ಮಾ.21 ರಿಂದ ಶ್ರೀಶೈಲಕ್ಕೆ 280 ವಿಶೇಷ ಬಸ್

| Published : Mar 17 2025, 12:32 AM IST

ಸಾರಾಂಶ

280 special bus to Srishaila from March 21

ರಾಯಚೂರು: ಮಾ.21ರಿಂದ ಮಾ.31ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರಗೆ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು, ಲಿಂಗಸೂಗುರು, ಸಿಂಧನೂರು, ಮಾನ್ವಿ, ದೇವದುರ್ಗ, ಮಸ್ಕಿ ಘಟಕಗಳಿಂದ 280 ವಿಶೇಷ ಬಸ್ಸುಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.

ಈ ಬಸ್ಸುಗಳು ಮಾ.21ರಿಂದ ಮಾ.31ರವರೆಗೆ ರಾಯಚೂರು-ಕರ್ನೂಲ್-ಶ್ರೀಶೈಲ, ಸಿಂಧನೂರು-ಆದೋನಿ-ಶ್ರೀಶೈಲ, ಸಿಂಧನೂರು-ರಾಯಚೂರು-ಕರ್ನೂಲ್-ಶ್ರೀಶೈಲ, ಲಿಂಗಸೂಗುರು-ಮಸ್ಕಿ-ಸಿಂಧನೂರು-ಆದೋನಿ-ಶ್ರೀಶೈಲ, ಮಾನವಿ-ರಾಯಚೂರು-ಕರ್ನೂಲ್-ಶ್ರೀಶೈಲ,ಮಾನ್ವಿ-ಸಿಂಧನೂರು-ಆದೋನಿ-ಶ್ರೀಶೈಲ, ಮಸ್ಕಿ-ರಾಯಚೂರು-ಕರ್ನೂಲ್-ಶ್ರೀಶೈಲ, ಮಸ್ಕಿ-ಸಿಂಧನೂರು-ಆದೋನಿ-ಶ್ರೀಶೈಲ, ದೇವದುರ್ಗ-ರಾಯಚೂರು-ಕರ್ನೂಲ್-ಶ್ರೀಶೈಲ ಮಾರ್ಗದಲ್ಲಿ ಕಾರ್ಯಾಚರಣೆಯನ್ನು ಮಾಡಲಿದೆ.

50 ಪ್ರಯಾಣಿಕರು ಲಭ್ಯವಿದ್ದಲ್ಲಿ ಅವರ ಸ್ವಸ್ಥಳದಿಂದ ನೇರವಾಗಿ ಶ್ರೀಶೈಲಂಗೆ ಬಸ್‌ ವ್ಯವಸ್ಥೆ ಒದಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರು ಮಹಾನಂದಿಗೆ ಹೋಗುವದಕ್ಕೆ ಇಷ್ಟಪಟ್ಟಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿ ಬರಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ರಾಯಚೂರು ಘಟಕ 1 (7760992363) ರಾಯಚೂರು ಘಟಕ 2 (7760992364) ರಾಯಚೂರು ಘಟಕ 3 (7619351087) ಲಿಂಗಸೂಗುರು( 7760992365) ಸಿಂಧನೂರು( 7760992366) ಮಾನ್ವಿ (7760992367) ದೇವದುರ್ಗ( 7760992368) ಮಸ್ಕಿ( 7760992361) ಕೇಂದ್ರ ಬಸ್ ನಿಲ್ದಾಣ ರಾಯಚೂರು (7760992370) ವಿಭಾಗೀಯ ಸಂಚಾರ ಅಧಿಕಾರಿ (7760992352) ಸಂಪರ್ಕ ಮಾಡಬಹುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ ಎಂ.ಎಸ್. ತಿಳಿಸಿದ್ದಾರೆ.