ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೋಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಮಸೂತಿ ಗ್ರಾಮದ ಗುರುಸಂಗನಬಸವೇಶ್ವರ ಪ್ರೌಢ ಶಾಲೆಯ ಬಾಲಕಿಯರನ್ನು ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಅಯೋಧ್ಯೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೋಖೋ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಮಸೂತಿ ಗ್ರಾಮದ ಗುರುಸಂಗನಬಸವೇಶ್ವರ ಪ್ರೌಢ ಶಾಲೆಯ ಬಾಲಕಿಯರನ್ನು ತಾಪಂ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ ಸನ್ಮಾನಿಸಿದರು.ಈ ವೇಳೆ ಮಾತನಾಡಿದ ಅವರು, ಬಾಲಕಿಯರು ಖೋಖೋ ಪಂದ್ಯದಲ್ಲಿ ಕರ್ನಾಟಕ 2ನೇ ಸ್ಥಾನ ಪಡೆಯಲು ಬಾಲಕಿಯರಾದ ಶ್ರಾವಣಿ ಸಾಲಳ್ಳಿ ಹಾಗೂ ವರ್ಷಾ ಬಂಡಿವಡ್ಡರ ಸಾಧನೆ ಅಮೋಘವಾಗಿದೆ. ಮತ್ತು ಈ ಬಾಲಕಿಯರಿಗೆ ಆರ್ಥಿಕವಾಗಿ ಸಹಾಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಬಸವನ ಬಾಗೇವಾಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿಜಾಪುರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾವು ಹೆಚ್ಚು ಕ್ರೀಡೆಗೆ ಒತ್ತು ನೀಡಬೇಕು. ಏಕೆಂದರೆ ನಮ್ಮ ಆರೋಗ್ಯದ ಗುಟ್ಟು ಕ್ರೀಡೆಯಲ್ಲಿ ಅಡಗಿದೆ. ಈ ಮಕ್ಕಳ ಸಾಧನೆಯಿಂದ ನಮ್ಮ ಜಿಲ್ಲೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಸದಸ್ಯ ಮುದಕಣ್ಣ ಹೊರ್ತಿ, ಅನೀಲ ಗೊಳಸ೦ಗಿ. ಶಿಕ್ಷಕರಾದ ಹೂನಸಿ೦ಗ ರಾಠೋಡ, ಮಲ್ಲನಗೌಡ ಪಾಟೀಲ, ಗೌಡಪ್ಪ ಗರಸ೦ಗಿ, ಲಕ್ಷ್ಮಣ ಡೆಂಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.