ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಕಾಂಗ್ರೆಸ್ ಸರ್ಕಾರ ಬಂದು ಒಂದುವರೆ ವರ್ಷದೊಳಗೆ ತಾಲೂಕಿನ ಅಭಿವೃದ್ಧಿಗಾಗಿ ೩೦೦೦ ಕೋಟಿ ಅನುದಾನ ತಂದ ಹೆಮ್ಮೆ ತಮಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಇಲ್ಲಿನ ಮಿನಿವಿಧಾನ ಸೌಧದ ಶಾಸಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ದೇವನಹಳ್ಳಿಯಿಂದ ಮಾಲೂರು ಮಾರ್ಗವಾಗಿ ಹೊಸೂರು ಗಡಿಯವರೆಗೆ ೧೨೩ ಕಿ.ಮೀ ೬ ಪಥದ ಇಂಡಸ್ಟ್ರಿಯಲ್ ಸಂಪರ್ಕ ಕಾರಿಡಾರ್ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಒಪ್ಪಿಗೆ ನೀಡಿದ್ದಾರೆ ಎಂದರು.
ಸಂಪರ್ಕ ರಸ್ತೆ ನಿರ್ಮಾಣಸಂಪರ್ಕ ರಸ್ತೆ ನಿರ್ಮಿಸಲು ಸಚಿವ ಸಂಪುಟ ಯೋಜನೆಗೆ ೩,೧೯೦ ಕೋಟಿ ಅನುದಾನ ಮೀಸಲಿಡಲಾಗಿದ್ದು, ರಸ್ತೆ ಕಾಮಗಾರಿಗೆ ೨,೦೩೨ ಕೋಟಿ ಹಾಗೂ ಭೂಸ್ವಾಧೀನಕ್ಕೆ ೧,೧೫೮ ಕೋಟಿ ಸಿಗಲಿದೆ ತಾಲೂಕಿನಲ್ಲಿ ೬೨ ಕಿಲೋಮೀಟರ್ ರಸ್ತೆ ಹಾಗೂ ಮೇಲ್ಸೇತುವೆಗೆ ೨೦೦೮ ಕೋಟಿ ವೆಚ್ಚವಾಗಲಿದ್ದು,ಯೋಜನೆಯಲ್ಲಿ ಸಿಂಹಪಾಲು ಅನುದಾನದ ಕಾಮಗಾರಿ ತಾಲೂಕಿನಲ್ಲಿ ನಡೆಯಲಿದೆ ಎಂದರು.
ಪಟ್ಟಣದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿ ಕಾಮಗಾರಿ ೨೧ ಕೋಟಿ ರೂಗಳಲ್ಲಿ ೨೧ ಕೋಟಿ ರೂಗಳಲ್ಲಿ ಕೆರೆ ಅಭಿವೃದ್ಧಿ ಸೇರಿದಂತೆ ಪಟ್ಟಣದ ಅಭಿವೃದ್ಧಿಗೆ ಪುರಸಭೆಗೆ ೫೦ ಕೋಟಿ ರೂಗಳಷ್ಟು ಅನುದಾನ ಬಿಡುಗಡೆಯಾಗಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿ ನಾರಾಯಣ್,ಪ್ರಾಧಿಕಾರದ ಅಧ್ಯಕ್ಷ ನಯೀಮ್ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ.,ಪುರಸಭೆ ಅಧ್ಯಕ್ಷೆ ಕೋಮಲನಾರಾಯಣ್ ಮಾತನಾಡಿದರು. ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಎಂ ವಿಜಯನರಸಿಂಹ,ದರ್ಕಾಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಇನ್ನಿತರಿದ್ದರು.