ಸಾರಾಂಶ
ಮಗಳ ಮದುವೆಗೆಂದು ಮಾಡಿಸಿದ್ದ ಬಂಗಾರದ ಒಡವೆಗಳು ಹಾಗೂ ಹಣವನ್ನು ಖದೀಮರು ಹಾಡುಹಗಲೇ ದೋಚಿರುವ ಘಟನೆ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಬ್ಬಿ
ಮಗಳ ಮದುವೆಗೆಂದು ಮಾಡಿಸಿದ್ದ ಬಂಗಾರದ ಒಡವೆಗಳು ಹಾಗೂ ಹಣವನ್ನು ಖದೀಮರು ಹಾಡುಹಗಲೇ ದೋಚಿರುವ ಘಟನೆ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿ ನಡೆದಿದೆ. ಪಟ್ಟಣದ ಮಾರುತಿ ನಗರ ಬಡಾವಣೆ ಒಂದನೇ ಕ್ರಾಸ್ ನಲ್ಲಿನ ಸರ್ವೇಯರ್ ಜಗದೀಶ್ ಅವರ ಮನೆಗೆ ಹಾಡುಹಗಲೇ ಕನ್ನ ಹಾಕಿರುವ ಕಳ್ಳರು ಅಂದಾಜು 30 ಲಕ್ಷ ರು.ಗಳ ಚಿನ್ನಾಭರಣ ಹಾಗೂ 3.50 ಲಕ್ಷ ನಗದು ದೋಚಿದ್ದಾರೆ. ಸರ್ವೇಯರ್ ಜಗದೀಶ್ ಹಾಗೂ ಪತ್ನಿ ಶಿಕ್ಷಕಿ ಸುಜಾತ ಬೆಳಿಗ್ಗೆ ಕೆಲಸಕ್ಕೆ ಬೀಗ ಹಾಕಿಕೊಂಡು ತೆರಳಿ ಕರ್ತವ್ಯ ಮುಗಿಸಿ ಸಂಜೆ ವೇಳೆ ಮನೆಗೆ ಬಂದಾಗ ಮನೆಯ ಬಾಗಿಲು ಬೀಗ ಮುರಿದಿರುವ ಕಳ್ಳರು, ಮನೆಯಲ್ಲಿದ್ದ 22 ಜೊತೆ ಓಲೆಗಳು, 5 ಸರಗಳು, 8 ಉಂಗುರಗಳು ಸೇರಿ ನಗದು 3.50 ಲಕ್ಷ ರು ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್, ಡಿವೈಎಸ್ಪಿ ಶೇಖರ್, ಸಿಪಿಐ ರಾಘವೇಂದ್ರ ಹಾಗೂ ಪಿಎಸ್ಐ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಖದೀಮರ ಸೆರೆಗೆ ಬಲೆ ಬೀಸಿದ್ದಾರೆ.