ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಮುಧೋಳ ತಾಲೂಕಿನಲ್ಲಿ ಎಲ್ಲ ಕಾರ್ಖಾನೆಗಳು ಘೋಷಿಸಿದ ದರದಂತೆ ನಾವು ಪ್ರಸಕ್ತ ಹಂಗಾಮಿಗೆ ಪ್ರತಿ ಟನ್‌ಗೆ ೩ ಸಾವಿರ ರು. ಗಳಂತೆ ಬೆಲೆ ನೀಡುವುದಾಗಿ ಬೀಳಗಿ ಶುಗರ್ ಅಧ್ಯಕ್ಷ ಎಸ್.ಆರ್.ಪಾಟೀಲ ಘೋಷಿಸಿದರು.ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಿಲ್ಲೆಯ ಏಕೈಕ ಸಹಕಾರಿ ರಂಗದ ಸಕ್ಕರೆ ಕಾರ್ಖಾನೆ ತಿಮ್ಮಾಪೂರ ರೈತರ (ರನ್ನ) ಸಹಕಾರಿ ಸಕ್ಕರೆ ಕಾರ್ಖಾನೆ ಶುಕ್ರವಾರ ಪುನರಾರಂಭವಾಗಿದೆ. ೨೦೨೪-೨೫ ನೇ ಸಾಲಿನ ಕಾರ್ಖಾನೆ ಕ್ರಷಿಂಗ್ ಯಾರ್ಡ್‌ನಲ್ಲಿ ಕೇನ್ ಕ್ಯಾರಿಯರ್‌ಗೆ ಕಬ್ಬು ಹಾಕುವ ಮೂಲಕ ಕಬ್ಬು ನುರಿಸುವ ಹಂಗಾಮಿಗೆ ಮಾಜಿ ಸಚಿವ ಎಸ್.ಆರ್.ಪಾಟೀಲ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಜಯಕುಮಾರ ಸರನಾಯಕ, ಶಾಸಕ ಎಚ್.ವಾಯ್.ಮೇಟಿ ಸೇರಿ ಗಣ್ಯರು, ರೈತರು, ಶೇರುದಾರರು ಚಾಲನೆ ನೀಡಿದರು.
ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಸುವ ಮೂಲಕ ಕಾರ್ಖಾನೆ ಅಭಿವೃದ್ಧಿ ಹಾಗೂ ಬೆಳವಣೆಗೆಗೆ ಸಹಕರಿಸಬೇಕು. ಪ್ರಸಕ್ತ ಹಂಗಾಮಿನಲ್ಲಿ ೩ ಲಕ್ಷದಿಂದ ೪ ಲಕ್ಷ ಟನ್‌ವರೆಗೆ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಎಸ್.ಆರ್.ಪಾಟೀಲ ತಿಳಿಸಿದರು.ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ, ರೈತರ, ಶೇರುದಾರರ ಮತ್ತು ಕಾರ್ಮಿಕರ ಅನಕೂಲಕ್ಕಾಗಿ ಬಿಡಿಸಿಸಿ ಬ್ಯಾಂಕಿನಿಂದ ಸಹಾಯ, ಸಹಕಾರ ನೀಡಿದ್ದೇವೆ. ಸಚಿವರಾದ ಆರ್.ಬಿ.ತಿಮ್ಮಾಪೂರ, ಶಿವಾನಂದ ಪಾಟೀಲ, ರಾಜ್ಯ ಸರ್ಕಾರದ ಬೆಂಬಲದಿಂದ ಕಾರ್ಖಾನೆ ಪುನರ್ ಆರಂಭವಾಗಿದೆ. ಮುಂದಿನ ದಿನಮಾನಗಳಲ್ಲಿ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ಕಾರ್ಖಾನೆಯು ಉನ್ನತ ಮಟ್ಟಕ್ಕೆ ಕೊಂಡುಯ್ಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೀಳಗಿ ಶುಗರ್ ನಿರ್ದೇಶಕ ಎಚ್.