ಬೆಂಗಳೂರು ಭಕ್ತರಿಂದ ಏಳೂರು ಕರಿಯಮ್ಮಗೆ ₹3 ಲಕ್ಷ ಮೌಲ್ಯದ ಬೆಳ್ಳಿ ಕವಚ ಧಾರಣೆ

| Published : Apr 09 2024, 12:51 AM IST

ಬೆಂಗಳೂರು ಭಕ್ತರಿಂದ ಏಳೂರು ಕರಿಯಮ್ಮಗೆ ₹3 ಲಕ್ಷ ಮೌಲ್ಯದ ಬೆಳ್ಳಿ ಕವಚ ಧಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಬೆನ್ನೂರು ಸಮೀಪದ ಹಾಲಿವಾಣ ಗ್ರಾಮದ ಏಳೂರು ಕರಿಯಮ್ಮದೇವಿಗೆ ಸೋಮವಾರ ಬೆಂಗಳೂರು ಭಕ್ತರಿಂದ ₹3 ಲಕ್ಷ ಮೌಲ್ಯದ ಬೆಳ್ಳಿ ಕವಚವನ್ನು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಧಾರಣೆ ಮಾಡಲಾಯಿತು.

ಮಲೇಬೆನ್ನೂರು: ಇಲ್ಲಿಗೆ ಸಮೀಪದ ಹಾಲಿವಾಣ ಗ್ರಾಮದ ಏಳೂರು ಕರಿಯಮ್ಮದೇವಿಗೆ ಸೋಮವಾರ ಬೆಂಗಳೂರು ಭಕ್ತರಿಂದ ₹3 ಲಕ್ಷ ಮೌಲ್ಯದ ಬೆಳ್ಳಿ ಕವಚವನ್ನು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಧಾರಣೆ ಮಾಡಲಾಯಿತು. ಕಳೆದೆರಡು ದಿನಗಳ ಹಿಂದೆ ಕರಿಯಮ್ಮ ದೇವಿಗೆ ಮಾಂಗಲ್ಯ ಧಾರಣೆ, ಚಂಡಿಕಾ ಹೋಮ, ಕಂಕಣ ವಿಸರ್ಜನೆ, ಬೆಲ್ಲದ ಬಂಡಿ, ಓಕುಳಿ ಆಟವು ಗಣಮಕ್ಕಳ ಸಮ್ಮುಖದಲ್ಲಿ ನೆರವೇರಿತು. ಆದರೂ ಜಾತ್ರೆ ಸಂಪನ್ನಗೊಂಡರೂ ಭಕ್ತರ ದೇಣಿಗೆ ಕಾರ್ಯವು ಮುಂದುವರಿದಿದೆ. ಬೆಂಗಳೂರಿನ ಭಕ್ತರು ದೇವಿಗೆ ಬೆಳ್ಳಿ ಕವಚವನ್ನು ಮಾಡಿಸಿ, ಹೃದಯವಂತಿಕೆಯನ್ನು ತೋರಿಸಿದ್ದಾರೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ದೇವಾಲಯ ಆವರಣದಲ್ಲಿ ಅವರನ್ನು ಗೌರವಿಸಿದರು.

ಸಮಿತಿಯ ಮೋಹನ್, ಕುಮಾರಸ್ವಾಮಿ, ಮಹದೇವಪ್ಪ, ಶಿವಕ್ಳ ಆಂಜನೇಯ, ಸಿದ್ದನಗೌಡ, ಮಹೇಶಪ್ಪ, ಹೊಳಿಯಪ್ಪ, ಹಾಗೂ ಗ್ರಾಮಸ್ಥರು ಇದ್ದರು.

ವಾಗ್ವಾದ:

ಹಾಲಿವಾಣ ಗ್ರಾಮದಲ್ಲಿ ಎರಡು ಗುಂಪಿನ ಮಧ್ಯೆ ಕೆಲ ಯುವಕರು ವಾಗ್ವಾದ ನಡೆಸಿದ್ದು, ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಎರಡು ಗುಂಪಿನ ಒಟ್ಟು ೩೫ ಜನರ ಮೇಲೆ ಗುಂಪು ಘರ್ಷಣೆ ಕುರಿತ ಪ್ರಕರಣವನ್ನು ಮುಂಜಾಗ್ರತೆಯಾಗಿ ದಾಖಲಿಸಲಾಗಿದೆ.

- - - -ಚಿತ್ರಗಳು:

- ಬೆಳ್ಳಿ ಕವಚದಲ್ಲಿ ಕರಿಯಮ್ಮದೇವಿ. * (ಪ್ಯಾನೆಲ್‌ಗೆ ಫೋಟೋ-ಕ್ಯಾಪ್ಷನ್‌)

- ಮಲೇಬೆನ್ನೂರು ಸಮೀಪದ ಹಾಲಿವಾಣ ಗ್ರಾಮದ ಶ್ರೀ ಏಳೂರು ಕರಿಯಮ್ಮದೇವಿಗೆ ಬೆಳ್ಳಿಕವಚ ಧಾರಣೆ ಸೇವೆಗೈದ ಬೆಂಗಳೂರು ಭಕ್ತರನ್ನು ಉತ್ಸವ ಸಮಿತಿ ಅಧ್ಯಕ್ಷ ಎಸ್. ಜಿ. ಪರಮೇಶ್ವರಪ್ಪ ಅವರು ದೇವಾಲಯ ಆವರಣದಲ್ಲಿ ಗೌರವಿಸಿದರು. ಸಮಿತಿಯ ಮೋಹನ್, ಕುಮಾರಸ್ವಾಮಿ, ಮಹದೇವಪ್ಪ, ಶಿವಕ್ಳ ಆಂಜನೇಯ ಇತರರು ಇದ್ದರು.