೨೬ ರಿಂದ ತುರುವೇಕೆರೆ ಪ್ರೀಮಿಯರ್ ಲೀಗ್ ಕ್ರಿಕೆಟ್

| Published : Oct 08 2024, 01:07 AM IST

೨೬ ರಿಂದ ತುರುವೇಕೆರೆ ಪ್ರೀಮಿಯರ್ ಲೀಗ್ ಕ್ರಿಕೆಟ್
Share this Article
  • FB
  • TW
  • Linkdin
  • Email

ಸಾರಾಂಶ

ತುರುವೇಕೆರೆ: ತಾಲೂಕಿನಲ್ಲಿರುವ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಇದೇ ತಿಂಗಳ ೨೬ ರಿಂದ ೨೯ ರವರೆಗೆ ತುರುವೇಕೆರೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟನ್ನು ಆಯೋಜಿಸಲಾಗಿದೆ ಎಂದು ಆಯೋಜಕ, ನೆಮ್ಮದಿ ಗ್ರಾಮದ ಸಿ.ಎಸ್. ಮೂರ್ತಿ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕ್ರಿಕೆಟ್ ಲೀಗ್ ನ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಪಂದ್ಯಾವಳಿಗೆ ‘ಅಪ್ಪು ಕಪ್’ ಎಂದು ನಾಮಕರಣ ಮಾಡಲಾಗಿದೆ. ಅಪ್ಪುರವರ ಮೂರನೇ ವರ್ಷದ ಪುಣ್ಯತಿಧಿ ೨೯ ರಂದು ಇರುವ ಕಾರಣ ಅಂದೇ ಫೈನಲ್ ಪಂದ್ಯ ನಡೆಯಲಿದೆ ಎಂದು ತಿಳಿಸಿದರು.

ಈ ಟೂರ್ನಮೆಂಟ್ ಕೇವಲ ತುರುವೇಕೆರೆ ತಾಲೂಕಿನ ಕ್ರೀಡಾಪಟುಗಳಿಗೆ ಮಾತ್ರ ಅನ್ವಯವಾಗಲಿದೆ. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಆಯೋಜಿಸಲಾಗಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು.

ಲಾಂಛನ ಬಿಡುಗಡೆಗೊಳಿಸಿದ ತಹಸೀಲ್ದಾರ್ ಕುಂ.ಇ.ಅಹಮದ್ ಮಾತನಾಡಿ, ಪಠ್ಯದಂತೆ ಕ್ರೀಡೆಗೂ ಹೆಚ್ಚು ಬೆಲೆ ಇದೆ. ದೇಹಕ್ಕೂ ಉತ್ತಮ ಆರೋಗ್ಯ ನೀಡಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಕ್ರಿಕೆಟ್ ಟೂರ್ನಮೆಂಟ್ ಗೆ ತಾವೂ ಸಹ ಸಹಕರಿಸುವುದಾಗಿ ತಿಳಿಸಿದರು.

ಕ್ರಿಕೆಟ್ ನ ಯುವ ತಾರೆಗಳಾದ ನಿಶಾಂತ್, ಶ್ರೇಯಾರನ್ನು ಗೌರವಿಸಲಾಯಿತು.

ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಎಸ್ಎಲ್ಎನ್ ರಾಜಣ್ಣ, ನವೀನ್ ಬಾಬು, ಅಶೋಕ್ (ಬಾವಿಕೆರೆ), ಹೆಡಿಗೇಹಳ್ಳಿ ವಿಶ್ವನಾಥ್, ಕನ್ನಡದ ಕಂದ ವೆಂಕಟೇಶ್, ಕ್ರಿಕೆಟ್ ತರಬೇತುದಾರ ಅಶೋಕ್, ಮಾಯಸಂದ್ರ ಸುಬ್ರಮಣ್ಯ, ಸವಿತಾ ಸಮಾಜದ ಧನಂಜಯ, ಡೊಂಕಿಹಳ್ಳಿ ರಾಮಣ್ಣ, ರಂಗಸ್ವಾಮಿ, ಶಿಕ್ಷಕ ಮಹೇಶ್ ಸೇರಿ ಹಲವಾರು ಮಂದಿ ಇದ್ದರು.