ನಾಳೆಯಿಂದ ಹೊನ್ನಾಳಿಯಲ್ಲಿ 3 ದಿನ ನಾಟಕೋತ್ಸವ

| Published : Feb 02 2025, 11:47 PM IST

ಸಾರಾಂಶ

ಹೊನ್ನಾಳಿ ಅಭಿವ್ಯಕ್ತಿ ಕಲಾ ತಂಡದ 45ನೇ ವರ್ಷಾಚಾರಣೆ ಅಂಗವಾಗಿ ಅಭಿವ್ಯಕ್ತಿ ಕಲಾ ತಂಡ ಹಾಗೂ ಪಟ್ಟಣದ ಯುವಶಕ್ತಿ ಒಕ್ಕೂಟ, ಶ್ರೀ ಚನ್ನಪ್ಪ ಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್ ಹಿರೇಕಲ್ಮಠದ ಸಹಕಾರದಿಂದ ಬಳ್ಳಾರಿ ಜಿಲ್ಲೆಯ ಸಿರಿಗೇರೆಯ ಧಾತ್ರಿ ರಂಗ ಸಂಸ್ಥೆ ತಂಡದಿಂದ ಫೆ.4, 5 ಹಾಗೂ 6ರಂದು ಪ್ರತಿ ದಿನ ಸಂಜೆ 7.30 ಗಂಟೆಗೆ ಪಟ್ಟಣದ ಕನಕದಾಸ ಬಯಲು ರಂಗಮಂದಿರದಲ್ಲಿ ವಿವಿಧ ನಾಟಕ ಪ್ರದರ್ಶನ ನಡೆಯಲಿವೆ ಎಂದು ಅಭಿವ್ಯಕ್ತಿ ಕಲಾ ತಂಡ ಹೊನ್ನಾಳಿಯ ಸತ್ತಿಗೆ ಲೋಕೇಶ್ ಹೇಳಿದ್ದಾರೆ.

- ಶ್ರೀ ಕೃಷ್ಣ ಸಂಧಾನ, ಮೋಳಿಗೆ ಮಾರಯ್ಯ, ಸರಸ್ವತಿಯಾಗಲೊಲ್ಲೆ ನಾಟಕಗಳ ಪ್ರದರ್ಶನ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ಅಭಿವ್ಯಕ್ತಿ ಕಲಾ ತಂಡದ 45ನೇ ವರ್ಷಾಚಾರಣೆ ಅಂಗವಾಗಿ ಅಭಿವ್ಯಕ್ತಿ ಕಲಾ ತಂಡ ಹಾಗೂ ಪಟ್ಟಣದ ಯುವಶಕ್ತಿ ಒಕ್ಕೂಟ, ಶ್ರೀ ಚನ್ನಪ್ಪ ಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್ ಹಿರೇಕಲ್ಮಠದ ಸಹಕಾರದಿಂದ ಬಳ್ಳಾರಿ ಜಿಲ್ಲೆಯ ಸಿರಿಗೇರೆಯ ಧಾತ್ರಿ ರಂಗ ಸಂಸ್ಥೆ ತಂಡದಿಂದ ಫೆ.4, 5 ಹಾಗೂ 6ರಂದು ಪ್ರತಿ ದಿನ ಸಂಜೆ 7.30 ಗಂಟೆಗೆ ಪಟ್ಟಣದ ಕನಕದಾಸ ಬಯಲು ರಂಗಮಂದಿರದಲ್ಲಿ ವಿವಿಧ ನಾಟಕ ಪ್ರದರ್ಶನ ನಡೆಯಲಿವೆ ಎಂದು ಅಭಿವ್ಯಕ್ತಿ ಕಲಾ ತಂಡ ಹೊನ್ನಾಳಿಯ ಸತ್ತಿಗೆ ಲೋಕೇಶ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗ ಚಟುವಟಿಕೆಗಳ ಮೂಲಕ ರಂಗಭೂಮಿ ಕಲೆ ಜೀವಂತವಾಗಿ ಇರಿಸುವಲ್ಲಿ ಅಭಿವ್ಯಕ್ತಿ ಹೊನ್ನಾಳಿ ತಂಡ ತನ್ನದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. 1980ರಲ್ಲಿ ಪ್ರಾರಂಭಗೊಂಡು ಇಂದಿಗೆ 45 ವಸಂತಗಳನ್ನು ಕಳೆದಿದೆ. ಇದರೊಂದಿಗೆ ಯುವಶಕ್ತಿ ಒಕ್ಕೂಟ ಕೂಡ ಕೈ ಜೋಡಿಸಿಕೊಂಡು ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ರಂಗಕಲೆಗಳ ಪೋಷಿಸಲು ಶ್ರಮಿಸಿವೆ ಎಂದರು.

