ಸಾರಾಂಶ
ಹಾವೇರಿ ಜಿಲ್ಲಾ ಮಟ್ಟದ ಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಜು. ೨೭ರಂದು ಶಿಗ್ಗಾಂವಿಯಲ್ಲಿ ಆಚರಿಸಲು ಹಾವೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಸಂತೋಷ ಹಿರೇಮಠ ಸೂಚಿಸಿದರು.
ಶಿಗ್ಗಾಂವಿ:
ಜಿಲ್ಲಾ ಮಟ್ಟದ ಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಜು. ೨೭ರಂದು ಶಿಗ್ಗಾಂವಿಯಲ್ಲಿ ಆಚರಿಸಲು ಹಾವೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್ ಸಂತೋಷ ಹಿರೇಮಠ ಸೂಚಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ಮತ್ತು ಹಡಪದ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಮುಖಂಡರ ಸಹಯೋಗದಲ್ಲಿ ನಡೆದ ನಿಜಶರಣ ಹಡಪದ ಅಪ್ಪಣ್ಣ ಜಯಂತಿ ಪೂರ್ವಭಾವಿ ಸಭೆ ನೇತೃತ್ವ ವಹಿಸಿ ಮಾತನಾಡಿದ ಅವರು, ಜು. ೨೧ರಂದು ಸಾಂಕೇತಿಕವಾಗಿ ಕಚೇರಿಯಲ್ಲಿ ಜಯಂತಿ ಆಚರಣೆ ಮಾಡಲಾಗುವುದು. ಜು. ೨೭ರಂದು ತಾಲೂಕು ಹಡಪದ ಅಪ್ಪಣ್ಣನವರ ನಡೆಯುವ ಜಿಲ್ಲಾ ಮಟ್ಟದ ಜಯಂತಿ ಆಚರಣೆಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ತಾಲೂಕು ಹಡಪದ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಮಾತನಾಡಿ, ಹಡಪದ ಅಪ್ಪಣ್ಣ ಅವರು ಬಸವಣ್ಣವರ ಸಮಕಾಲೀನವರು. ಹೀಗಾಗಿ ತಮ್ಮ ವಚನಗಳಿಂದ ಉತ್ತಮ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ಅಂತಹ ಮಹಾತ್ಮರ ಜಯಂತಿಯನ್ನು ಸರ್ವ ಸಮಾಜದ ಜನರೊಂದಿಗೆ ಒಂದಾಗಿ ಆಚರಿಸಬೇಕು. ಈ ಬಾರಿ ಜಿಲ್ಲಾ ಮಟ್ಟದ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಗುತ್ತಿದ್ದು, ಅದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು.
ಬಿಇಒ ಎಂ.ಬಿ. ಅಂಬಿಗೇರ, ತಾಪಂ ಯೋಜನಾಧಿಕಾರಿ ಶಿವಾನಂದ ಸಣ್ಣಕ್ಕಿ, ಪುರಸಭೆ ಮುಖ್ಯಾಧಿಕಾರಿ ಎ. ಶಿವಪ್ಪ, ಮುಖಂಡರಾದ ಬಸವರಾಜ ಹಡಪದ, ಮುತ್ತಣ್ಣ ಕ್ಷೌರದ, ಮಹಾಲಿಂಗಪ್ಪ ಹಡಪದ, ಶಿವರಾಜ ಹಡಪದ, ಜಗದೀಶ ಹಡಪದ, ಕೊಟೆಪ್ಪ ಹಡಪದ, ಗುರುಬಸಪ್ಪ ಹಡಪದ, ಬಸವರಾಜ ನೀರಲಗಿ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕಾಳಪ್ಪ ಬಡಿಗೇರ, ಕುರುಬರ ಸಮಾಜದ ತಾಲೂಕು ಅಧ್ಯಕ್ಷ ಫಕ್ಕೀರಪ್ಪ ಕುಂದೂರ, ದಲಿತ ಸಮಾಜದ ಮುಖಂಡ ಕರೆಪ್ಪ ಕಟ್ಟಿಮನಿ, ರೈತ ಸಂಘಟಕದ ತಾಲೂಕು ಅಧ್ಯಕ್ಷ ಆನಂದ ಕೆಳಗಿಮನಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಹಡಪದ ಅಪ್ಪಣ್ಣ ಸಮಾಜದ ಮುಖಂಡರು ಇದ್ದರು.