ಸಾರಾಂಶ
ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಲ್ಲಿ ನಡೆದ ಅದಾಲತ್‌ನಲ್ಲಿ 65 ಐಪಿಸಿ, 67 ಚೆಕ್ ಬೌನ್ಸ್, 59 ಅಪಘಾತ ಮತ್ತು 71 ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ ಕಕ್ಷಿದಾರರಿಗೆ 6,06,31, 345 ರು, ಆದೇಶ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಜೆಎಂಎಫ್‌ಸಿ ಮತ್ತು ಅಧೀನ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 262 ಪ್ರಕರಣಗಳು ಇತ್ಯರ್ಥ ಪಡಿಸಿದ ನ್ಯಾಯಾಧೀಶರು ಒಟ್ಟು 6,06,31,345 ರು.,ಗಳ ಪರಿಹಾರಕ್ಕೆ ಆದೇಶ ನೀಡಿದರು.ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಲ್ಲಿ ನಡೆದ ಅದಾಲತ್‌ನಲ್ಲಿ 65 ಐಪಿಸಿ, 67 ಚೆಕ್ ಬೌನ್ಸ್, 59 ಅಪಘಾತ ಮತ್ತು 71 ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿ ಕಕ್ಷಿದಾರರಿಗೆ 6,06,31, 345 ರು, ಆದೇಶ ನೀಡಲಾಯಿತು.
ಪರಿಹಾರಕ್ಕೆ ಇತ್ಯರ್ಥ ಪಡಿಸಿದ ಹಿರಿಯ ಸಿವಿಲ್ ನ್ಯಾಯಾಲಯ 32, ಅಪರ ಹಿರಿಯ ಸಿವಿಲ್ ನ್ಯಾಯಾಲಯ 51, ಪ್ರಧಾನ ಸಿವಿಲ್ ನ್ಯಾಯಾಲಯ 127, 1ನೇ ಅಪರ ನ್ಯಾಯಾಲಯ 20, 2ನೇ ಅಪರ ನ್ಯಾಯಾಲಯ 12, 3ನೇ ಅಪರ ನ್ಯಾಯಾಲಯ 17 ಹಾಗೂ 4ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 2 ಸೇರಿದಂತೆ ಒಟ್ಟು 262 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಅಪರ ನ್ಯಾಯಾಧೀಶೆ ಎನ್.ಬಿ.ಮೋಹನ್ ಕುಮಾರಿ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಸ್.ಸಿ.ನಳಿನ, 1ನೇ ಅಪರ ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪಾರ್ವತಿ, ಹಾಗೂ 2ನೇ ಅಪರ ನ್ಯಾಯಾಧೀಶರಾದ ಕೆ. ಗೋಪಾಲಕೃಷ್ಣ ತಮ್ಮ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಉಭಯತರ ನಡುವೆ ರಾಜಿ ಸಂಧಾನ ನಡೆಸುವ ಮೂಲಕ ಪರಿಹಾರಕ್ಕೆ ಆದೇಶ ನೀಡಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ಸಹಾಯಕ ಸರ್ಕಾರಿ ಅಭಿಯೋಜಕ ಕಪನಿ ನಂಜೇಶ್ವರ ಹಾಗೂ ವಕೀಲರು ಇದ್ದರು.