3000 ಹಾಫ್‌ ಹೆಲ್ಮೆಟ್‌, 70 ಸೈಲೆನ್ಸರ್‌ಗಳ ತಿಂದು ತೇಗಿದ ರೋಡ್‌ ರೋಲರ್‌!

| Published : Feb 02 2024, 01:00 AM IST

3000 ಹಾಫ್‌ ಹೆಲ್ಮೆಟ್‌, 70 ಸೈಲೆನ್ಸರ್‌ಗಳ ತಿಂದು ತೇಗಿದ ರೋಡ್‌ ರೋಲರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ನಗರದಲ್ಲಿ ವಶಪಡಿಸಿಕೊಂಡಿದ್ದ ಹಾಫ್‌ ಹೆಲ್ಮೆಟ್‌ಗಳು, ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಗುರುವಾರ ಸಂಜೆ ಸಂಚಾರ ಠಾಣೆ ಪೊಲೀಸರು ಗೋಪಿ ಸರ್ಕಲ್‌ನಲ್ಲಿ ರೋಡ್‌ ರೋಲರ್‌ ಹತ್ತಿಸಿ, ನಾಶಪಡಿಸಿದರು. ಗೋಪಿ ಸರ್ಕಲ್‌ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ, ಅವುಗಳ ಮೇಲೆ ರೋಡ್‌ ರೋಲರ್‌ ಹತ್ತಿಸಲಾಯಿತು. ಈ ಸಂದರ್ಭ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ್‌ಕುಮಾರ್‌ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ ಇದ್ದರು. ಕಾರ್ಯಾಚರಣೆ ವೀಕ್ಷಿಸಲು ಗೋಪಿ ಸರ್ಕಲ್‌ನಲ್ಲಿ ದೊಡ್ಡ ಸಂಖ್ಯೆಯ ಜನರು ಜಮಾಯಿಸಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದಲ್ಲಿ ಈ ಹಿಂದೆ ವಶಪಡಿಸಿಕೊಂಡಿದ್ದ ಹಾಫ್‌ ಹೆಲ್ಮೆಟ್‌ಗಳು ಹಾಗೂ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಗುರುವಾರ ಸಂಜೆ ಸಂಚಾರ ಠಾಣೆ ಪೊಲೀಸರು ಗೋಪಿ ಸರ್ಕಲ್‌ನಲ್ಲಿ ರೋಡ್‌ ರೋಲರ್‌ ಹತ್ತಿಸಿ, ನಾಶಪಡಿಸಿದರು. ಆ ಮೂಲಕ ಸ್ಕೂಟರ್‌, ಬೈಕ್‌ ಸವಾರರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆದರು.

ಸುಮಾರು 3 ಸಾವಿರ ಹಾಫ್‌ ಹೆಲ್ಮೆಟ್‌ಗಳು, 70 ಸೈಲೆನ್ಸರ್‌ಗಳನ್ನು ಸಂಚಾರ ಪೊಲೀಸರು ನಾಶಪಡಿಸಿದ್ದಾರೆ. ಗೋಪಿ ಸರ್ಕಲ್‌ನಲ್ಲಿ ಎಲ್ಲವನ್ನು ಸಾಲಾಗಿ ಜೋಡಿಸಿ, ಅವುಗಳ ಮೇಲೆ ರೋಡ್‌ ರೋಲರ್‌ ಹತ್ತಿಸಲಾಯಿತು. ಈ ಸಂದರ್ಭ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ್‌ಕುಮಾರ್‌ ಸೇರಿದಂತೆ ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆ ಸಿಬ್ಬಂದಿ ಇದ್ದರು. ಕಾರ್ಯಾಚರಣೆ ವೀಕ್ಷಿಸಲು ಗೋಪಿ ಸರ್ಕಲ್‌ನಲ್ಲಿ ದೊಡ್ಡ ಸಂಖ್ಯೆಯ ಜನರು ಜಮಾಯಿಸಿದ್ದರು.

ಹಾಫ್‌ ಹೆಲ್ಮೆಟ್‌ಗಳ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಸಾವಿರಾರು ಹಾಫ್‌ ಹೆಲ್ಮೆಟ್‌ಗಳನ್ನು ದ್ವಿಚಕ್ರ ವಾಹನ ಸವಾರರಿಂದ ವಶಕ್ಕೆ ಪಡೆದು ನಾಶಪಡಿಸಿದ್ದರು. ಇನ್ನು ಹಾಫ್‌ ಹೆಲ್ಮೆಟ್‌ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆಯೂ ದಾಳಿ ನಡೆಸಿದ್ದರು.

ಐಎಸ್‌ಐ ಗುರುತಿನ ಹೆಲ್ಮೆಟ್‌ ಧರಿಸುವಂತೆ ಪೊಲೀಸರು ಜಾಗೃತಿ ಮೂಡಿಸಿದ್ದರು. ಜೊತೆಗೆ ಬೈಕುಗಳಿಗೆ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಅಳವಡಿಸಿ, ತಿರುಗಾಡುತ್ತಿದ್ದವರಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದರು.

- - - -1ಎಸ್‌ಎಂಜಿಕೆಪಿ16:

ಶಿವಮೊಗ್ಗದ ಗೋಪಿ ವೃತ್ತದಲ್ಲಿ ಗುರುವಾರ ಸಂಜೆ ಸಂಚಾರ ಠಾಣೆ ಪೊಲೀಸರು ಹಾಫ್‌ ಹೆಲ್ಮೆಟ್‌ಗಳು, ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ರೋಡ್‌ ರೋಲರ್‌ ಹತ್ತಿಸಿ ನಾಶಪಡಿಸಿದರು.