ಹಾಸನ ಕ್ಷೇತ್ರದಲ್ಲಿ 29368 ಯುವ ಮತದಾರರು

| Published : Apr 17 2024, 01:16 AM IST

ಸಾರಾಂಶ

ಏಪ್ರಿಲ್ ೨೬ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ಚುನಾವಣೆಯನ್ನು ಶಾಂತಿಯುತವಾಗಿ, ಸುವ್ಯವಸ್ಥೆಯಿಂದ, ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ 100% ಮತದಾನ ನಡೆಸಲು ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಏಪ್ರಿಲ್ ೨೬ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ಚುನಾವಣೆಯನ್ನು ಶಾಂತಿಯುತವಾಗಿ, ಸುವ್ಯವಸ್ಥೆಯಿಂದ, ಪಾರದರ್ಶಕವಾಗಿ, ನ್ಯಾಯಸಮ್ಮತವಾಗಿ 100% ಮತದಾನ ನಡೆಸಲು ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮನವಿ ಮಾಡಿದರು.ಮತದಾರರ ಸಂಖ್ಯೆ

ಒಟ್ಟು ಮತದಾರರು:12,36,610ಪುರುಷರು 8,62, 727ಮಹಿಳೆಯರು:8,28, 040

ನೂತನ ಯುವಮತದಾರರು:29368

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಚುನಾವಣಾ ಆಯೋಗವು ಲೋಕಸಭೆ ಸಾರ್ವತ್ರಿಕ ಚುನಾವಣೆ ೨೦೨೪ ಏಪ್ರಿಲ್ ೨೬ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೬ ರವರೆಗೆ ನಡೆಯವ ಮತದಾನ ಪ್ರಕ್ರಿಯೆಯ ಸಿದ್ಧತೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ನಿರ್ವಹಿಸಲಾಗಿರುತ್ತದೆ. ೧೬-ಹಾಸನ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ೦೭ ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ೧೨೭-ಕಡೂರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದಿನಾಂಕ:೦೪.೦೪.೨೦೨೪ ಹಾಗೂ ಪೂರಕ ಪಟ್ಟಿ-೨ ಒಳಗೊಂಡಂತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 12,36,610 ಮತದಾರರಿರುತ್ತಾರೆ.

ಫ್ಲೈಯಿಂಗ್ ಸ್ಕ್ವಾಡ್ ಮತ್ತು ಕಣ್ಗಾವಲು ಪಡೆ ವಿವರ: ಪ್ರತಿ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಟ 3 ತಂಡಗಳಲ್ಲಿ ಪಾಳಿ ಆಧಾರದ ಮೇಲೆ ದಿನದ ೨೪x೭ ಕರ್ತವ್ಯ ನಿರ್ವಹಿಸಲು ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನೇಮಿಸಲಾಗಿದೆ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊನೆಯ ೭೨ ಗಂಟೆಗಳಲ್ಲಿ ಹೆಚ್ಚಿನ ಕಾರ್ಯ ನಿರ್ವಹಿಸಲು ಹಾಗೂ ನಿಗಾ ನಿರ್ವಹಿಸಲು ಆಯಾ ವ್ಯಾಪ್ತಿಗಳಲ್ಲಿ ೨೪x೭ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿರುತ್ತದೆ.

ಚುನಾವಣಾ ಕಂಟ್ರೋಲ್ ರೂಂ ಸ್ಥಾಪನೆ:

ಮತದಾರರ ಸಹಾಯವಾಣಿ, ಕಾಲ್ ಸೆಂಟರ್೧೯೫೦ಟೋಲ್ ಫ್ರೀ, ಶುಲ್ಕ ರಹಿತ ಸಂಖ್ಯೆ (ಆದಾಯ ತೆರಿಗೆ ಇಲಾಖೆ)೧೮೦೦-೪೨೫-೨೧೧೫, ದೂರವಾಣಿ ಸಂಖ್ಯೆ (ಆದಾಯ ತೆರಿಗೆ ಇಲಾಖೆ)೦೮೦-೨೨೮೬೨೩೨೪, ಫ್ಯಾಕ್ಸ್ ಸಂಖ್ಯೆ೦೮೦-೨೨೮೬೬೯೧೬, ಮೊಬೈಲ್ ಸಂಖ್ಯೆ ೮೨೭೭೪ ೨೨೮೨೫ ವಾಟ್ಸಾಪ್ ಸಂಖ್ಯೆ ೮೨೭೭೪ ೧೩೬೧೪ ವಿವಿರ ನೀಡಬಹುದು ಎಂದು ಹೇಳಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಿಲ್ಲಾ ಮಾಹಿತಿ ಕೇಂದ್ರವೆಂಬ ಮತದಾರರ ಸಹಾಯವಾಣಿ ೧೯೫೦ ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ. ಈ ಕೇಂದ್ರಕ್ಕೆ ಮತದಾರರ/ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದ ಹಾಗೂ ಇತರೆ ಚುನಾವಣೆ ಸಂಬಂಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಮಾದರಿ ನೀತಿ ಸಂಹಿತೆ ಅನುಷ್ಠಾನ: ಭಾರತ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ನಂತರ ಮಾದರಿ ನೀತಿ ಸಂಹಿತೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

ಜಿಲ್ಲೆಯಲ್ಲಿ ದಿನಾಂಕ: ೧೬.೦೩.೨೦೨೪ ರಿಂದ ದಿನಾಂಕ ೧೫.೦೪.೨೦೨೪ ರವರೆಗೆ ವಶಪಡಿಸಿಕೊಂಡಿರುವ ನಗದು, ಲಿಕ್ಕರ್, ಡ್ರಗ್ಸ್, ಉಚಿತ ಉಡುಗೊರೆಗಳ ವಿವರ, ವಶಪಡಿಸಿಕೊಂಡಿರುವ ಪ್ರಮಾಣ ನಗದು ರೂ. ೧,೩೨,೮೦,೫೯೨, ವಶಪಡಿಸಿಕೊಂಡ ಮದ್ಯ ೯ ಕೋಟಿ ೭೬ ಲಕ್ಷ ರೂಗಳದಾಗಿದೆ. ಡ್ರಗ್ಸ್ /ನಾರ್ಕೋಟಿಕ್ಸ್ ೦.೧೨೭ಗ್ರಾಂ, ಉಚಿತ ಉಡುಗರೆಯಾಗಿ ಒಟ್ಟು ೫ ಲಕ್ಷ ಮೌಲ್ಯದಾಗಿದೆ.

ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ, ಭಾರತ ಚುನಾವಣಾ ಆಯೋಗವು ನೀಡಿರುವ ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿಯನ್ನು ಮತದಾನಾಧಿಕಾರಿಗಳಿಗೆ ತೋರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಯಾವುದೇ ಕಾರಣದಿಂದ ಸದರಿ ಗುರುತಿನ ಚೀಟಿಯು ಲಭ್ಯವಿಲ್ಲದಿದ್ದಲ್ಲಿ ಪರ್ಯಾಯವಾಗಿ ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂಬ ಅಂಶವನ್ನು ಮತದಾರರ ಗಮನಕ್ಕೆ ತರಲಾಗಿದೆ. ಇತ್ತೀಚೆಗೆ ನೋಂದಾಯಿತರಾದ ಯುವ ಮತದಾರರಿಗೆ ಮಾಹಿತಿ :

ಭಾರತ ಚುನಾವಣಾ ಆಯೋಗದ ವಿನೂತನ ಕಾರ್ಯಕ್ರಮದನ್ವಯ ಪ್ರಥಮ ಬಾರಿಗೆ ಮತದಾನದಲ್ಲಿ ಪಾಲ್ಗೊಳ್ಳುತ್ತಿರುವ ಜಿಲ್ಲೆಯ ಒಟ್ಟು 29368 ಯುವ ಮತದಾರರಿಗೆ “ಯುವಕರು ಚುನಾವಣೆಯಲ್ಲಿ ಭಾಗವಹಿಸದರೆ ಮಾತ್ರ ಪ್ರಜಾಪ್ರಭುತ್ವ ಬಲಗೊಳ್ಳಲು ಸಾಧ್ಯ” ಎಂಬ ಶೀರ್ಷಿಕೆಯಡಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳವರಿಂದ ಪ್ರತ್ಯೇಕ ವೈಯಕ್ತಿಕ ಪತ್ರ (ಠಿeಡಿsoಟಿಚಿಟiseಜ ಟeಣಣeಡಿs ಣo ಚಿಟಟ ಣhe ಜಿiಡಿsಣ ಣime voಣeಡಿs/ಥಿouಟಿg voಣeಡಿ), ೨) ಮತದಾರರ ಮಾರ್ಗದರ್ಶಿ (ಗಿoಣeಡಿ ಉuiಜe) ೩) ಮತದಾರರ ಮಾಹಿತಿ ಪತ್ರ (ಗಿoಣeಡಿ Iಟಿಜಿoಡಿmಚಿಣioಟಿ Sಟiಠಿ) ಗಳನ್ನು ದಿನಾಂಕ ೧೬.೦೪.೨೦೨೪ ರಿಂದ ದಿ: ೨೫.೦೪.೨೦೨೪ ರ ಒಳಗಾಗಿ ಹಂಚಿಕೆ ಮಾಡಲಾಗುವುದು.

ಶಾಂತ ರೀತಿಯಲ್ಲಿ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಮತ್ತು ಜನತೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಲು ಕೋರಿಕೆ ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳು ಉಚಿತ ಉಡುಗೊರೆ, ಆಮಿಷಗಳನ್ನು ತೋರುತ್ತಿರುವುದು, ನಗದು ಹಣ, ವಸ್ತುಗಳನ್ನು ಹಂಚುವುದು ಸೇರಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿರುವುದು ಕಂಡುಬಂದಲ್ಲಿ ಅದರ ವಿರುದ್ಧ ಕ್ರಮ ವಹಿಸಲು ಜಿಲ್ಲೆಯಲ್ಲಿ ೨೪x೭ ಕಂಟ್ರೋಲ್ ರೂಂ ಸ್ಥಾಪಿಸಲಾಗಿರುತ್ತದೆ. ಈ ಕೆಳಕಂಡ ದೂರವಾಣಿ ಸಂಖ್ಯೆಗಳು ಅಥವಾ ಇ-ಮೇಲ್ ಮೂಲಕ ನಮ್ಮೊಂದಿಗೆ ದೂರುಗಳನ್ನು ಹಂಚಿಕೊಳ್ಳಬಹುದಾಗಿದೆ. ದೂರುಗಳನ್ನು / ಮಾಹಿತಿಯನ್ನು ಹಂಚಿಕೊಳ್ಳಬಯಸುವ ವ್ಯಕ್ತಿಗಳ ಹೆಸರು ಮತ್ತು ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಸಮಸ್ತ ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಂಡು ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳಲು ವಿನಂತಿಸಿದೆ. ಇದೆ ವೇಳೆ ಅಪರ ಜಿಲ್ಲಾಧಿಕಾರಿ ಶಾಂತಲಾ ಇತರರು ಉಪಸ್ಥಿತರಿದ್ದರು.