಿ ಎನ್‌ಡಿಎಗೆ ಸೇರಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ನಮ್ಮ ಮೈತ್ರಿಕೂಟದಿಂದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ನಮ್ಮ ಪಕ್ಷದ ಚಿಹ್ನೆ ಇರುವುದಿಲ. ಬದಲಿಗೆ ಜೆಡಿಎಸ್ ಚಿಹ್ನೆ ಇರುತ್ತದೆ. ರಾಜ್ಯದಲ್ಲಿ ಮೈತ್ರಿ ಕೂಟದಿಂದ ಜೆಡಿಎಸ್‌ಗೆ ಮೂರು ಸ್ಥಾನ ಬಿಟ್ಟುಕೊಡಲಾಗಿದೆ. ಜೆಡಿಎಸ್‌ನ ಮೂರು ಹಾಗೂ ಬಿಜೆಪಿಯ 25 ಅಭ್ಯರ್ಥಿಗಳು ಸೇರಿ ರಾಜ್ಯದಲ್ಲಿ 25 ಅಭ್ಯರ್ಥಿಗಳು ಗೆಲ್ಲಿಸಲು ಮೈತ್ರಿಕೂಟ ಮುಂದಾಗಿದೆ ಎಂದರು.

ಜೆಡಿಎಸ್ ಪಕ್ಷವು ಸಹ ನಮ್ಮೊಂದಿಗೆ ಸಹಕರಿಸುತ್ತಿದೆ. ಅದರಂತೆ ಬಿಜೆಪಿ ಪಕ್ಷದ ಪದಾಧಿಕಾರಿಗಳು ಮತದಾರರಿಗೆ ತಿಳುವಳಿಕೆ ನೀಡಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ಕರೆ ನೀಡಿದರು.

ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಕೆಲಸ ಮಾಡಬೇಕು. ಜೆಡಿಎಸ್‌ನ ಶೇ.33 ರಷ್ಟು ಮತಗಳು ಬಿಜೆಪಿಯ ಶೇ.22 ರಷ್ಟು ಮತಗಳು ಇದ್ದು ಒಟ್ಟಾರೆ ಶೇ.55 ರಷ್ಟು ಮತಗಳು ಮೈತ್ರಿಕೂಟದ ಅಭ್ಯರ್ಥಿಯ ಪರ ಬರಲಿವೆ. ತಾವುಗಳು ಯಾವುದೇ ಸಂಶಯ ಪಡದೆ ಕೆಲಸ ಮಾಡಿ ಒಗ್ಗಟ್ಟಿನ ಪ್ರದರ್ಶನ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ, ಪ್ರಭಾರಿ ಮದ್ದೂರು ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಶ್ರೀಧರ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಲಕ್ಷ್ಮಿ, ಜಿಲ್ಲಾ ಓಬಿಸಿ ಕಾರ್ಯದರ್ಶಿ ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾನಸ, ಮಂಡಲ ಕಾರ್ಯದರ್ಶಿ ಹೇಮಂತ್ ಕುಮಾರ್, ಪುರಸಭಾ ಸದಸ್ಯೆ ಪೂರ್ಣಿಮಾ, ಶಕ್ತಿ ಕೇಂದ್ರದ ಪ್ರಮುಖರಾದ ಉಮೇಶ್‌ಕುಮಾರ್, ಅಭಿ, ರಘು, ಪುಟ್ಟರಾಜು, ಸುನಿಲ್, ಮೋಹನ್, ರಾಮಕೃಷ್ಣ ಸೇರಿದಂತೆ ಇದ್ದರು.