ಮೈಸೂರಿಗೆ ದಸರಾ ಗಜಪಡೆ 2ನೇ ತಂಡ

| Published : Aug 26 2025, 01:04 AM IST

ಸಾರಾಂಶ

ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಗಜಪಡೆ 2ನೇ ತಂಡದಲ್ಲಿ 5 ಆನೆಗಳು ಕಾಡಿನಿಂದ ಆಗಮಿಸಿ ಮೈಸೂರು ಅರಮನೆ ಆವರಣದ ಆನೆ ಬಿಡಾರಕ್ಕೆ ಸೇರಿಕೊಂಡಿವೆ.

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಗಜಪಡೆ 2ನೇ ತಂಡದಲ್ಲಿ 5 ಆನೆಗಳು ಕಾಡಿನಿಂದ ಆಗಮಿಸಿ ಮೈಸೂರು ಅರಮನೆ ಆವರಣದ ಆನೆ ಬಿಡಾರಕ್ಕೆ ಸೇರಿಕೊಂಡಿವೆ.ದುಬಾರೆ ಆನೆ ಶಿಬಿರದಿಂದ ಗೋಪಿ, ಸುಗ್ರೀವ, ಹೇಮಾವತಿ, ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ ಮತ್ತು ಭೀಮನಕಟ್ಟೆ ಶಿಬಿರದಿಂದ ರೂಪಾ ಆನೆಯು ಆಗಮಿಸಿವೆ. ಇದರಲ್ಲಿ ಗೋಪಿ ಮತ್ತು ಸುಗ್ರೀವ ಆನೆ ಈಗಾಗಲೇ ದಸರೆಯಲ್ಲಿ ಪಾಲ್ಗೊಂಡಿವೆ. ಇನ್ನೂ ಆಜಾನುಬಾಹು ಶ್ರೀಕಂಠ, ರೂಪಾ ಮತ್ತು 11 ವರ್ಷದ ಹೇಮಾವತಿ ಆನೆಗಳು ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ.

ಈ ಆನೆಗಳ ಪೈಕಿ 56 ವರ್ಷದ ಆಜಾನುಬಾಹು ಶ್ರೀಕಂಠ ಹಾಗೂ ಸಣ್ಣ ವಯಸ್ಸಿನ ಹೇಮಾವತಿ ಜನರನ್ನು ಆಕರ್ಷಿಸುತ್ತಿವೆ. ಶ್ರೀಕಂಠ ಆನೆಯು 2.86 ಮೀಟರ್ ಎತ್ತರ, 5500 ಕೆ.ಜಿ. ತೂಕವಿದ್ದು, ಹೇಮಾವತಿ ಆನೆಯು 2.25 ಮೀಟರ್ ಎತ್ತರ, 2500 ಕೆ.ಜಿ. ತೂಕವಿದೆ.