ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುವ ಮೂಲಕ ಮನೆ ಮಾತಾಗಿರುವ ಎಕ್ಸಲಂಟ್ ಸಂಸ್ಥೆಯು 2025-26ನೇ ಸಾಲಿನ ಜವಾಹರ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ತನ್ನ ಫಲಿತಾಂಶದ ಹೆಜ್ಜೆ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿದೆ. 29 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎಕ್ಸಲಂಟ್ ತನ್ನ ಗುಣಮಟ್ಟಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುವ ಮೂಲಕ ಮನೆ ಮಾತಾಗಿರುವ ಎಕ್ಸಲಂಟ್ ಸಂಸ್ಥೆಯು 2025-26ನೇ ಸಾಲಿನ ಜವಾಹರ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ತನ್ನ ಫಲಿತಾಂಶದ ಹೆಜ್ಜೆ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿದೆ. 29 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎಕ್ಸಲಂಟ್ ತನ್ನ ಗುಣಮಟ್ಟಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ.ಗಣೇಶ ಪಾಟೀಲ (ಶೇ.98.75), ಸಮರ್ಥ ಚವ್ಹಾಣ (ಶೇ.97.50), ಶ್ರೀಕರ ಗಗನಮಾಳಿ (ಶೇ.97.50), ಕಾರ್ತಿಕ ಸತ್ಯಪ್ಪನವರ (ಶೇ.97.50), ಸೃಜನ ಗೊರೆ (ಶೇ.97.50), ಕೃತಿಕೇಶ ಹೊಂಗಲ(ಶೇ.97.50), ಕರುಣಸಾಗರ ಬಾದವಾಡಗಿ (ಶೇ.96.25), ಸಾತ್ವಿಕ ಕೊಟ್ಟನಳ್ಳಿ (ಶೇ.96.25), ಅಕ್ಷಯ ಪೊಲೀಸಪಾಟೀಲ(ಶೇ.96.25), ವೈಭವ ಹಚಡದ (ಶೇ.96.25), ವೇದಾ ದಾನಮ್ಮನವರ (ಶೇ.96.25), ಶ್ರೇಯಸ್ ಅಂಗಡಿ (ಶೇ.96.25), ಗೌತಮ ಚವ್ಹಾಣ (ಶೇ.95.00), ಸೃಜನ ನಂದರಗಿ (ಶೇ.95.00), ಯಮನಪ್ಪ ಜಮ್ಮನಕಟ್ಟಿ(ಶೇ.95), ಆಶೀಶ ಹತ್ತಿಕಾಳ (ಶೇ.95), ವೈಭವ ಕಾಮಶೆಟ್ಟಿ(ಶೇ.95), ಸ್ಮೃತಿ ಮೂರಮಾನ(ಶೇ.95), ಪೃಥ್ವಿರಾಜ ಅಂಬಿಗೇರ(ಶೇ.93.75), ಪ್ರೇಮ ಕಾಸರ (ಶೇ.93.75), ಸನ್ನಿದಿ ಎಚ್ಚರಸ್ವಾಮಿಮಠ (ಶೇ.93.50), ಭೂಮಿ ವಾಲಿ (ಶೇ.92.50), ಭೂಮಿಕಾ ಕೇವಂಟಿಗಿ (ಶೇ.92.50), ವೈ.ಬಿ.ಧನುಶ (ಶೇ.92.50), ವಿರಾಟ.ಬಿ (ಶೇ.92.50), ಶ್ರೇಯಸ್ ದೊಡ್ಡಮನಿ (ಶೇ.92.50), ಮಹಾಂತಗೌಡ ಪಾಟೀಲ (ಶೇ.92.50), ಅಪೂರ್ವ ರಾಠೋಡ (ಶೇ.91.25), ಪ್ರದೀಪ ಡೊಕ್ಕಣ್ಣವರ (ಶೇ.85.00) ಪ್ರತಿಷತ ಅಂಕಗಳನ್ನು ಪಡೆದುಕೊಂಡು ಆಯ್ಕೆಯಾಗಿದ್ದಾರೆ. ಮಕ್ಕಳ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅವರು, ಮಕ್ಕಳ ಈ ಅಮೋಘ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಮಕ್ಕಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗಲಿ ಎನ್ನುವ ಉದ್ಧೇಶದಿಂದ ಪ್ರಾರಂಭವಾದ ಜವಾಹರ್ ನವೋದಯ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ. ಇಲ್ಲಿ ಶ್ರದ್ಧೆ ಹಾಗೂ ಸಮರ್ಪಣಾ ಭಾವ ಇದ್ದರೇ ಮಾತ್ರ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇಂದು ನಮ್ಮ ಕೋಚಿಂಗ್ ಕ್ಲಾಸ್‌ನಿಂದ ಮೊದಲ ಸುತ್ತಿನ ಆಯ್ಕೆಯಲ್ಲಿ 29 ವಿದ್ಯಾರ್ಥಿಗಳು ನೇರ ಪ್ರವೇಶ ಪಡೆದುಕೊಳ್ಳಲು ಅರ್ಹತೆ ಪಡೆದುಕೊಂಡಿದ್ದು ಸಂತಸದ ವಿಷಯ. ಹಾಗೆಯೇ ಇನ್ನೂ ಎರಡರಿಂದ ಮೂರು ಸುತ್ತಿನ ಆಯ್ಕೆ ನಡೆಯಲಿದ್ದು ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಇದೇ ರೀತಿಯ ಫಲಿತಾಂಶವನ್ನು ಸತತ ನೀಡಲು ನೆರವಾಗುತ್ತಿರುವ ನಮ್ಮ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಮಕ್ಕಳ ಭವಿಷ್ಯ ಉಜ್ವಲವಾಗಿರಲೇಂದು ಆಶಿಸುತ್ತೇನೆ.
-ಬಸವರಾಜ ಕೌಲಗಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು.