ಕುರಗೋವನಕೊಪ್ಪ 250 ರೈತರಗಿಲ್ಲ ಸರ್ಕಾರದ ಸೌಲಭ್ಯ

| Published : Apr 27 2025, 01:47 AM IST

ಕುರಗೋವನಕೊಪ್ಪ 250 ರೈತರಗಿಲ್ಲ ಸರ್ಕಾರದ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ತಾಲೂಕಿನ ಕುರಗೋವನಕೊಪ್ಪ ಗ್ರಾಮದ 250 ರೈತರ ಜಮೀನುಗಳ ಪಹಣಿಗಳಲ್ಲಿ ''''ಸರ್ಕಾರ'''' ಎಂದು ನಮೂದಾಗಿದ್ದು, ಸುಮಾರು ವರ್ಷಗಳಿಂದ ಸರ್ಕಾರಿ ಸೌಲಭ್ಯ ಸಿಗದೆ, ರೈತರು ಮಮ್ಮಲ ಮರುಗುತ್ತಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ ತಾಲೂಕಿನ ಕುರಗೋವನಕೊಪ್ಪ ಗ್ರಾಮದ 250 ರೈತರ ಜಮೀನುಗಳ ಪಹಣಿಗಳಲ್ಲಿ ''''''''ಸರ್ಕಾರ'''''''' ಎಂದು ನಮೂದಾಗಿದ್ದು, ಸುಮಾರು ವರ್ಷಗಳಿಂದ ಸರ್ಕಾರಿ ಸೌಲಭ್ಯ ಸಿಗದೆ, ರೈತರು ಮಮ್ಮಲ ಮರುಗುತ್ತಿದ್ದಾರೆ.''''''''ಉಳುವವನೇ ಹೊಲದ ಒಡೆಯ'''''''' ಎಂದು ಸರ್ಕಾರ ಘೋಷಣೆ ಮಾಡಿದಾಗಿನಿಂದ ಈ ಗ್ರಾಮದ 538 ಎಕರೆ ಜಮೀನುಗಳನ್ನು 250 ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ. ನಂತರ ದಿನಗಳಲ್ಲಿ ಈ ಎಲ್ಲಾ ರೈತರು ಸೇರಿಕೊಂಡು ಕಬ್ಜಾ ಕಾಲಂನಲ್ಲಿ ಹರಿದೀಕ್ಷತೆ, ಭಾವದೀಕ್ಷತೆ, ಇನಾಮದಾರ ಎಂಬ ಹೆಸರು ತೆಗೆದು ನಮ್ಮ ಹೆಸರು ಉತಾರ ಕಾಲಂನಲ್ಲಿ ಸೇರಿಸಬೇಕೆಂದು ಹಲವಾರು ವರ್ಷಗಳಿಂದ ಸಂಬಂಧ ಪಟ್ಟ ಕಂದಾಯ ಇಲಾಖೆಗೆ ಅಲೆದಾಟ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.ರೈತನ ಹೆಸರು ಸೇರಿಸಲು ಧರಣಿ: ಈ ಎಲ್ಲಾ ರೈತರು 30ರಿಂದ 35 ವಷ೯ದಲ್ಲಿ ನಾಲ್ಕೈದು ಬಾರಿ ನರಗುಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರೂ ರೈತರಿಗೆ ಜಯ ಸಿಕ್ಕಿಲ್ಲ.ಸಿ.ಸಿ. ಪಾಟೀಲರು 2022ರಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಿದ್ದಾಗ ಈ ಗ್ರಾಮಸ್ಥರು ಸೇರಿಕೊಂಡು ಬೆಂಗಳೂರಿಗೆ ಹೋಗಿ ಸಚಿವ ಪಾಟೀಲರಿಗೆ ನಮ್ಮ ಜಮೀನುಗಳ ಉತಾರ ಸರಿ ಮಾಡಿಸಿಕೊಡಬೇಕೆಂದು ಮನವಿ ಮಾಡಿದಾಗ ಅಂದಿನ ಕಂದಾಯ ಇಲಾಖೆ ಸಚಿವರಿಗೆ ತಿಳಿಸಿದ ನಂತರ ಈ ರೈತರು ಉತಾರದಲ್ಲಿದ್ದ ಹರಿದೀಕ್ಷತೆ, ಭಾವದೀಕ್ಷತೆ, ಇನಾಮದಾರ ಕಡಿಮೆಯಾಗಿ ಸರ್ಕಾರವೆಂದು ನಮೂದಾದ ನಂತರ ನಿಮ್ಮ ಹೆಸರಗಳು ಸ್ವಲ್ಪ ದಿವಸದಲ್ಲಿ ಸೇರ್ಪಡೆ ಆಗುತ್ತವೆಂದು ಅಧಿಕಾರಿಗಳು ಹೇಳಿ 3 ವಷ೯ ಗತಿಸಿದರೂ ಕೂಡ ಉತಾರದ ಕಬ್ಜಾ ಕಾಲಂದಲ್ಲಿ ರೈತರ ಹೆಸರು ನಮೂದಾಗಿಲ್ಲ. ಸೌಲಭ್ಯಗಳಿಂದ ವಂಚಿತ:

ಈ ಜಮೀನುಗಳಿಗೆ ರೈತರು ಮಾಲೀಕರಾದರೂ ಕೂಡ ಕಬ್ಜಾ ಕಾಲಂನಲ್ಲಿ ಹೆಸರು ಇಲ್ಲದ್ದಕ್ಕೆ ಬೆಳೆ ವಿಮೆ ತುಂಬಲು, ಕೃಷಿ, ಪಿಎಂ ಕಿಸಾನ್‌ ಹಣ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸೌಲಭ್ಯ ಸಿಗದೆ ರೈತರು ಮಮ್ಮಲ ಮರುಗುತ್ತಿದ್ದಾರೆ.

ಮುಂಬೈ ಇನಾಮದಾರ ಜಮೀನಿಗೆ ಸರ್ಕಾರದಿಂದ ನಮಗೆ ನೋಟಿಫಿಕೇಶನ್‌ ಬಂದು ನಂತರ ರೈತರಿಂದ ಅರ್ಜಿ ಸ್ವೀಕರಿಸಿ ಬಳಿಕ ಉತಾರ ಕಾಲಂದಲ್ಲಿ ರೈತರ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು.

ಸರ್ಕಾರ ಈ ಗ್ರಾಮದ ರೈತರ ಹೆಸರನ್ನು ಬೇಗ ಉತಾರ ಖಾತೆಯಲ್ಲಿ ನಮೂದು ಮಾಡದಿದ್ದರೆ, 250 ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವಿಷ ತೆಗೆದುಕೊಂಡ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈತ ಕೃಷ್ಣಪ್ಪ ಸತ್ಯರಡ್ಡಿ ಹೇಳಿದರು.

ಈ ರೈತರ ಹೆಸರು ಬೇಗ ಕಂದಾಯ ಇಲಾಖೆ ಉತಾರದಲ್ಲಿ ಸೇರ್ಪಡೆ ಆಗದಿದ್ದರೆ, ಎಲ್ಲಾ ರೈತರು ಸೇರಿಕೊಂಡು ಬೆಂಗಳೂರು ಸಿಎಂ ಸಿದ್ದರಾಮಯ್ಯ ಮನೆ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಕಳಸಾ-ಬಂಡೂರಿ ನಾಲಾ ಯೋಜನೆ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ವಿಜಯ ಕೋತಿನ ಹೇಳಿದರು.