ಸಾರಾಂಶ
ಬೆಳಗ್ಗೆ 10. 30ಗಂಟೆಗೆ ಸ್ಥಳಾಂತರಿತ ಶಾಖೆಯನ್ನು ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಎಟಿಎಂನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು.
ಕನ್ನಡಪ್ರಭ ವಾರ್ತೆ ಉಡುಪಿ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಾಯ್ಬ್ರಕಟ್ಟೆಯ ಶಾಖೆಯನ್ನು ಶಿರಿಯಾರ ಗ್ರಾಮದ ಬ್ರಹ್ಮಾವರ - ಹಾಲಾಡಿ ಮುಖ್ಯ ರಸ್ತೆಯಲ್ಲಿರುವ ಸಾಯ್ಬ್ರಕಟ್ಟೆಯ ಎಸ್.ಎಸ್.ಕಾಂಪ್ಲೆಕ್ಸ್‌ಗೆ ಸ್ಥಳಾಂತರಿಸಲಾಗುತ್ತಿದೆ. ಈ ಶಾಖೆಯ ಸ್ಥಳಾಂತರ ಸಮಾರಂಭ ಮತ್ತು ಎಟಿಎಂ ಉದ್ಘಾಟನೆ ಅ.28ರಂದು ನಡೆಯಲಿದೆ.ಬೆಳಗ್ಗೆ 10.30 ಗಂಟೆಗೆ ಸ್ಥಳಾಂತರಿತ ಶಾಖೆಯನ್ನು ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಎಂಟಿಎಂನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮತ್ತು ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ. ಪ್ರದೀಪ್ ಬಲ್ಲಾಳ್ ಆಗಮಿಸಿಲಿದ್ದಾರೆ. ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ ಮತ್ತು ಕಟ್ಟಡ ಮಾಲೀಕರಾದ ಸುರೇಶ್ ಶೆಟ್ಟಿ ಮತ್ತು ಭರತ್ ಕುಮಾರ್ ಶೆಟ್ಟಿ ಉಪಸ್ಥಿತರಿರುತ್ತಾರೆ.