26ರಿಂದ ಚಿಟ್ಟೆಮಾರ್ ಗುರು ರಾಘವೇಂದ್ರ ಸ್ವಾಮಿ ವೃಂದಾವನ ಪ್ರತಿಷ್ಠಾಪನಾ ಮಹೋತ್ಸವ

| Published : May 25 2025, 02:03 AM IST

26ರಿಂದ ಚಿಟ್ಟೆಮಾರ್ ಗುರು ರಾಘವೇಂದ್ರ ಸ್ವಾಮಿ ವೃಂದಾವನ ಪ್ರತಿಷ್ಠಾಪನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೇ 29ರಂದು ಶ್ರೀರಾಮ ದೇವರ, ಗುರು ರಾಘವೇಂದ್ರರ ವೃಂದಾವನ ಪ್ರತಿಷ್ಠಾಪನೆ ಪೇಜಾವರ ಮಠಾಧೀಶರಿಂದ ನಡೆಯಲಿದೆ. ಕುಡುಪು ಕೃಷ್ಣರಾಜ ತಂತ್ರಿ ನೇತೃತ್ವ ವಹಿಸಲಿದ್ದಾರೆ. ಗುರುರಾಯರ ಭಕ್ತ, ಅಮೆರಿಕದ ಹೋಟೆಲ್ ಉದ್ಯಮಿ ಕಿಶೋರ್ ಕೋಟ್ಯಾನ್ ಕುಟುಂಬ 85 ಸೆಂಟ್ಸ್ ಜಾಗದಲ್ಲಿ ಕಾಷ್ಠ ಶಿಲ್ಪದ ಶಿಲಾಮಯ ಮಂದಿರ ಕಟ್ಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಚಿಟ್ಟೆಮಾ‌ರ್ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ವೃಂದಾವನ ಪ್ರತಿಷ್ಠಾ ಮಹೋತ್ಸವ ಮೇ 26ರಿಂದ 30ರ ವರೆಗೆ ನಡೆಯಲಿದೆ.

ಮೇ 29ರಂದು ಶ್ರೀರಾಮ ದೇವರ, ಗುರು ರಾಘವೇಂದ್ರರ ವೃಂದಾವನ ಪ್ರತಿಷ್ಠಾಪನೆ ಪೇಜಾವರ ಮಠಾಧೀಶರಿಂದ ನಡೆಯಲಿದೆ. ಕುಡುಪು ಕೃಷ್ಣರಾಜ ತಂತ್ರಿ ನೇತೃತ್ವ ವಹಿಸಲಿದ್ದಾರೆ. ಗುರುರಾಯರ ಭಕ್ತ, ಅಮೆರಿಕದ ಹೋಟೆಲ್ ಉದ್ಯಮಿ ಕಿಶೋರ್ ಕೋಟ್ಯಾನ್ ಕುಟುಂಬ 85 ಸೆಂಟ್ಸ್ ಜಾಗದಲ್ಲಿ ಕಾಷ್ಠ ಶಿಲ್ಪದ ಶಿಲಾಮಯ ಮಂದಿರ ಕಟ್ಟಿಸಿದ್ದಾರೆ. ಈ ದೇವಾಲಯ ಸದಾ ಭಜನೆ, ಸಂಸ್ಕಾರಯುತ ಕಾರ್ಯಕ್ರಮಗಳಿಗೆ ಕೇಂದ್ರವಾಗಲಿದೆ. ಸಭಾ ಕಾರ್ಯಕ್ರಮ ರಹಿತ ಕಾರ್ಯಕ್ರಮದಲ್ಲಿ ಪ್ರತೀ ದಿನ ಸ್ಥಳೀಯರಿಂದ ಭಜನೆ, ಮೇ 28ರಂದು ಸಂಜೆ ಭ್ರಾಮರಿ ನೃತ್ಯದ ನಿರ್ದೇಶಕಿ ವಿದುಷಿ ತೀರ್ಥ ಕಟೀಲು ಅವರ ನೃತ್ಯಾಂಜಲಿ, ಮೇ 24ರಂದು ಸಂಜೆ ಹರಿದ್ವಾರ ದೇವಕಿ ತನಯ ಕೂಡ್ಲುರ ರಾಘವೇಂದ್ರ ಸ್ವಾಮಿ ಮಹಾತ್ಮ ಹರಿಕಥೆ ಜರುಗಲಿದೆ.

ಮೇ 30ರಂದು ನೃತ್ಯ ಭಜನಾ ಅಂತಿಮ ಸ್ಪರ್ಧೆಯಲ್ಲಿ 21 ತಂಡಗಳು ಭಾಗವಹಿಸಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಂದಿರದ ಮಾರ್ಗದರ್ಶಕರಾದ ಶ್ರೀಪತಿ ಭಟ್, ಕದ್ರಿ ನವನೀತ ಶೆಟ್ಟಿ, ಪ್ರಕಾಶ್ ಮೂಡುಬಿದಿರೆ, ರವೀಂದ್ರ ಅಂಚನ್, ಲೀಲಾಕ್ಷ ಕರ್ಕೇರಾ, ತಿಳಿಸಿದರು.