ಫೆ.4ರಂದು ಶ್ರೀ ಕೃಷ್ಠ ಸಂಧಾನ ಹಾಸ್ಯ ನಾಟಕ ಪ್ರದರ್ಶಿಸಲಿದ್ದು, ವಿ.ಎನ್.ಅಶ್ವಥ್ ರಚನೆ, ಭಿಮೇಶ್ ಎಚ್.ಎನ್. ದಾವಣಗೆರೆ ನಿರ್ದೇಶನವಿದೆ. ಫೆ.5ರಂದು ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನವಿದ್ದು, ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿದ್ದು, ಪರಿಕರ ಸಹಕಾರ ರಾಮಚಂದ್ರ ಶೇರೀಕಾರ್, ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ಜಗದೀಶ್ ಆರ್. ಜಾಣಿ ಅವರದಾಗಿದೆ ಎಂದರು.

3ನೇ ದಿನವಾದ ಫೆ.6ಂದು ಸಾವಿತ್ರಿ ಬಾಯಿ ಫುಲೆ ಅವರ ಅಕ್ಷರಯಾನ ಕುರಿತು ಹೇಳುವ ಸರಸತಿಯಾಗಲೊಲ್ಲೆ ನಾಟಕವಿದ್ದು, ಡಾ.ಎಂ. ಭೈರೇಗೌಡ ರಚನೆ, ಸಂಗೀತ ಉಮೇಶ್ ಪತ್ತಾರ್ ಮತ್ತು ಶುಭಕರ ಪುತ್ತೂರು, ಪರಿಕರ ಸಹಕಾರ ರಾಮಚಂದ್ರ ಶೇರೀಕಾರ್, ನಿರ್ದೇಶನ ನವೀನ್ ಭೂಮಿ ಅವರದಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೊಷ್ಠಿಯಲ್ಲಿ ಹಿರಿಯ ರಂಗಕರ್ಮಿ ಪ್ರೇಮ್ ಕುಮಾರ್ ಭಂಡಿಗಡಿ ಅವರು ರಂಗಕಲೆಗಳು ಹಾಗೂ ಅಭಿವ್ಯಕ್ತಿ ಕಲಾ ಬಳಗದ ಹುಟ್ಟು, ಬೆಳವಣಿಗೆ ಕುರಿತು ಮಾತನಾಡಿದರು.

ಯುವಶಕ್ತಿ ಒಕ್ಕೂಟಕ ಕೆ.ವಿ.ಚನ್ನಪ್ಪ, ವಕೀಲರಾದ ಮಡಿವಾಲ ಚಂದ್ರಪ್ಪ, ಕತ್ತಿಗೆ ನಾಗರಾಜ್, ಅಭಿವ್ಯಕ್ತಿ ತಂಡದ ಕಲಾವಿದರು, ಯುವಶಕ್ತಿ ಒಕ್ಕೂಟದ ಪದಾಧಿಕಾರಿಗಳು ಇದ್ದರು.

- - - -ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿಯಲ್ಲಿ ಅಭಿವ್ಯಕ್ತಿ ಕಲಾ ತಂಡದ ಸತ್ತಿಗೆ ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.