ಎಲ್.ಪಾಟೀಲ ಮಾತನಾಡಿ, ಎರಡು ವರ್ಷಗಳಿಂದ ಬಂದ್ ಆಗಿದ್ದ ರೈತರು ಕಟ್ಟಿದ ಕಾರ್ಖಾನೆಯನ್ನು ಸಹಕಾರ ರಂಗದಲ್ಲಿ ಉಳಿಸಲು ಎಸ್.ಆರ್.ಪಾಟೀಲ ಪಣ ತೊಟ್ಟಿದ್ದಾರೆ. ಇದಕ್ಕೆ ಮುಧೋಳ ತಾಲೂಕಿನ ಜನತೆ ಅವರ ಕೈಬಲಪಡಿಸಬೇಕು. ಕಾರ್ಖಾನೆಗೆ ಹೆಚ್ಚಿನ ಇಳುವರಿ ಇರುವ ಕಬ್ಬು ಪೂರೈಸಿ ಕಾರ್ಖಾನೆ ಮುನ್ನಡೆಸಲು ಸಹಕಾರ ನೀಡಬೇಕು ಎಂದರು.ಶಾಸಕ ಮತ್ತು ಮಾಜಿ ಸಚಿವ ಎಚ್.ವಾಯ್.ಮೇಟಿ, ದಯಾನಂದ ಪಾಟೀಲ, ಕಾರ್ಖಾನೆ ವಿಶೇಷ ಅಧಿಕಾರಿ ಮತ್ತು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ವ್ಯವಸ್ಥಾಪಕ ನಿರ್ದೇಶಕ ರನ್ನ ಶುಗರ್ ಧನಂಜಯ್ಯ ಹಿರೇಮಠ, ಬಾಲಾಜಿ ಶುಗರ್ ನಿರ್ದೇಶಕ ರಾಹುಲ್ ನಾಡಗೌಡ, ಸುರೇಶಗೌಡ ಪಾಟೀಲ, ಮುಖಂಡರಾದ ರಾಜುಗೌಡ ಪಾಟೀಲ, ಸಂಜು ನಾಯ್ಕ, ಉದಯ ಸಾರವಾಡ, ಶಿವಾನಂದ ಉದಪುಡಿ, ಮಾಜಿ ಜಿಪಂ ಅಧ್ಯಕ್ಷ ಬಾಯಕ್ಕ ಮೇಟಿ, ದುಂಡಪ್ಪ ಲಿಂಗರಡ್ಡಿ, ವಿಠ್ಠಲ ತುಮ್ಮರಮಟ್ಟಿ, ವೆಂಕಣ್ಣ ಕಮಕೇರಿ, ಗಿರೀಶ ಲಕ್ಷಾಣಿ, ವೆಂಕಣ್ಣ ಗಿಡ್ಡಪ್ಪನವರ, ಮಾಜಿ ಜಿಪಂ ಅಧ್ಯಕ್ಷ ಎಲ್.ಕೆ.ಬಳಗಾನುರ, ಕೆ.ಆರ್.ಲಕ್ಕಂ, ಹೊಳಬಸು ದಂಡಿನ, ಬಸಪ್ಪ ಸೊನ್ನದ, ಆರ್.ಕೆ.ಪಾಟೀಲ, ವೆಂಕಣಗೌಡ ಪೋಲಿಸ್ ಪಾಟೀಲ, ಆನಂದ ಹಿರೇಮಠ, ಕಾರ್ಖಾನೆ ತಾಂತ್ರಿಕ ವಿಭಾಗದ ಅಧಿಕಾರಿ ದಿಕ್ಷೀತಲು, ಕಾರ್ಖಾನೆ ಮುಖ್ಯ ಎಂಜಿನಿಯರ್ ಆರ್.ಎನ್.ಪಾಟೀಲ, ರೈತರು, ಶೇರುದಾರರು, ಕಾರ್ಮಿಕ ವರ್ಗದವರು ಇದ್ದರು.
ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಿದ್ದೇವೆ. ರೈತರು ಉತ್ತಮ ಗುಣಮಟ್ಟದ ಕಬ್ಬು ಪೂರೈಸುವ ಮೂಲಕ ಕಾರ್ಖಾನೆ ಅಭಿವೃದ್ಧಿ ಹಾಗೂ ಬೆಳವಣೆಗೆಗೆ ಸಹಕರಿಸಬೇಕು.ಎಸ್.ಆರ್.ಪಾಟೀಲ ಮಾಜಿ ಸಚಿವರು, ಬೀಳಗಿ ಶುಗರ್ ಅಧ್ಯಕ್ಷರು