ಅಂದರ್ ಬಾಹರ್: 26 ಆರೋಪಿಗಳ ಬಂಧಿಸಿ, ₹24.86 ಲಕ್ಷ ವಶ

| Published : Feb 23 2025, 12:33 AM IST

ಸಾರಾಂಶ

ಹೋಟೆಲ್‌ನಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ, ದಾಳಿ ಮಾಡಿದ ಸಿಇಎನ್ ಠಾಣೆ ಪೊಲೀಸರು ಒಟ್ಟು 26 ಜನರನ್ನು ಬಂಧಿಸಿ, ಬರೋಬ್ಬರಿ ₹24.86 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

- ಶುಕ್ರವಾರ ಮ್ಯಾಂಗೋ ಹೋಟೆಲ್‌ನಲ್ಲಿ ಅಂದರ್ ಬಾಹರ್ । ಸ್ಥಳಕ್ಕೆ ಎಸ್‌ಪಿ ಭೇಟಿ, ಪರಿಶೀಲನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಹೋಟೆಲ್‌ನಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ, ದಾಳಿ ಮಾಡಿದ ಸಿಇಎನ್ ಠಾಣೆ ಪೊಲೀಸರು ಒಟ್ಟು 26 ಜನರನ್ನು ಬಂಧಿಸಿ, ಬರೋಬ್ಬರಿ ₹24.86 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ನಗರದ ಡೆಂಟಲ್ ಕಾಲೇಜು ರಸ್ತೆಯ ಮ್ಯಾಂಗೋ ಹೋಟೆಲ್‌ನಲ್ಲಿ ಅಂದರ್ ಬಾಹರ್ ಜೂಜು ಬಗ್ಗೆ ಶುಕ್ರವಾರ ದೊರೆತ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ನೇತೃತ್ವದಲ್ಲಿ ಪಿಎಸ್ಐ ಸುನಿಲ್ ಬಿ. ತೇಲಿ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.

ಈ ವೇಳೆ 26 ಜನರ ವಶಕ್ಕೆ ಪಡೆದು, ಜೂಜಾಟಕ್ಕೆ ತೊಡಗಿಸಿದ್ದ ₹24,86,500 ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕಲಂ 79, 80 ಕೆಪಿ ಆ್ಯಕ್ಟ್ ರೀತ್ಯಾ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ದಾಳಿಯಲ್ಲಿ ಸಿಬ್ಬಂದಿ ಗೋವಿಂದರಾಜ, ಶಿವಕುಮಾರ, ಅಶೋಕ, ಲೋಹಿತ, ಉಮೇಶ, ಅಂಜಿನಪ್ಪ, ನಿಜಲಿಂಗಪ್ಪ, ರವಿಕುಮಾರ, ಲಿಂಗರಾಜ, ಬುಡೇನ್ ವಲಿ, ಸುರೇಶ ಭಾಗಿಯಾಗಿದ್ದರು. ಹೊಟೆಲ್‌ಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದರು.

- - - -22ಕೆಡಿವಿಜಿ4, 5:

ದಾವಣಗೆರೆಯ ಮ್ಯಾಂಗೋ ಹೋಟೆಲ್‌ನಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 26 ಆರೋಪಿಗಳನ್ನು ಪೊಲೀಸರು ಬಂಧಿಸಿ, ₹24.86 ಲಕ್ಷ ಜಪ್ತಿ ಮಾಡಿದರು.-22ಕೆಡಿವಿಜಿ6.ಜೆಪಿಜಿ:

ದಾವಣಗೆರೆ ಡೆಂಟಲ್ ಕಾಲೇಜು ರಸ್ತೆಯ ಮ್ಯಾಂಗೋ ಹೋಟೆಲ್‌ನಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 26 ಆರೋಪಿಗಳನ್ನು ಪೊಲೀಸರು ಬಂಧಿಸಿ, ₹24.86 ಲಕ್ಷ ಜಪ್ತಿ ಮಾಡಲಾಗಿದ್ದು, ಸ್ಥಳಕ್ಕೆ ಎಸ್‌ಪಿ ಉಮಾ ಪ್ರಶಾಂತ ಭೇಟಿ ನೀಡಿ, ಪರಿಶೀಲಿಸಿದರು.