ಸಾರಾಂಶ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ 6 ದಿನಗಳ ಕಾಲ ನಡೆಯುವ ಇಷ್ಟಲಿಂಗ ಮಹಾಪೂಜೆ ಹಾಗೂ ವೀರಶೈವ ಪಂಚಾಚಾರ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿಯ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ 6 ದಿನಗಳ ಕಾಲ ನಡೆಯುವ ಇಷ್ಟಲಿಂಗ ಮಹಾಪೂಜೆ ಹಾಗೂ ವೀರಶೈವ ಪಂಚಾಚಾರ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತೆ ವಿದ್ಯಾ ಬಲವಂತಪ್ಪ ಕೋಟೆನ್ನವರ ಅವರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಆದರ್ಶ ಶಿಕ್ಷಕಿ ಪ್ರಶಸ್ತಿ, ವಿಜಯಪುರ ಜಿಲ್ಲೆಯ ಜೀವನ ಜ್ಯೋತಿ ಹಾರ್ಟ್ ಆ್ಯಂಡ್ ಬ್ರೆನ್ ಕ್ಲಿನಿಕ್ ಹಾಗೂ ಆರೋಗ್ಯಧಾಮ ಹಾಸ್ಪಿಟಲ್‌ನ ಖ್ಯಾತ ವೈದ್ಯರು, ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್-2025 ಪುರಸ್ಕೃತ ದಂಪತಿಯರಾದ ಡಾ.ಅಶ್ವಿನಿ ಹಿರೇಮಠ-ಡಾ.ಮಡಿವಾಳಸ್ವಾಮಿ ಧವಳಗಿಮಠ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯನಿಕೇತನ ಪ್ರಶಸ್ತಿ, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ಅನಿಲ್ ಕಾಜಗಾರ ಅವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮಾಧ್ಯಮ ಭೂಷಣ ಪ್ರಶಸ್ತಿ, ಹುಬ್ಬಳ್ಳಿಯ ಕನ್ನಡಪ್ರಭ ವಿಶೇಷ ವರದಿಗಾರ ಶಿವಾನಂದ ಗೊಂಬಿ ಅವರಿಗೆ ಮಾಧ್ಯಮ ಭೂಷಣ ಪ್ರಶಸ್ತಿಯನ್ನು ನಾಡಿನ ಶಿವಾಚಾರ್ಯರು ಮತ್ತು ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ನ.28 ರಂದು ನಡೆಯುವ ಮಾನವ ಧರ್ಮ ಸಮಾವೇಶದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಶ್ರೀಕ್ಷೇತ್ರ ಬಿಸನಳ್ಳಿಯ ಕಾಶಿ ಜಂಗಮವಾಡಿ ಖಾಸಾಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.;Resize=(128,128))
;Resize=(128,128))
;Resize=(128,128))