ಸಾರಾಂಶ
27th and 28 th kunchutigas tour
ಹಿರಿಯೂರು: ಮಲೆನಾಡು ಕರಾವಳಿ ಕುಂಚಿಟಿಗರ ಭಾವೈಕ್ಯತಾ ಪ್ರವಾಸ 27 ಮತ್ತು 28 ರಂದು ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದಿಂದ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬಯಲುಸೀಮೆ ಮಲೆನಾಡು ಕರಾವಳಿ ಕುಂಚಿಟಿಗರ ಸಂಗಮ ಭಾವೈಕ್ಯತಾ ಪ್ರವಾಸ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.27 ರಂದು ಬೆಳಗಿನ ಜಾವ 4 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಪ್ರವಾಸಕ್ಕೆ ಚಾಲನೆ ನೀಡಿ, ನಂತರ ಶಾಂತಿಸಾಗರ, ನೀಲೋಗಲ್, ಗುಡ್ಡದಕೋಮಾರನಹಳ್ಳಿ, ಗೊಲ್ಲರಹಳ್ಳಿ, ಮಾಸಡಿ, ನರಸಗೊಂಡನಹಳ್ಳಿ, ಸುಂಕದಕಟ್ಟೆ, ಕುಂಕುವ, ಸೂರಗೊಂಡನಕೊಪ್ಪ, ಗಾಮ, ಶಿಕಾರಿಪುರ ತಲುಪಿ ಅಲ್ಲಿಯೇ ತಂಗುವರು.
ನಂತರ 28 ರಂದು ಬೆಳಿಗ್ಗೆ 5 ಗಂಟೆಗೆ ಪ್ರಾರಂಭ ಮಾಡಿ ಕುಬಟೂರು, ಜಡೆ, ಆಣಜಿ, ಶಿರಸಿ, ದಾಸನಕೊಪ್ಪ, ಲಕ್ಷ್ಮಿಪುರ, ರಂಗಾಪುರ, ಹಾನಗಲ್, ಅಕ್ಕಿಆಲೂರು, ಗ್ರಾಮದಲ್ಲಿ ಪ್ರವಾಸ ಮುಕ್ತಾಯ ಮಾಡಿ ಹಿರಿಯೂರಿಗೆ ವಾಪಾಸ್ ಬರಲಾಗುವುದು ಎಂದರು.ಕುಂಚಿಟಿಗ ಕುಲಶಾಸ್ತ್ರ ಅಧ್ಯಯನಕಾರ ಎಸ್.ವಿ.ರಂಗನಾಥ್ ಮಾತನಾಡಿ, ಈ ವರ್ಷದಲ್ಲಿ ಬಯಲುಸೀಮೆ ಹಾಗೂ ಮಲೆನಾಡು ಕರಾವಳಿ ಕುಂಚಿಟಿಗರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಪ್ರಧಾನ ಕಾರ್ಯದರ್ಶಿ ವಿ.ಕುಬೇರಪ್ಪ, ಹುಲುಗಲಕುಂಟೆ ಶಶಿಕಲಾ ಮುಂತಾದವರು ಉಪಸ್ಥಿತರಿದ್ಧರು.-----
ಫೋಟೊ: ಚಿತ್ರ 1 ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಲೆನಾಡು ಕರಾವಳಿ ಕುಂಚಿಟಿಗರ ಸಂಗಮ ಭಾವೈಕ್ಯತಾ ಪ್ರವಾಸ ಕುರಿತಂತೆ ಚರ್ಚೆ ನಡೆಸಲು ಸಭೆ ಕರೆಯಲಾಗಿತ್ತು.